ಮೈಸೂರು:10 ಜೂನ್ 2022
ನಂದಿನಿ ಮೈಸೂರು
ಮೈಸೂರಿನಲ್ಲಿ ಎಂಡಿಸಿಸಿಎ ಆಸೋಷಿಯೇಷನ್ ಉದ್ಘಾಟನೆಗೊಂಡಿದೆ.ಅಸೋಸಿಯೇಷನ್ ಸ್ಥಾಪಿಸಲಿ ಆದರೇ ಕಥೋಲಿಕ ಎಂಬ ಹೆಸರನ್ನು ಉಪಯೋಗಿಸುವಂತಿಲ್ಲ ಎಂದು ಕ್ಯಾಥೊಲಿಕ್ ಅಸೋಸಿಯೇಷನ್ ಆಫ್ ಮೈಸೂರು ಆಗ್ರಹಿಸಿದೆ.
ಮೈಸೂರಿನ ಕ್ಯಾಥೊಲಿಕ್ ಅಸೋಸಿಯೇಷನ್ ಆಫ್ ಮೈಸೂರು ಕಚೇರಿಯಲ್ಲಿ ಅಧ್ಯಕ್ಷ ಅಧ್ಯಕ್ಷ
ಅಲೆಗ್ಸಾಂಡರ್ ವಿನ್ಸೆಂಟ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು
ಧರ್ಮ ಕ್ಷೇತ್ರದ ಏಳಿಗೆ ಹಾಗೂ ಒಳಿತಿಗಾಗಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯನಿರ್ವಹಿಸುತ್ತಿದೆ.
ನಮ್ಮ ಅಸೋಸಿಯೇಷನ್ 1944 ರಲ್ಲಿ ಸ್ಥಾಪಿಸಲಾಗಿದೆ.ತುಂಬ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ.ಧರ್ಮಾಧ್ಯಕ್ಷ
ಬಿಷಪ್ ಅವರ ಅಂಡರ್‌ನಲ್ಲಿದ್ದೇವೆ. 6 ಸಾವಿರ ಸದಸ್ಯರಿದ್ದಾರೆ.ಸದಸ್ಯರಿಗೆ ಅನುಕೂಲವಾಗುವಂತೆ ಸಂಘ ನಡೆಸಿಕೊಂಡು ಬರುತ್ತಿದೆ ಎಂದರು.
ಅಸೋಸಿಯೇಷನ್ ವಿರುದ್ದ ವಾಟ್ಸಾಪ್ ಗಳಲ್ಲಿ ಕೆಟ್ಟ ಸಂದೇಶ ಹರಿದಾಡುತ್ತಿದೆ.ಅದಕ್ಕಾಗಿ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಮಾಡುತ್ತಿದ್ದೇವೆ.
ಕಥೋಲಿಕ ಎಂಬ ನಾಮಧೇಯದ ಅಡಿಯಲ್ಲಿ ಸಂಘಗಳನ್ನು ಮಾಡಿಕೊಂಡು ಜನರನ್ನು ದಿಕ್ಕುತಪ್ಪಿಸುತ್ತಾ ಆಡಳಿತಾತ್ಮಕ ವಿಷಯಗಳಲ್ಲಿ ಮೂಗು ತೂರಿಸುತ್ತಾ ಏನೋ ಇದರಿಂದಲೇ ಎಲ್ಲರೂ ಕೆಲಸ ಮಾಡುತ್ತಿರುವ ಹಾಗೇ ಪ್ರದರ್ಶಿಸಿಕೊಳ್ಳುತ್ತಿದ್ದಾರೆ. ಸಂಘ ಸ್ಥಾಪಿಸಿರುವ ಅಧ್ಯಕ್ಷ ಹಲವಾರು ಕ್ರಿಮಿನಲ್ ಮೊಕದ್ದಮೆಗಳಿವೆ.ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಗಳ ಮೂಲಕ ಪವಿತ್ರ ಧರ್ಮ ಸಭೆಯ ವಿರುದ್ಧ ಅಪಪ್ರಚಾರ ,ಅವಹೇಳನ ,ಆಧಾರರಹಿತ ನಿಂಧನೀಯ ಸುಳ್ಳು ಮಾಹಿತಿಗಳನ್ನು ಸ್ವತಃ ವಿಡಿಯೋ ಮಾಡಿ ಭಕ್ತಾಧಿಗಳ ಮನಸ್ಥಿತಿ ಮತ್ತು ವಿಶ್ವಾಸ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ.ಮಂಗಳೂರಿನ ಕ್ರೈಸ್ತ ಧರ್ಮ ವಿರೋಧಿಯನ್ನು ಕರೆಯಿಸಿ ಸಂಘವನ್ನು ಉದ್ಘಾಟಿಸಿದ್ದಾರೆ.ಧರ್ಮ ಸಭೆಯ ವಿರೋಧಿಗಳ ಬಗ್ಗೆ ಭಕ್ತಾಧಿಗಳು ಜಾಗೃತರಾಗಿರಬೇಕು.
ಇಂತಹ ಮಾತಿಗೆ
ಜನರು ಮರಳಾಗಬಾರದು ಎಂದು ಉಪಾಧ್ಯಕ್ಷ ಎಸ್.ಎಂ.ಆರೋಗ್ಯದಾಸ್ ಮನವಿ ಮಾಡಿದರು.
ಕಾರ್ಯದರ್ಶಿ ಪ್ರೇಮಾನಂದ ಡಿಮೆಲ್ಲೊ, ಖಜಾಂಚಿ ಗಬ್ರಿಯಲ್,ಜಕ್ರಿಯಾಸ್
ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.