ಎಜಿ&ಪಿ ಪ್ರಥಮ್ ನಿಂದ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತ ಅಣುಕು ಪ್ರದರ್ಶನ

ನಂದಿನಿ ಮೈಸೂರು

ಮೈಸೂರು:- ಎಜಿ& ಪಿ ಸಿಟಿ ಗ್ಯಾಸ್ ಪ್ರೈ ಲಿ., ಇವರ ಸಹಯೋಗದೊಂದಿಗೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತ ಅಣುಕು ಪ್ರದರ್ಶನವನ್ನು ನಡೆಸಲಾಯಿತು.

ಭಾರತೀಯ ನಗರ ಅನಿಲ ವಿತರಣಾ (ಸಿಜಿಡಿ) ಕಂಪನಿಯಾಗಿರುವ ಎಜಿ&ಪಿ ಪ್ರಥಮ್ ಇಂದು ಮೈಸೂರಿನ ಹೆಬ್ಬಾಳದಲ್ಲಿ ಮೂರನೇ ಹಂತ ಆಫ್ ಸೈಟ್ ಅಣಕು ಪ್ರದರ್ಶನವನ್ನು ಏರ್ಪಡಿಸಿತ್ತು. ಎಜಿ&ಪಿ ಪ್ರಥಮ್ ತಂಡವು ಮೈಸೂರು ಜಿಲ್ಲಾಡಳಿತಗಳು, ರಾಷ್ಟ್ರೀಯ ವಿಪತ್ತು ಕಾರ್ಯಪಡೆ(ಎನ್ ಡಿಆರ್ ಎಫ್), ಡಿಪಾರ್ಟ್ ಮೆಂಟ್ ಆಫ್ ಫ್ಯಾಕ್ಟರೀಸ್ ಬಾಯ್ಲರ್ಸ್ ಇಂಡಸ್ಟ್ರಿಯಲ್ ಸೇಫ್ಟಿ & ಹೆಲ್ತ್, ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆ, ಪೆÇಲೀಸ್ ಇಲಾಖೆ, ಆರ್ ಟಿಒ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಯುಪಿಎಚ್ ಸಿ) ತಂಡ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು (ಸಿಇಎಸ್ ಸಿಒಎಂ) ಇಲಾಖೆ, ಸಿಟಿ ಮುನ್ಸಿಪಲ್ ಕೌನ್ಸಿಲ್ (ಸಿಎಂಸಿ) ಹೂಟಗಹಳ್ಳಿ, ಮ್ಯೂಚ್ಯುವಲ್ ಎಐಡಿ ಪಾರ್ಟ್ನರ್ಸ್ ಇತ್ಯಾದಿ, ಆಟೋಮೋಟಿವ್ ಆಕ್ಸಲ್, ಬಿಇಎಂಎಲ್, ರಾಣೆ ಮದ್ರಾಸ್, ಜೆ.ಕೆ.ಟೈರ್ ಸಂಸ್ಥೆಗಳು ಈ ಪ್ರದರ್ಶನಕ್ಕೆ ಸಹಯೋಗ ನೀಡಿದ್ದವು.


