ವಿವಿಧ ಸೇವಾ ಕಾರ್ಯ ಮೂಲಕ ಭೂಮಿಪುತ್ರ ಸಿ. ಚಂದನ್‌ಗೌಡ ಹುಟ್ಟುಹಬ್ಬ ಆಚರಿಸಿದ ರೈತರು

ನಂದಿನಿ ಮನುಪ್ರಸಾದ್ ನಾಯಕ್

 

ಮಣ್ಣಿನ ಸಂರಕ್ಷಣೆ ಕಾಯ್ದೆ ಜಾರಿಗೆ ಬರಲಿ
ಭೂಮಿಪುತ್ರ ಸಿ. ಚಂದನ್‌ಗೌಡ ಒತ್ತಾಯ

ಮಣ್ಣಿನ ಋಣ ತೀರಿಸೋಣ..
ರಾಸಾಯನಿಕ ಮುಕ್ತ ಬದುಕು ಕಂಡುಕೊಳ್ಳೋಣ

ಮೈಸೂರು: ಹೆತ್ತ ತಾಯಿಯಂತೆ ಹೊತ್ತ ತಾಯಿ ಭೂಮಿಯನ್ನು ಗೌರವಿಸೋಣ.ರಾಸಾಯನಿಕ ಮುಕ್ತ ಬದುಕು ಕಂಡುಕೊಳ್ಳುವ ಮೂಲಕ ಈ ಮಣ್ಣಿನ ಋಣ ತೀರಿಸೋಣ ಎಂದು ರೈತ ಕಲ್ಯಾಣ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಭೂಮಿಪುತ್ರ. ಸಿ.ಚಂದನ್‌ಗೌಡ ಅನ್ನದಾತರಿಗೆ ಕರೆ ನೀಡಿದರು.
ವಿವಿಧ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಶುಕ್ರವಾರ ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡ ಅವರು, ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ಶೀಘ್ರವೇ ಮಣ್ಣಿನ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತರುವಂತಾಗಬೇಕೆಂದು ಒತ್ತಾಯಿಸಿದರು.
ನಾನು ರೈತನ ಮಗನಲ್ಲ.ಉದ್ಯಮಿ ಎಂದೇ ಮಾತು ಆರಂಭಿಸಿದ ಅವರು,ರೈತರ ಸಂಕಷ್ಟಗಳನ್ನು ಕಣ್ಣಾರೆ ಕಂಡಿದ್ದು, ಉಸಿರಿರುವರೆಗೂ ಅವರಿಗಾಗಿ,ಅವರ ನೋವಿಹೆ ಸ್ಪಂದಿಸುತ್ತಾ,ಅವರಿಗೆ ಸಲ್ಲಬೇಕಿರುವ ಸೌಲಭ್ಯಗಳನ್ನು ದೊರಕಿಸಿಕೊಡಲು ಜೀವನವನ್ನು ಮುಡಿಪಾಗಿಡುತ್ತೇನೆ ಎಂದರು. ಕೊರೋನಾದಂತಹ ಮಾರಕ ಸ್ಥಿತಿ ಅನುಭವಿಸಿದ ನಾವು ಈಗಲೂ ಬದಲಾಗದಿದ್ದರೇ ಬಹು ಕಷ್ಟ ಎಂದರಲ್ಲದೇ, ಎಲ್ಲಾ ರೈತ ಬಾಂಧವರು ರಾಸಾಯನಿಕ ತ್ಯಜಿಸಿ, ಜೈವಿಕ ಕೃಷಿಯತ್ತ ಆಸಕ್ತಿ ತೋರುವ ಮೂಲಕ ಈ ಮಣ್ಣಿನ ಫಲವತ್ತತೆ, ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಅನ್ನದಾತರು ಕೂಡ ಆರ್ಥಿಕತೆಯ ಸಬಲತೆ ಹೊಂದಿ ಸಮಾಜದಲ್ಲಿ ಅವರೂ ಕೂಡ ಶ್ರೀಮಂತರ ಸಾಲಿನಲ್ಲಿ ಕಾಣಬೇಕೆಂಬುದು ನನ್ನ ಆಶಯವಾಗಿದ್ದು, ಇದಕ್ಕಾಗಿ ಹಗಲಿರುಳು ರೈತ ಕಲ್ಯಾಣ ಸಂಘ ಶ್ರಮಿಸಲಿದೆ ಎಂದು ಭರವಸೆ ನೀಡಿದರು.
ಇಂದು ರೈತರು ಬಹಳಷ್ಟು ಸಂಕಷ್ದದ ಸ್ಥಿತಿ ಅನುಭವಿಸುತ್ತಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲ ಎನ್ನುವುದು ಒಂದೆಡೆಯಾದರೇ, ಕಾಡು ಪ್ರಾಣಿಗಳ ಹಾವಳಿಗೆ ಬೆಳೆ ನಾಶವಾಗಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಫಸಲು ಕೈಗೆ ಬಾರದೇ ಕಣ್ಣೀರಿಡುತ್ತಿದ್ದಾರೆ.ಅಲ್ಲದೇ ಬೆಳೆ ನಾಶದ ಪರಿಹಾರಕ್ಕಾಗಿ ಅಲೆದು ಅಲೆದು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರದ ಅಗತ್ಯವಿದೆ.ಸರ್ಕಾರ, ಸಂಬಂಧಪಟ್ಟ ಸಚಿವರು,ಶಾಸಕರು, ಅಧಿಕಾರಿಗಳು ಸ್ಪಂದಿಸಿ, ಅನ್ನದಾತರ ಏಳಿಗೆಗೆ,ಅವರ ಆರ್ಥಿಕತೆ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ ಚಂದನ್ ಗೌಡ, ಪ್ರತಿ ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಯು ವಿಧಾನಸಭೆಯಂತಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಇದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ.ಇದಕ್ಕೆ ಕಾರಣ ರಾಸಾಯನಿಕ ಬಳಕೆ. ಇದು ಹೀಗೆ ಮುಂದುವರಿದರೇ ಯಾವುದೇ ಬೆಳೆ ಬೆಳೆಯಲು ಭೂಮಿ ಕೂಡ ಸಹಕರಿಸದೇ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ.
ಆದ್ದರಿಂದ ಈಗಲಾದರೂ ಅನ್ನದಾತರು ಎಚ್ಚೆತ್ತುಕೊಂಡು ಸಾವಯವ ಕೃಷಿಗೆ ಆದ್ಯತೆ ನೀಡಬೇಕೆಂದು ಕೋರಿದರು.
ಒಂದೇ ಬೆಳೆಗೆ ಅವಲಂಬಿತರಾಗದೇ ಇತರೆ ಬೆಳೆಗಳನ್ನು ಬೆಳೆಯುವಲ್ಲಿ ರೈತರು ಮುಂದಾಗಬೇಕು. ಆರ್ಥಿಕತೆಯಲ್ಲಿ ಸಾಧನೆ ತೋರಿ ಎಲ್ಲರಂತೆ ಸಮಾಜದಲ್ಲಿ ಬದುಕಬೇಕು.ಈ ನಿಟ್ಟಿನಲ್ಲಿ ರೈತ ಬಾಂಧವರು ಗಮನಹರಿಸಬೇಕು. ಹೊತ್ತ ತಾಯಿ ಭೂಮಿಗೆ ವಿಷವುಣಿಸುವುದನ್ನು ಬಿಟ್ಟು ಜೈವಿಕ ಕೃಷಿಯ ಮೂಲಕ ಭೂಮಿಯನ್ನು ಸಂರಕ್ಷಿಸಬೇಕೆಂದು ಕಳಕಳಿಯಿಂದ ಕೋರಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಹಾಗೂ ವಿವಿಧ ಭಾಗಗಳ ರೈತ ಬಾಂಧವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸರ್ಕಾರ ಶೀಘ್ರವೇ ಮಣ್ಣಿನ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತರಬೇಕು. ಎಲ್ಲಾ ರೈತ ಬಾಂಧವರು ರಾಸಾಯನಿಕ ತ್ಯಜಿಸಿ, ಜೈವಿಕ ಕೃಷಿಯತ್ತ ಆಸಕ್ತಿ ತೋರುವ ಮೂಲಕ ಮಣ್ಣಿನ ಫಲವತ್ತತೆ, ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು.
ಭೂಮಿಪುತ್ರ. ಸಿಚಂದನ್‌ಗೌಡ,
ಸಂಸ್ಥಾಪಕ ರಾಜ್ಯಾಧ್ಯಕ್ಷ
ರಾಜ್ಯ ರೈತ ಕಲ್ಯಾಣ ಸಂಘ

