ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 2022ರ ಕ್ಯಾಲೆಂಡರ್ ಬಿಡುಗಡೆ

ಮೈಸೂರು:17 ಡಿಸೆಂಬರ್ 2021

ನಂದಿನಿ

ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 2022ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಕ್ಲಬ್ಬಿನ ಅಧ್ಯಕ್ಷರಾದ ಸುರೇಶ್ ಗೌಡ ರವರು ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು ಕರೋನಾ ಬೇರೆಬೇರೆ ರೀತಿಯಲ್ಲಿ ಮರುಕಳಿಸುತ್ತಿರುವುದು ಎಂದ ಮುನ್ನೆಚ್ಚರಿಕೆಯ ಕ್ರಮವಾಗಿ ಈ ವರ್ಷ ವಿಜ್ರಂಭಣೆಯಿಂದ ಹೊಸ ವರ್ಷ ಆಚರಿಸುವುದನ್ನು ತಡೆಯಲಾಗದೆ ಬದಲಾಗಿ ಸದಸ್ಯರಿಗೆ ಸೌಲಭ್ಯಗಳನ್ನು ಕೊಡುವ ದೃಷ್ಟಿಯಿಂದ ಅಭಿವೃದ್ಧಿಯತ್ತ ಸಾಗೋಣ ಎಂದು ಅಭಿಪ್ರಾಯಪಟ್ಟರು.

ಇತ್ತೀಚಿಗೆ ನಿಧನರಾದ ಸುಮಾರು 50 ಮಂದಿ ಗೌರವಾನ್ವಿತ ಸದಸ್ಯರ ಕುಟುಂಬಕ್ಕೆ ತಲಾ 50000 ರೂಪಾಯಿಗಳನ್ನು ಕ್ಲಬ್ಬು ಬರಿಸಿದೆ ಎಂದರು, ಎಂತಹ ಸಂಕಷ್ಟದಲ್ಲೂ ನೌಕರರ ಹಿತವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ. ಉತ್ತಮವಾದ ವಾತಾವರಣ ಕಾಪಾಡುವಲ್ಲಿ ಕ್ಲಬ್ಬಿನ ಎಲ್ಲಾ ಪದಾಧಿಕಾರಿಗಳು ಸಮಾನ ಮನಸ್ಕರಾಗಿ ಇರುವುದಕ್ಕೆ ಕ್ಲಬ್ಬಿನ ಸದಸ್ಯರ ಹೆಚ್ಚಿನ ಸಹಕಾರ ಸಿಕ್ಕಿದೆ ಎಂದು ಬಣ್ಣಿಸಿದರು.

ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ವೆಂಕಟೇಶ್,ಕಾರ್ಯದರ್ಶಿಯಾದ ಬುಲೆಟ್ ನಾಗರಾಜು, ಖಜಾಂಚಿ ಪುಟ್ಟಸ್ವಾಮಿ,ಕ್ಲಬ್ಬಿನ ಸದಸ್ಯರು ಭಾಗಿಯಾಗಿದ್ದರು. 

Leave a Reply

Your email address will not be published. Required fields are marked *