ಅಣಕು ಪ್ರದರ್ಶನದ ಸನ್ನಿವೇಶ
ಈ ಪ್ರದರ್ಶನದ ಪ್ರಕಾರ, ಎಲ್‍ಎನ್ ಜಿ ಟ್ಯಾಂಕರ್ ವಿದ್ಯುತ್ ಕಂಬ ಮತ್ತು ಪೈಪ್ ಲೈನ್ ನಿರ್ಮಾಣ ಯಂತ್ರಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎನ್‍ಎನ್ ಜಿ ಟ್ಯಾಂಕರ್ ನ ಇಳಿಸುವ ಪಂಪ್ ಡಿಸ್ಚಾರ್ಜ್ ಲೈನ್ ಹಾನಿಗೊಳಗಾಗುತ್ತದೆ. ಈ ಘಟನೆಯಲ್ಲಿ 19 ಮಂದಿ ಗಾಯಗೊಳ್ಳುತ್ತಾರೆ. ಘಟನೆಯ ಪರಿಣಾಮ ಎಲ್‍ಎನ್ ಜಿ ಸೋರಿಕೆಗೆ ಕಾರಣವಾಗುತ್ತದೆ ಮತ್ತು 65 ಮೀಟರ್ ಗೂ ಅಧಿಕ ವಿಸ್ತೀರ್ಣದವರೆಗೆ ಗ್ಯಾಸ್ ಆವರಿಸಿದ್ದರ ಜೊತೆಗೆ ಬೃಹತ್ ಗಾತ್ರದ ಆವಿ ಮೋಡದ ರಚನೆಗೆ ಕಾರಣವಾಗುತ್ತದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಥಳದ ಮೇಲ್ವಿಚಾರಕರು ಯೋಜನಾ ಉಸ್ತುವಾರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಅದೇ ಸಮಯದಲ್ಲಿ ಸ್ಥಳದಲ್ಲಿದ್ದ ಜನರು ಗಾಯಾಳುಗಳಿಗೆ ವೈದ್ಯಕೀಯ ಸಹಾಯಕ್ಕಾಗಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಆರಂಭಿಸುತ್ತಾರೆ.
ಎಜಿ&ಪಿ ಪ್ರಥಮ್ ಉನ್ನತಾಧಿಕಾರಿಗಳ ತಂಡ ಲಭ್ಯವಿದ್ದ ಸಿಬ್ಬಂದಿಯ ಜೊತೆಗೆ ಘಟನಾ ಸ್ಥಳಕ್ಕೆ ಆಗಮಿಸಿದರು. ಪರಿಸ್ಥಿತಿಯ ಮೌಲ್ಯಮಾಪನದ ನಂತರ ಅವರು ವೈದ್ಯಕೀಯ ಮತ್ತು ಅಗ್ನಿಶಾಮಕ ಸೇವೆ ಬೆಂಬಲಕ್ಕಾಗಿ ಪರಸ್ಪರ ಸಹಾಯ ಪಾಲುದಾರರಿಂದ ನೆರವು ಪಡೆಯಲು ನಿಯಂತ್ರಣ ಕೊಠಡಿ ಮತ್ತು ಆರೋಗ್ಯ, ಸುರಕ್ಷತೆ, ಭದ್ರತೆ ಮತ್ತು ಪರಿಸರ ಇಲಾಖೆಗೆ ಕರೆ ಮಾಡಿದರು. ಚೀಫ್ ಇನ್ಸಿಡೆಂಟ್ ಕಂಟ್ರೋಲರ್ ಅವರಿಗೆ ಬಾಹ್ಯ ನೆರವಿನ ಬಗ್ಗೆ ಮಾಹಿತಿ ನೀಡಲಾಯಿತು. ಏಕೆಂದರೆ, ಸೋರಿಕೆಯಾದ ಅನಿಲದಿಂದ ಬೆಂಕಿ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದು, ಅದರಿಂದ ಜೀವ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ಮತ್ತು ಕ್ರಮವನ್ನು ಸನ್ನದ್ಧವಾಗಿಟ್ಟುಕೊಳ್ಳುವ ದೃಷ್ಟಿಯಿಂದ ವೈದ್ಯಕೀಯ ಸೇವೆ ಸಿಬ್ಬಂದಿಗೆ ಕರೆ ಮಾಡಲಾಯಿತು.
ಮಾಹಿತಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಚೀಫ್ ಇನ್ಸಿಡೆಂಟ್ ಕಂಟ್ರೋಲರ್ ಆಗಮಿಸಿದರು.

ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಎನ್ ಡಿಆರ್ ಎಫ್ ತಂಡವು ಘಟನಾ ಸ್ಥಳಕ್ಕೆ ಆಗಮಿಸಿ 65 ಮೀಟರ್ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸವನ್ನು ಆರಂಭಿಸಿತು. ಘಟನೆ ಬಗ್ಗೆ ಸುತ್ತಮುತ್ತಲಿನ ಜನರಿಗೆ ವಿವಿಧ ವಿಧಾನಗಳ ಮೂಲಕ ಜಾಗೃತಿ ಮೂಡಿಸಲಾಯಿತು. ಹೂಟಗಳ್ಳಿ ಸಿಎಂಸಿ ನೆರವಿನಲ್ಲಿ ಘಟನಾ ಸ್ಥಳಕ್ಕೆ ತೆರಳದಂತೆ ಜನರಲ್ಲಿ ಅರಿವು ಮೂಡಿಸಲಾಯಿತು. ಸೆಸ್ಕಾಂ, ಅಗ್ನಿಶಾಮಕ ಇಲಾಖೆ, ಪಿಎಚ್ ಸಿ ತಂಡ, ಜಿಲ್ಲಾಡಳಿತ. ಪೆÇಲೀಸ್ ಮತ್ತು ಆರ್ ಟಿಒ ಇಲಾಖೆ ಮತ್ತು ಸಿಎಂಸಿ ಸೇರಿದಂತೆ ಎಲ್ಲಾ ಇಲಾಖೆಗಳು ಕ್ಷಿಪ್ರವಾಗಿ ಕಾರ್ಯನಿರ್ವಹಣೆ ಮಾಡಿ ಪರಿಸ್ಥಿತಿಯನ್ನು ನಿಗದಿತ ಸಮಯದಲ್ಲಿ ನಿಯಂತ್ರಿಸಿದರು.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ *ಪ್ರಾದೇಶಿಕ ಮುಖ್ಯಸ್ಥ ಅರುಣ್ ನಾಯಕ್ ಅವರು ಮಾತನಾಡಿ, “ಇಂತಹ ಅಣಕು ಪ್ರದರ್ಶನಗಳು ಪರಿಸ್ಥಿತಿಯನ್ನು ಮುಂಚಿತವಾಗಿ ಮೌಲ್ಯಮಾಪನ ಮಾಡಲು ಮತ್ತು ನಿರ್ಣಯ ಮಾಡಲು ಸಹಾಯ ಮಾಡುತ್ತವೆ. ಇದೇ ರೀತಿಯ ಸನ್ನಿವೇಶದಲ್ಲಿ ಯಾವ ರೀತಿ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹೇಗೆ ಸನ್ನದ್ಧವಾಗಿರಬೇಕೆಂಬುದನ್ನು ಇದು ಖಚಿತಪಡಿಸುತ್ತದೆ. ಎಜಿ&ಪಿ ಪ್ರಥಮ್ ಸದಾ ಕಾಲ ತನ್ನ ಸಿಬ್ಬಂದಿ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಶ್ರಮಿಸುತ್ತದೆ ಮತ್ತು ಇಂತಹ ಅಣಕು ಪ್ರದರ್ಶನಗಳು ನಮಗೆ ಸಹಾಯ ಮಾಡುತ್ತವೆ. ನಾವು ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಾಚರಣೆಯ ಇತರೆ ಪ್ರದೇಶಗಳಲ್ಲಿಯೂ ಇಂತಹ ಪ್ರದರ್ಶನಗಳನ್ನು ನಡೆಸುತ್ತೇವೆ?? ಎಂದರು.

ಅಣಕು ಪ್ರದರ್ಶನದ ಉತ್ತಮ ಅಭ್ಯಾಸಗಳು, ಕಲಿಕೆ ಮತ್ತು ಒಳನೋಟಗಳನ್ನು ಚರ್ಚಿಸುವ ಮೂಲಕ ಪ್ರದರ್ಶನವನ್ನು ಅಂತ್ಯಗೊಳಿಸಲಾಯಿತು. ಈ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಪಾಲುದಾರರ ವ್ಯವಸ್ಥಿತಿ ಮತ್ತು ಸಂಘಟಿತ ಕಾರ್ಯಚಟುವಟಿಕೆಗೆ ಪ್ರದರ್ಶನ ಸಾಕ್ಷಿಯಾಯಿತು.
ಡಾ.ಕೆ.ವಿ.ರಾಜೇಂದ್ರ ಅಣುಕು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ರೀತಿಯ ರಾಸಾಯನಿಕ ವಿಪತ್ತು ಸಂಭವಿಸಿದಲ್ಲಿ ಇದನ್ನು ನಿಯಂತ್ರಿಸುವ ಬಗ್ಗೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವ ಕುರಿತಂತೆ ಅಣುಕು ಪ್ರದರ್ಶನ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿನ ಅತೀ ಹೆಚ್ಚು ಅಪಾಯಕಾರಿ ಕಾರ್ಯಾಚರಣೆ ಹೊಂದಿರುವ ಕಾರ್ಖಾನೆಗಳಲ್ಲಿ ಇಂತಹ ಅಣುಕು ಪ್ರದರ್ಶನಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾಯಕ್ರಮಗಳನ್ನು ಮಾಡಬೇಕು ಎಂದು ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಮಂಜುನಾಥಸ್ವಾಮಿ, ಕಾರ್ಖಾನೆಗಳ ಜಂಟಿ ನಿರ್ದೇಶಕರಾದ ಆರ್.ಕೆ.ಪಾರ್ಥಸಾರಥಿ, ಕಾರ್ಖಾನೆಗಳ ಉಪ ನಿರ್ದೇಶಕರಾದ ಎಂ.ಎಸ್. ಮಹದೇವ್, ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರಾದ ಉಮೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಅರುಣ್ ನಾಯ್ಕ, ಮೈಸೂರಿನ ವಿವಿಧ ಅತೀ ಅಪಾಯಕಾರಿ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *