ರಿಲ್ಯಾಕ್ಸ್ ಮೂಡ್ನಲ್ಲಿ ಅಭ್ಯರ್ಥಿಗಳು

ಮೈಸೂರು:11 ಡಿಸೆಂಬರ್ 2021

ನಂದಿನಿ

ರಿಲ್ಯಾಕ್ಸ್ ಮೂಡ್ನಲ್ಲಿ ಅಭ್ಯರ್ಥಿಗಳು

ಲೆಕ್ಕಾಚಾರದಲ್ಲಿ ಪಕ್ಷದ ಮುಖಂಡರು

ಆಯಾ ಕ್ಷೇತ್ರವಾರು ಪಂಚಾಯಿತಿ ಸದಸ್ಯರ ಮೇಲೆ ನಿರ್ಣಯ

ಡಿಸೆಂಬರ್ ೧೫ರಂದೇ ಅಂತಿಮ ತೀರ್ಪು

ಬರೋಬ್ಬರಿ ಕಳೆದ ಹದಿನೈದು ದಿನಗಳಿಂದ ನಿದ್ದೆ ಬಿಟ್ಟು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರೊAದಿಗೆ ಸೇರಿ ಹಳ್ಳಿ ಹಳ್ಳಿ ಸುತ್ತಿದ ಮೂರು ಪಕ್ಷದ ಅಭ್ಯರ್ಥಿಗಳು ಇಂದು ರಿಲ್ಯಾಕ್ಸ್ ಮೂಡನಲ್ಲಿ ಇದ್ದಿದ್ದು ಕಂಡು ಬಂದಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯ ಬಳಿಕ ಮನೆಯಲ್ಲಿ ವಿಶ್ರಾಂತಿಗೆ ಜಾರಿದರು.
ಅಂತೆಯೇ ಬಿಜೆಪಿ ಅಭ್ಯರ್ಥಿ ಕೌಟಿಲ್ಯ ರಘು ಅವರು ಸಹ ತಮ್ಮ ಚಾಮುಂಡಿ ವಿಹಾರ ಕ್ರೀಡಾಂಗಣದ ತಮ್ಮ ನಿವಾಸದಲ್ಲಿಯೇ ವಿಶ್ರಾಂತಿ ಪಡೆದು, ಕೆಲವರ ಭೇಟಿಗಷ್ಟೇ ಸೀಮಿತವಾಗಿದ್ದರು. ಇನ್ನೂ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಅವರು ಸಹ ತಮ್ಮ ಶ್ರೀರಾಂಪುರದ ನಿವಾಸದಲ್ಲಿಯೇ ಇದ್ದು ಕಾಲ ಕಳೆದರು.

ಇನ್ನೂ ಇತ್ತಾ ಕ್ಷೇತ್ರವಾರು ಮತದಾನದವನ್ನು ಲೆಕ್ಕಚಾರ ಹಾಕಲಾರಂಭಿಸಿದ ಆಯಾ ಭಾಗದ ಮುಖಂಡರು ತಮ್ಮ ಭಾಗದಲ್ಲಿ ಯಾರಿಗೆ ಮತ ಬಂದಿರಬಹುದು. ಯಾರಿಗೆ ಮತ ನೀಡದಿರಬಹುದೆಂಬ ಅರಳಿಕಟ್ಟೆಯ ಲೆಕ್ಕಾಚಾರದಲ್ಲಿ ಇದ್ದಿದ್ದು ಕಂಡು ಬಂದಿತು.
೧೪ಕ್ಕೆ ತೀರ್ಪು: ಡಿ.೧೪ಕ್ಕೆ ವಿಧಾನಪರಿಷತ್ ಚುನಾವಣೆಯ ತೀರ್ಪು ಹೊರ ಬೀಳಲಿದ್ದು, ಸದಸ್ಯ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಸುಭದ್ರವಾಗಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳಿಂದ ಮತದಾನದ ಬಾಕ್ಸ್ಗಳನ್ನು ತಂದು ಇಡಲಾಗಿದ್ದು, ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಸಹ ನಿಯೋಜಿಸಲಾಗಿದೆ. ಸೋಮವಾರ ಬೆಳಿಗ್ಗೆ ೮ಗಂಟೆಗೆ ಅಭ್ಯರ್ಥಿಗಳು ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆದು ಮಧ್ಯಾಹ್ನದ ವೇಳೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಸಹ ಇದೆ.

Leave a Reply

Your email address will not be published. Required fields are marked *