ರಾಜಮನೆತನದವರಿಗೆ ಆಭರಣ ವ್ಯಾಪಾರಿಯಾಗಿರುವ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್‌ನಿಂದ ಇಂದಿನಿಂದ ಏ.16 ವರಗೆ ಆಭರಣ ಪ್ರದರ್ಶನ ಮತ್ತು ಮಾರಾಟ

ನಂದಿನಿ ಮೈಸೂರು

ರಾಜಮನೆತನದವರಿಗೆ ಆಭರಣ ವ್ಯಾಪಾರಿಯಾಗಿದ್ದ 150 ವರ್ಷ ಇತಿಹಾಸವುಳ್ಳ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್‌ನಿಂದ ಇದೀಗ ಮೈಸೂರಿನ ಜನತೆಗಾಗಿ ಅಸಾಧಾರಣ ಕರಕುಶಲತೆ ಮತ್ತು ವಿನ್ಯಾಸ ಹೊಂದಿರುವ ಆಭರಣ ಪ್ರದರ್ಶನ ಮತ್ತು ಮಾರಾಟ

– ಏಪ್ರಿಲ್‌ 14 ರಿಂದ ಏಪ್ರಿಲ್‌ 16, 2023 ರವರೆಗೆ ಹೋಟೆಲ್‌ ಸಂದೇಶ್‌ ದಿ ಪ್ರಿನ್ಸ್‌, ಮೈಸೂರಿನಲ್ಲಿ ಬೆಳಿಗ್ಗೆ 10:30 ರಿಂದ ರಾತ್ರಿ 8:00 ರವರೆಗೆ ವಿಶೇಷ ಆಭರಣ ಪ್ರದರ್ಶನ.
– ಸಾಂಪ್ರದಾಯಿಕ ಮತ್ತು ಸಮಕಾಲೀನ ಕಸೂತಿ ಸಂಗ್ರಹದ ವಿಶಿಷ್ಟ ಶ್ರೇಣಿಯೊಂದಿಗೆ ಅಸಾಧಾರಣ ಆಭರಣ ಪ್ರದರ್ಶನ.
– ಅಕ್ಷಯ ತೃತೀಯ ವಿಶೇಷ ಕೊಡುಗೆ – 1 ಕ್ಯಾರೆಟ್ ವಜ್ರ ಖರೀದಿಗೆ 2 ಗ್ರಾಂ ಚಿನ್ನದ ನಾಣ್ಯ ಮತ್ತು 1 ಗ್ರಾಂ ಚಿನ್ನ ಖರೀದಿಗೆ 3 ಗ್ರಾಂ ಬೆಳ್ಳಿ ನಾಣ್ಯ ಉಚಿತ. ಷರತ್ತುಗಳು ಅನ್ವಯ.

14.04.2023, ಮೈಸೂರು: ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಮೈಸೂರು ಜನತೆಗಾಗಿ ಮೂರು ದಿನಗಳ ವಿಶೇಷ ಆಭರಣ ಮಾರಾಟವನ್ನು ಪ್ರಸ್ತುಪಡಿಸುತ್ತಿದೆ. ಮೈಸೂರಿನಲ್ಲಿರುವ ಗ್ರಾಹಕರಿಗಾಗಿಯೇ ವಿಶೇಷವಾಗಿ ಸಂಗ್ರಹಿಸಲಾದ ಅತ್ಯಂತ ಆಕರ್ಷಕ ಆಭರಣಗಳನ್ನು ಇಂದಿನಿಂದ ಏ.16 , 2023 ರವರೆಗೆ ಹೋಟೆಲ್ ಸಂದೇಶ್‌ ದಿ ಪ್ರಿನ್ಸ್‌ನಲ್ಲಿ ಪ್ರದರ್ಶಿಸಲಿದೆ. ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹದ ಶುದ್ಧ ಚಿನ್ನ ಮತ್ತು ರತ್ನಗಳು ವಿಶಿಷ್ಠ ಶ್ರೇಣಿಯಲ್ಲಿ ಲಭ್ಯವಿದೆ.
ಪ್ರದರ್ಶನವನ್ನು ನಟಿ, ರೂಪದರ್ಶಿ ಮತ್ತು ಮಿಸ್‌ ಮೈಸೂರು 2013ರ ವಿಜೇತೆ ಶೃತಿ ನಂದೀಶ್‌ ಉದ್ಘಾಟಿಸಿದರು.
ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್, ನಮ್ಮ ಹೊಸ ಶ್ರೇಣಿಯ ಅಕ್ಷಯ ತೃತೀಯ ಸಂಗ್ರಹದೊಂದಿಗೆ ವ್ಯಕ್ತಿತ್ವಕ್ಕಾಗಿ ಅಪರೂಪದ ಆಭರಣಗಳನ್ನು ಪ್ರಸ್ತುತಪಡಿಸುತ್ತಿದೆ. ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಶ್ರೇಷ್ಠವಾಗಿದ್ದು ಕಲ್ಪನೆ, ಸೃಜನಶೀಲತೆಯೊಂದಿಗೆ ಸಂಪೂರ್ಣ ಶ್ರೇಣಿಯ ಆಭರಣ ಸಂಗ್ರಹಗಳಾಗಿವೆ.
ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ನ ಕಾರ್ಯಕಾರಿ ನಿರ್ದೇಶಕ ಚೈತನ್ಯ ವಿ.ಕೋತಾ ಮಾತನಾಡಿ, ನಮ್ಮ ಆಭರಣ ಸಂಗ್ರಹಗಳು ಸೊಬಗು ಮತ್ತು ಆಕರ್ಷಕ ಶೈಲಿಯ ಜೊತೆಗೆ ಸೂಕ್ಷ್ಮವಾದ ವಜ್ರಗಳೊಂದಿಗೆ, ವೈಡೂರ್ಯ, ಹವಳ, ಮುತ್ತುಗಳು, ಮಾಣಿಕ್ಯಗಳಂತಹ ಅಪರೂಪದ ರತ್ನಗಳೊಂದಿಗೆ ಆಕರ್ಷಕ ವಿನ್ಯಾಸಗಳೊಂದಿಗೆ ಕಾಣಿಸಿಕೊಂಡಿವೆ. ಈ ಸಂಗ್ರಹಣೆಯು ನಿಮ್ಮ ವ್ಯಕ್ತಿತ್ವದತ್ತ ಗಮನ ಸೆಳೆಯಲು ಮತ್ತು ನಿಮ್ಮ ಉಡುಪಿಗೆ ಸರಿ ಹೊಂದುವ ಆಭರಣಗಳನ್ನು ನೀಡುತ್ತದೆ ಎಂದರು.
ಅಕ್ಷಯ ತೃತೀಯ ಸಂಗ್ರಹ
ಕಾಲ ಕಳೆದಂತೆ ಭಾರತೀಯ ಆಭರಣಗಳು ಆಧುನಿಕ ಬದುಕಿನ ನೋಟಕ್ಕೆ ಸರಿಹೊಂದುವಂತೆ ಹೆಚ್ಚು ಸಮಕಾಲೀನವಾಗಿ ಮಾರ್ಪಟ್ಟಿವೆ. ನಾವು ಇವುಗಳನ್ನು ಪ್ರೀತಿಸುತ್ತಿರುವಾಗ, ಪ್ರತಿ ಹಬ್ಬದ ಋತುವಿನಲ್ಲಿ ಸಾಂಪ್ರದಾಯಿಕವಾಗಿ ಅತ್ಯುತ್ತಮವಾದ ಆಭರಣಗಳ ಅಗತ್ಯತೆ ಅಲ್ಲಗಳೆಯುವಂತಿಲ್ಲ. ಇದಕ್ಕಾಗಿ ಕತ್ತಿನ ಹಾರ, ಕಿವಿಯೋಲೆ, ಬಳೆಗಳು ಮತ್ತು ಹೆಚ್ಚಿನವುಗಳನ್ನು ಎಲ್ಲ ಹಬ್ಬಕ್ಕೂ ಮೆರಗು ನೀಡುವಂತಹ ವರ್ಣರಂಜಿತ ಮುತ್ತು ರತ್ನಗಳಿಂದ ಅಲಂಕರಿಸಲಾಗಿದೆ ಮತ್ತು ಸಂಕೀರ್ಣವಾದ ವಿವರಗಳೊಂದಿಗಿನ ಕಸೂತಿಯು ಆಯ್ದ ಋತುವಿಗೆ ಹೊಂದಿಕೆಯಾಗುವ ಅದ್ದೂರಿ ನೋಟವನ್ನು ನೀಡುತ್ತದೆ. ಸುಂದರವಾದ ಮತ್ತು ಬಾಳಿಕೆ ಬರುವಂತಹ ನಮ್ಮ ಆಭರಣಗಳನ್ನು ಭಾರತೀಯ ಸಂಸ್ಕೃತಿಯ ಪ್ರತಿ ಸಂದರ್ಭವನ್ನು ಸಂಭ್ರಮಿಸಲು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ.
ನಮ್ಮ ಹೊಸ ಶ್ರೇಣಿಯ ಯುಗಾದಿ ಸಂಗ್ರಹವನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ. ಅದು ಆಧುನಿಕ ಮಹಿಳೆಗೆ ಉತ್ಸಾಹಭರಿತ, ಆಕರ್ಷಕ ವಿನ್ಯಾಸಗಳನ್ನು ನೀಡುತ್ತದೆ, ನಿಮ್ಮ ಆಭರಣಗಳ ಬುಟ್ಟಿಗೆ ಇದು ಪರಿಪೂರ್ಣ ಸೇರ್ಪಡೆಯಾಗಿದೆ.
ಈ ತಾಣದಲ್ಲಿ ಪೂರ್ಣ ಸಂಗ್ರಹ ವೀಕ್ಷಿಸಿ: www.ckcjewellers.com/AkshayaTrithiya

 

ಮೈಸೂರು ಸಂಗ್ರಹ
ಇದು ಪಟ್ಟಣದ ಅತ್ಯಂತ ಶ್ರೇಷ್ಠ ಸ್ಫೂರ್ತಿಗಳಲ್ಲಿ ಒಂದಾಗಿದೆ. ಸೊಗಸಾದ, ಕರಕುಶಲ ಆಭರಣಗಳು ಒಡೆಯರ್ ರಾಜವಂಶದ ಅಧಿಕೃತ ಅರಮನೆ ಮತ್ತು ಮೈಸೂರು ಸಾಮ್ರಾಜ್ಯದಿಂದ ಸ್ಫೂರ್ತಿ ಪಡೆದಿವೆ. ಇಂಡೋ-ಸಾರ್ಸೆನಿಕ್, ಗೋಥಿಕ್, ರಜಪೂತ ಮತ್ತು ಮುಸ್ಲಿಂ ವಾಸ್ತುಶೈಲಿಯಿಂದ ಎರವಲು ಪಡೆದ ಶೈಲಿಗಳ ಮಿಶ್ರಣವನ್ನು ಹೊಂದಿರುವ ಈ ಐತಿಹಾಸಿಕ ಸ್ಥಳವು ಪರಿಪೂರ್ಣವಾದ ದೃಶ್ಯಾವಳಿಯಾಗಿದೆ.
ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಮೈಸೂರಿನ ಕಥೆಯನ್ನು ಹೇಳುವ ಮೈಸೂರು ಸಂಗ್ರಹವನ್ನು ಪ್ರಸ್ತುತಪಡಿಸುತ್ತಿದೆ.
ಅದ್ಭುತವಾದ ಮೈಸೂರು ಸಂಗ್ರಹವನ್ನು ಮುತ್ತುಗಳು, ಉತ್ತಮ ಗುಣಮಟ್ಟದ ವೈಡೂರ್ಯ, ಮಾಣಿಕ್ಯ ಮತ್ತು ಪಚ್ಚೆಗಳಿಂದ ಅಲಂಕೃತಗೊಳಿಸಲಾಗಿದ್ದು, ಸಂಕೀರ್ಣ ಮತ್ತು ಉತ್ಸಾಹಭರಿತ ಚಿನ್ನದ ರೂಪಗಳಲ್ಲಿ ಸಂಕ್ಷೇಪಿಸಲಾಗಿದೆ.
ಇದು ನಿಯಮಿತ ವಿಶೇಷ ಆವೃತಿಯಾಗಿದೆ.
ಆನ್‌ಲೈನ್‌ನಲ್ಲಿ ಖರೀದಿಸಲು: https://www.ckcjewellers.com/themysorecollection

 

ಅಪರೂಪದ ಸುಗಂಧಗಳು

ಭಾರತೀಯ ಸುಗಂಧ ದ್ರವ್ಯ ಮಾರುಕಟ್ಟೆಯು ತನ್ನ ವೈವಿಧ್ಯಮಯ ಪೋರ್ಟ್‌ಫೋಲಿಯೊದಲ್ಲಿ ಹೊಸ, ವಿಶಿಷ್ಟವಾದ ಬ್ರ್ಯಾಂಡ್ ಅನ್ನು ಹೊಂದಿದೆ. ಅಪರೂಪದ ಸುಗಂಧಗಳು. ಬೆಂಗಳೂರಿನ 150-ವರ್ಷದ ಪರಂಪರೆಯ ಐಷಾರಾಮಿ ಆಭರಣ ಬ್ರ್ಯಾಂಡ್ ಸಿ. ಕೃಷ್ಣಯ್ಯ ಚೆಟ್ಟಿ ಪ್ರಸ್ತುಪಡಿಸಿರುವ ಭಾರತದ ಏಕೈಕ ಪ್ರೀಮಿಯಂ, ಐಷಾರಾಮಿ ಸುಗಂಧ ಬ್ರಾಂಡ್ ಇದಾಗಿದೆ.
ನೈಜ 24-ಕ್ಯಾರಟ್ ಚಿನ್ನದಿಂದ ತುಂಬಿದ, ಅಪರೂಪದ ಸುಗಂಧಗಳು www.ckcjewellers.com/Rare-scents ತಾಣದಲ್ಲಿ ಆಡಮಾಸ್, ಔರಮ್, ಬೆರಿಲ್, ಕೊರುಂಡಮ್ ಮತ್ತು ಪ್ಲಾಟಿನಮ್ 5 ಸೊಗಸಾದ ಅವತರಣಿಕೆಗಳಲ್ಲಿ ಲಭ್ಯವಿದೆ.

ಅಪರೂಪದ ಸುಗಂಧಗಳ ಕುರಿತು ಪ್ರತಿಕ್ರಿಯಿಸಿರುವ ಸಿ.ಕೃಷ್ಣಯ್ಯ ಚೆಟ್ಟಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಚೈತನ್ಯ ವಿ ಕೋಥಾ, “ಐಷಾರಾಮಿ ಸುಗಂಧಗಳಂತಹ ಬ್ರ್ಯಾಂಡ್ ವಿಸ್ತರಣೆಯನ್ನು ನಮ್ಮ ಗ್ರಾಹಕರಿಗೆ ಅಪರೂಪದ ಮತ್ತು ಉತ್ತಮವಾದ ಸರಕುಗಳನ್ನು ಒದಗಿಸಲು ಸಿ.ಕೃಷ್ಣಯ್ಯ ಚೆಟ್ಟಿ ಐಷಾರಾಮಿ ಆಭರಣಗಳಿಗೆ ತಾರ್ಕಿಕ ವಿಸ್ತರಣೆ ಎಂದು ಪರಿಗಣಿಸುತ್ತದೆ. ವಿಶ್ವಾದ್ಯಂತ ಯಾವುದೇ ಬ್ರಾಂಡ್‌ನೊಂದಿಗೆ ಸ್ಪರ್ಧಿಸಬಹುದಾದ, ಉನ್ನತ-ಮಟ್ಟದ ಭಾರತೀಯ ಸುಗಂಧ ಕಂಪನಿಯನ್ನು ಸ್ಥಾಪಿಸಲು ನಾವು ಹೊರಟಿದ್ದೇವೆ” ಎಂದರು.
ಮೈಸೂರು ಗ್ರಾಹಕರಿಗೆ ಅಕ್ಷಯ ತೃತೀಯ ವಿಶೇಷ ಕೊಡುಗೆಯಾಗಿ 1 ಕ್ಯಾರೆಟ್ ವಜ್ರ ಖರೀದಿಗೆ 2 ಗ್ರಾಂ ಚಿನ್ನದ ನಾಣ್ಯ ಮತ್ತು 1 ಗ್ರಾಂ ಚಿನ್ನ ಖರೀದಿಗೆ 3 ಗ್ರಾಂ ಬೆಳ್ಳಿ ನಾಣ್ಯ ಉಚಿತ. ಕೊಡುಗೆ 14.04.2023 ರಂದು ಪ್ರಾರಂಭವಾಗುತ್ತದೆ ಮತ್ತು 16.04.2023 ರಂದು ಕೊನೆಗೊಳ್ಳುತ್ತದೆ. ಷರತ್ತುಗಳು ಅನ್ವಯ.

Leave a Reply

Your email address will not be published. Required fields are marked *