ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳ ರಾಜೀ ಸಂಧಾನಕ್ಕಾಗಿ ರಾಷ್ಟ್ರೀಯ ಲೋಕ ಅದಾಲತ್

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದಂತೆ ದಿನಾಂಕ: 11.02.2023 ರಂದು ಮೈಸೂರು ನಗರವನ್ನೊಳಗೊಂಡಂತೆ ಜಿಲ್ಲೆಯಾದ್ಯಂತ ಕಕ್ಷಿಗಾರರಿಗೆ ಮತ್ತು ಜನ ಸಾಮಾನ್ಯರಿಗೆ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳಲು ಅನುಕೂಲ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,12,918 ಪ್ರಕರಣಗಳು ಬಾಕಿಯಿದ್ದು, ಅವುಗಳ ಪೈಕಿ 35,821 ಪ್ರಕರಣಗಳು ರಾಜಿಯಾಗಬಲ್ಲ ಪ್ರಕರಣಗಳೆಂದು ಗುರುತಿಸಲಾಗಿದ್ದು, ಅವುಗಳಲ್ಲಿ 20,753 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಕ್ರಮಕೈಗೊಳ್ಳಲಾಗಿರುತ್ತದೆ.

ನ್ಯಾಯಾಲಯದಲ್ಲಿ ಬಾಕಿರುವ ಪ್ರಕರಣಗಳಲ್ಲಿ ರಾಜಿ ಸಂಧಾನಕ್ಕಾಗಿ ಗುರುತಿಸಲಾದ 20,753 ಪ್ರಕರಣಗಳ ಪೈಕಿ 4,003 ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ 3,578 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಅಂದರೆ ಒಟ್ಟಾರೆಯಾಗಿ 7,581 ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿರುತ್ತದೆ. ಈ ಬಾರಿಯ ಲೋಕ್ ಅದಾಲತ್‌ನಲ್ಲಿ ವಿಶೇಷವಾಗಿ Traffic (Challan) Violation ಸಂಬಂಧಿಸಿದ ಪ್ರಕರಣಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 4,29,219 ಪ್ರಕರಣಗಳು ವಿಲೇವಾರಿಯಾಗಿದ್ದು, ಅವುಗಳಲ್ಲಿ ಮೈಸೂರು ನಗರದಲ್ಲಿ 4,28,197 ಪ್ರಕರಣಗಳು ವಿಲೇವಾಗಿಯಾಗಿರುತ್ತದೆ. ಸದರಿ ಪ್ರಕರಣಗಳಲ್ಲಿ ದಂಡದ ಮೊತ್ತ ರೂ.8,79,72,950/- ಗಳು ಸ್ವೀಕೃತವಾಗಿರುತ್ತದೆ.

ಈ ಬಾರಿ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಕೌಟುಂಬಿಕ ಕಲಹದ ಪ್ರಕರಣಗಳಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲ್ಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 37 ದಂಪತಿಗಳು ತಮ್ಮ ಮಧ್ಯದ ಕಲಹವನ್ನು ಮರೆತು ಲೋಕ್ ಅದಾಲತ್‌ ತೀರ್ಮಾನದಂತೆ ಜೊತೆಯಾಗಿ ಬಾಳ್ವೆ ಮಾಡುವುದಾಗಿ ತಿಳಿಸಿರುತ್ತಾರೆ.

ಈ ಕೆಳಗಿನಂತೆ ಇತರೆ ಪ್ರಕರಣಗಳ ವಿಲೇವಾರಿಯಾಗಿರುತ್ತದೆ.
Sl. No.
Nature of Case
No. of cases Disposal
Amount Collected

1.Traffic Challan
4,29,219
8,79,72,950-00

2.N.I. Act (ಚೆಕ್ ಬೌನ್ಸ್ ಪ್ರಕರಣಗಳು)
836
3,03,26,4791-00

3.MACT
(ಮೋಟಾರು ವಾಹನ ಪ್ರಕರಣಗಳು)
232
11,84,13,584-00

4.Matrimonial Dispute
(ಕೌಟುಂಬಿಕ ಕಲಹದ ಪ್ರಕರಣಗಳು)
130
71,38,000-00

ಕೌಟುಂಬಿಕ ಕಲಹದ ಪ್ರಕರಣಗಳಲ್ಲಿ 37 ಜೋಡಿಗಳು ಒಂದಾಗಿರುತ್ತವೆ.

5.Criminal Compoundable
213
53,74,600-00

6.Partition Suits
103
32,00,000-00

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟಾರೆಯಾಗಿ 4,35,778 ಪ್ರಕರಣಗಳು ತೀರ್ಮಾನವಾಗಿರುತ್ತದೆ. ಎಲ್ಲಾ ಪ್ರಕರಣಗಳಿಂದ ಒಟ್ಟು ಮೊತ್ತ ರೂ.85,50,41,931/- ಗಳು ಸರ್ಕಾರಕ್ಕೆ ಜಮೆಯಾಗಿರುತ್ತದೆ.

ಪತ್ರಿಕಾ ಘೋಷ್ಠಿಯಲ್ಲಿ ಶ್ರೀ ಜಿ.ಎಸ್. ಸಂಗ್ರೇಶಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು, ಶ್ರೀ ದೇವರಾಜ ಭೂತೆ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ವೇಲಾ ಖೋಡೆ, ಗಿರೀಶ್ ಭಟ್, ರೊಡಲ್ಫ್ ಪೆರೆರಾ ಮತ್ತು ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಂ.ಮಹಾದೇವಸ್ವಾಮಿ, ಉಪಾಧ್ಯಕ್ಷಾರದ ಶ್ರೀ ಪುಟ್ಟಸಿದ್ಧೇಗೌಡ ಉಪಸ್ಧಿತರಿದ್ದರು.

Leave a Reply

Your email address will not be published. Required fields are marked *