ವಿಧಾನಸಭೆ ಪ್ರವೇಶಿಸಲಿ
ಹಗಲಿರುಳು ರೈತರ ಹಿತಕ್ಕಾಗಿ,ಅವರ ಏಳಿಗೆಗಾಗಿ ತನುಮನ ಅರ್ಪಿಸಿ ಶ್ರಮಿಸುತ್ತಿರುವ ಭೂಮಿಪುತ್ರ ಸಿ.ಚಂದನ್ ಗೌಡ ಅವರು ವಿಧಾನಸಭೆ ಪ್ರವೇಶಿಸುವಂತಾಗಲಿ.
ಅನ್ನದಾತರ ಪರ ಮತ್ತಷ್ಟು ದನಿ ಎತ್ತುವ ಮೂಲಕ ದೇಶದ ಬೆನ್ನೆಲುಬು ಎಂದೇ ಕರೆಸಿಕೊಳ್ಳುವ ರೈತರ ಕಣ್ಣೀರೊರೆಸಿ ಅವರಿಗೆ ನ್ಯಾಯ ದೊರಕಿಸಿಕೊಡಲಿ ಎಂದು ಸ್ಥಳದಲ್ಲಿದ್ದ ರೈತರು ಆಶಿಸಿದರು.
ಚಂದನ್ ಗೌಡರ ಹುಟ್ಟುಹಬ್ಬದ ಅಂಗವಾಗಿ ಅವರ ನಿವಾಸಕ್ಕೆ ತೆರಳಿ ಶುಭಕೋರಿದ ಮೈಸೂರಿನ ವಿವಿಧ ಭಾಗಗಳಲ್ಲಿನ ರೈತ ಬಾಂಧವರು, ಸದಾ ರೈತರ ಬಗ್ಗೆ ಚಿಂತಿಸುವ, ಅವರ ನೋವಿಗೆ ಸ್ಪಂದಿಸುವ,ಕಷ್ಟ ಎನ್ನುವ ರೈತರ ಮನೆಬಾಗಿಲಿಗೆ ಹೋಗಿ ಅವರ ನೋವಿಗೆ ಪರಿಹಾರ ದೊರಕಿಸಿಕೊಡುವಲ್ಲಿ ವಿಶೇಷ ಆಸಕ್ತಿ ತೋರುವ ಚಂದನ್ ಗೌಡರು,ಶಾಸಕರಾಗಿ, ಸಚಿವರಾಗಿ ರೈತ ಕುಲದ ನಾಯಕರಾಗಿ ಹೊರಹೊಮ್ಮುವ ಮೂಲಕ ನಮ್ಮೆಲ್ಲರ ಆಶಾಕಿರಣವಾಗಲಿ ಎಂದು ಹಾರೈಸಿದರು.

Leave a Reply

Your email address will not be published. Required fields are marked *