ನಂದಿನಿ ಮೈಸೂರು
9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನಕ್ಕೆ ಚಾಲನೆ : ಇಸ್ರೊ ಅಧ್ಯಕ್ಷ ಡಾ.ಎಸ್.ಸೋಮನಾಥ್
‘ಇಸ್ರೋ ಸಂಸ್ಥೆಯು ಇಂದು ಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ನೆರವಾಗುತ್ತಿದೆ ಇಸ್ರೊ ಅಧ್ಯಕ್ಷ ಡಾ.ಎಸ್.ಸೋಮನಾಥ್
*ಎಲ್ಲಾ ಬೆಳೆಗಳಿಗೂ ರಿಮೋಟ್ ಸೆನ್ಸಿಂಗ್ ವಿಧಾನ ವಿಸ್ತರಣೆ: ಇಸ್ರೊ ಅಧ್ಯಕ್ಷ ಡಾ.ಎಸ್.ಸೋಮನಾಥ್*
ಆಹಾರ ತಂತ್ರಜ್ಞಾನ ಉದ್ಯಮವು ಆಹಾರ ಸಂಗ್ರಹಣೆ ಮತ್ತು ಸಂಸ್ಕರಣೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಕಡಿಮೆ ವೆಚ್ಚದಲ್ಲಿ ಆಹಾರ ಧಾನ್ಯಗಳನ್ನು ಸಂರಕ್ಷಿಸುವ ವಿಧಾನವನ್ನು ನಾವು ಕಂಡುಕೊಳ್ಳಬೇಕಿದೆ. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಇಸ್ರೊ ಅಧ್ಯಕ್ಷ ಡಾ.ಎಸ್. ಸೋಮನಾಥ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು (ಸಿಎ್ಟಿಆರ್‌ಐ) ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ‘‘ಇಸ್ರೋ ಸಂಸ್ಥೆಯು ಇಂದು ಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ನೆರವಾಗುತ್ತಿದೆ. ಬೆಳೆಗಳಿಗೆ ಬರುವ ರೋಗಳನ್ನು ಅಂದಾಜಿಸುತ್ತಿದೆ. ಆ ಮೂಲಕ ಆಹಾರ ಭದ್ರತೆ ಹಾಗೂ ಬೆಳೆ ಇಳುವರಿ ಹೆಚ್ಚಿಸಲೂ ಸಹಕರಿಸುತ್ತಿದೆ,’’ ಎಂದು ಅಭಿಪ್ರಾಯ ಪಟ್ಟರು.
‘‘ಇಂದು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದ ಮೂಲಕ ಹೊಸ ಕ್ರಾಂತಿಕಾರಕ ಬದಲಾವಣೆ ಕಾಣುವಂತಾಗಿದೆ. ಬೆಳೆಯ ಸಲಿನ ಅವಧಿ ಹಾಗೂ ಇಳುವರಿ ಎಷ್ಟಿದೆ ಎಂಬುದನ್ನು ಉಪಗ್ರಹ ಕಳುಹಿಸಿದ ದತ್ತಾಂಶದ ಆಧಾರದ ಮೇಲೆ ಅಂದಾಜಿಸಲಾಗುತ್ತಿದೆ. 7 ಬೆಳೆಗಳ ಸಲು ಅವಧಿ ಹಾಗೂ ಇಳುವರಿಯನ್ನ ನಿರ್ಧರಿಸಲು ಇದು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ 20 ಬೆಳೆಗಳಿಗೆ ಈ ತಂತ್ರಜ್ಞಾನವನ್ನು ವಿಸ್ತರಣೆ ಮಾಡಲಾಗುವುದು,’’ ಎಂದು ಮಾಹಿತಿ ನೀಡಿದರು.
‘‘ ಪಾಶ್ಚಿಮಾತ್ಯ ದೇಶಗಳಂತೆ ಕೈಗಾರಿಕಾಗಳಿಗೆ ಪರಿಚಯಿಸುವ ಹೊಸ ಹೊಸ ಯಂತ್ರಗಳಿಂದ ಮಾನವನ ಉದ್ಯೋಗ ಕಸಿದುಕೊಳ್ಳಬಾರದು ಆದರೆ, ಈ ದೇಶದಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲಕ್ಕೂ ಉದ್ಯೋಗ ಸಿಗುವಂತೆ ನೋಡಿಕೊಳ್ಳಬೇಕು. ಇಸ್ರೋ ರಿಸೋರ್ಸ್‌ಸ್ಯಾಟ್ ಉಪಗ್ರಹಗಳು ಅಂತರ್ಜಲ ಹಂಚಿಕೆ, ಜಲ ಮರುಪೂರಣ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುತ್ತಿವೆ. ಅದರ ಆಧಾರದ ಮೇಲೆ ಕೊರೆಯಲಾದ ಶೇ 90ರಷ್ಟು ಕೊಳವೆ ಬಾವಿಗಳಲ್ಲಿ ನೀರು ಉಕ್ಕಿದೆ,’’ ಎಂದರು.
ಬೈಟ್ : ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್.
9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಭಾರತ ದೇಶದಲ್ಲಿ ಸ್ವಾತಂತ್ರ್ಯ ನಂತರ ಆಹಾರ ಭದ್ರತೆ ಕೊರತೆ ಕಂಡು ಬಂದಾಗ 1948 ರಲ್ಲಿ ಮೈಸೂರಿನ ಮಹಾರಾಜ ಶ್ರೀ ಜಯಚಾಮರಾಜ ಒಡಯರ್ ರವರು ಸುಂದರವಾದ ಚಲುವಂಭಾ ಅರಮನೆಯನ್ನು CFTRI ನೀಡಿರುವುದು ದೇಶದ ಜನರ ಕಾಳಜಿ ಮಹಾರಾಜರಿಗೆ ಹೆಚ್ಚು ಇತ್ತು ಎಂದರು.
ಕಾರ್ಯಕ್ರಮದಲ್ಲಿ ಸಿಎ್ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘದ (ಎಎ್ಎಸ್‌ಟಿಐ) ಅಧ್ಯಕ್ಷ ಡಾ.ಎನ್.ಭಾಸ್ಕರ್, ಡಿಎ್ಆರ್‌ಎಲ್ ಮುಖ್ಯಸ್ಥ ಡಾ.ಅನಿಲ್ ದತ್ ಸೆಮ್ವಾಲ್, ಸಮ್ಮೇಳನ ಸಂಯೋಜಕ ಡಾ.ತಾನಾಜಿ ಜಿ.ಕುದ್ರೆ, ಡಾ.ಸುರೇಶ್ ಡಿ.ಸಖರೆ ಇದ್ದರು.