ವಿಶೇಷಚೇತನರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ಭೂಮಿ ಪುತ್ರ ಚಂದನ್ ಗೌಡ

ಮೈಸೂರು:1 ಆಗಸ್ಟ್ 2022

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷರಾದ ಸಿ.ಚಂದನ್ ಗೌಡ ಅವರು ಸರಳ ಮತ್ತು ಸೇವಾ ಕಾರ್ಯಕ್ರಮಗಳ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

ಮೈಸೂರಿನ ತಿಲಕ್ ನಗರದಲ್ಲಿರುವ ವಿಶೇಷಚೇತನರ ಸರ್ಕಾರಿ ಶಾಲೆಯಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ತಿನ್ನಿಸುವುದರ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು.

ಚಂದನ್ ಗೌಡ ರವರು ಮಕ್ಕಳಿಗೆ ಉಪಹಾರ ಬಡಿಸಿದರು.ನಂತರ ಮಕ್ಕಳಿಗೆ ಅಗತ್ಯವಾದ ಮೆಡಿಕಲ್ ಕಿಟ್ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು ಈ ವರ್ಷದ ಹುಟ್ಟು ಹಬ್ಬವನ್ನ ಮರೆಯುವುದಿಲ್ಲ ದೇವರ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ಖುಷಿ ತಂದಿದೆ ಎಂದರು.

ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಹೇಮಂತ್ ಗೌಡ, ಅಭಿ,ಸಂಜಯ್, ವೇಣುವಿದ್ಯಾ,ರಾಜು,ಹರೀಶ್ ಗೌಡ,ಚಂದ್ರು, ಮೂರ್ತಿ,ನವೀನ್ ಗೌಡ,ಮೋಸಿನ್, ಈರಣ್ಣ,ದಾಸೇಗೌಡ,ಸಿದ್ದಲಿಂಗು
ವಸಂತ,ನಾಗರಾಜು,ನಾಗೇಶ್,ಪುನೀತ್, ಬೇಬಿ,ಅಜ್ಗರ್, ಶಿವಶಂಕರ್,ಚಂದ್ರು,ಲೋಕಿ,ಚನ್ನ ಮಾದನಾಯಕ,ರಘು,ಶಿವು,ಸುರೇಶ್,ಮೃತ್ಯುಂಜಯ,ಮಹೇಶ್,ಮಂಜುನಾಥ್, ಮಹದೇವು,
ಶೇಖರ್,ಕುಮಾರ್,ಪುಟ್ಟರಾಜು,ಮಂಜು,ನಂಜುಂಡಸ್ವಾಮಿ,ಸದಾನಂದ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *