ಯಾವುದೇ ಕುರುಹು ಸಿಕ್ಕಿಲ್ಲ ಹುಸಿ ಬಾಂಬ್ ಬೆದರಿಕೆ ಕರೆ:ಡಿಸಿಪಿ ಪ್ರದೀಪ್ ಗುಂಟಿ

33 Views

 

ಮೈಸೂರು:22 ಸೆಪ್ಟೆಂಬರ್ 2021

*ನ@ದಿನಿ*

ಮೈಸೂರು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆ ಡಿಸಿಪಿ ಪ್ರದೀಪ್ ಗುಂಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬೆಳಗ್ಗೆ
ಪತ್ರದ ಮೂಲಕ ಬಾಂಬ್ ಕರೆ ಬಂದಿದೆ.ಕರೆ ಹಿನ್ನಲೆ ಸಿಬ್ಬಂದಿಗಳನ್ನು ಕಚೇರಿಯಿಂದ ಹೊರಗೆ ಕಳುಹಿಸಿದ್ದೇವೆ.ಬಾಂಬ್ ಸ್ಕ್ವಾಂಡ್ ಮತ್ತು ಪೋಲಿಸರಿಂದ ಕಚೇರಿ ತಪಾಸಣೆ ನಡೆಸಿದ್ದೇವೆ.
ಪ್ರಾಥಮಿಕ ಹಂತದಲ್ಲಿ ಯಾವುದೇ ಕುರುಹು ಸಿಕಿಲ್ಲ.
ಇದುವರೆಗೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ*
ಪೊಲೀಸರಿಗೆ ನೇರವಾಗಿ ಬಾಂಬ್ ಇರಿಸಿರೋದಾಗಿ ಪತ್ರ ಕಳಿಸಿದ್ದಾರೆ .ಬಾಂಬ್ ಕರೆಯನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ.ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ.ಸಿಸಿಟಿವಿ ಪರಿಶೀಲನೆಗೂ ಮುಂದಾಗಿದ್ದೇವೆ.ಇದು ಹುಸಿ ಬಾಂಬ್ ಕರೆ ಇರಬಹುದು.ಆದರೂ ತನಿಖೆ ಮುಂದುವರೆಸಲಿದ್ದೇವೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published.