ವರ್ಧಂತಿ ವಿಶೇಷ: ನಂದಿನಿ ಮೈಸೂರು
ಆಷಾಢ ಕೃಷ್ಣ ಪಕ್ಷ, ರೇವತಿ ನಕ್ಷತ್ರದಂದು ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತೋತ್ಸವ ಜರುಗಿತು.
ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ದೇವಿಯ ಉತ್ಸವ ಮೂರ್ತಿಯನ್ನು ಆಷಾಢ ಮಾಸದಲ್ಲಿ ಸ್ಥಾಪಿಸಿದ್ದರಿಂದ ಆ ದಿನವನ್ನು ಶ್ರೀ ಚಾಮುಂಡೇಶ್ವರಿ ವರ್ಧಂತಿ ಎಂದು ಆಚರಿಸಲು ಪ್ರಾರಂಭಿಸಲಾಯಿತು.ಅದರಂತೆಯೇ ಶ್ರೀ ಚಾಮುಂಡೇಶ್ವರಿ ವರ್ಧಂತಿಯನ್ನು ಧಾರ್ಮಿಕ ಶ್ರದ್ದೆಯಿಂದ ಆಚರಿಸಲಾಗುತ್ತಿದೆ.ಆಷಾಢ ಮಾಸದಲ್ಲಿ ರೇವತಿ ನಕ್ಷತ್ರದ ದಿನದಂದು ಪ್ರತಿ ವರ್ಷ ಶ್ರೀ ಚಾಮುಂಡೇಶ್ವರಿ ವರ್ದಂತಿ ನಡೆಯುತ್ತದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ರವರು ಮುಂಜಾನೆಯಿಂದಲೇ ವಿವಿಧ ಅಭಿಷೇಕ ನೆರವೇರಿಸಿದರು.
ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ,10 ಗಂಟೆಗೆ ಉತ್ಸವ ಆರಂಭವಾಯಿತು.ಶ್ರೀ ಚಾಮುಂಡೇಶ್ವರಿ ತಾಯಿಗೆ ಬಿಳಿ ಬಣ್ಣದ ಸೀರೆ ಉಡಿಸಲಾಗಿದ್ದು ಎಲ್ಲರ ಕಣ್ಮನ ಸೆಳೆಯಿತು.
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್,ತ್ರೀಶಿಕಾ ರವರು ಪೂಜೆಯಲ್ಲಿ ಭಾಗಿಯಾಗಿ ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಚಿನ್ನದ ಪಲ್ಲಕ್ಕಿಯೂ ದೇವಸ್ಥಾನದ ಸುತ್ತಾ ಒಂದು ಸುತ್ತು ಸಾಗಿತು.ಚಿನ್ನದ ಪಲ್ಲಕ್ಕಿ ಒಳಗೆ ಕುಳಿತಿದ್ದ ಅಮ್ಮನವರನ್ನ ಕಂಡ ಭಕ್ತರು ಜೈಕಾರ ಕೂಗಿ ಸಂಭ್ರಮಿಸಿದರು.ದೇವಿಯ ಜನದಿನವನು ಬೆಳಿಗೆಯಿಂದಲೇ ಪ್ರಸಾದ ವಿತರಿಸಲಾಯಿತು.
ಚಾಮುಂಡಿಬೆಟ್ಟದಲ್ಲಿ ರಾತ್ರಿ ದರ್ಬಾರ್ ಉತ್ಸವ 8 ಗಂಟೆಗೆ ನಡೆಯಲಿದೆ.ರಾತ್ರಿ 8 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ದರ್ಬಾರ್ ಉತ್ಸವ ನಡೆದ ಬಳಿಕ ಬರುವ ಭಕ್ತರಿಗೆ ದೇವರ ದರ್ಶನ ಮಾಡಿಸುವುದು ಪದ್ಧತಿಯಾಗಿದೆ.ಇನ್ನು ವಿಶೇಷ ಪೂಜೆ, ಹೋಮ ಹವನಗಳೊಂದಿಗೆ ದೇವಿಯ ಮೆರವಣಿಗೆಯನ್ನು ಮಾಡಲಾಗುತ್ತದೆ.
ವರ್ದಂತಿ ಅಂಗವಾಗಿ ದೇವಾಲಯದ ಸುತ್ತಾ ಹಾಗೂ ಗರ್ಭ ಗುಡಿ ಮುಂಭಾಗ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹೂವುಗಳ ಮಧ್ಯೆ ನಂದಿ ಚಿತ್ರ ಎಲ್ಲರ ಗಮನ ಸೆಳೆಯುತ್ತಿತ್ತು.
ಎಲ್ಲಾ ಖಾಸಗೀ ವಾಹನಗಳಿಗೆ ನಿರ್ಬಂಧಿಸಲಾಗಿತ್ತು. ಮೈಸೂರಿನ ಹೆಲಿಪ್ಯಾಡ್ ನಿಂದ ಬೆಟ್ಟಕ್ಕೆ ಉಚಿತ ಬಸ್ ಸೌಲಭ್ಯ ಒದಗಿಸಲಾಗಿತ್ತು.ಆಷಾಢ ಶುಕ್ರವಾರದಂದು ಮುಂಜಾನೆಯಿಂದ ರಾತ್ರಿಯವರೆಗೂ ಬಸ್ ವ್ಯವಸ್ಥೆ ಮಾಡಲಾಗುತ್ತಿತ್ತು.ಇಂದು ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆ ಬೆಳಗ್ಗೆ 9 ಗಂಟೆ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ದೇಶ,ರಾಜ್ಯ, ಹೊರ ರಾಜ್ಯ ,ಜಿಲ್ಲೆಗಳಿಂದ
ಲಕ್ಷಾಂತರ ಭಕ್ತರು ಆಗಮಿಸಿ ದೇವಿಯನ್ನ ಕಣ್ತುಂಬಿಕೊಂಡರು.