ನಂದಿನಿ ಮೈಸೂರು
ಕಾಲೇಜು ಹಾಗೂ ಜಿಲ್ಲಾ ಮಟ್ಟದ ಸ್ಪರ್ದೇ ,ಅಂತರ ಜಿಲ್ಲಾ ಮಟ್ಟದ ದೇಹಧಾರ್ಢ್ಯ ಮತ್ತು ಫಿಟ್ನೆಸ್ ಸ್ಪರ್ಧೆ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ದುಷ್ಚಟ್ಟಗಳಿಂದ ದೂರವಾಗಿ ಉತ್ತಮ ಆರೋಗ್ಯ ಕಾಪಾಡಲು ಫಿಟ್ನೆಸ್ ಉಪಯೋಗವಾಗಲಿದೆ. ಆದ್ದರಿಂದ ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲಾ ದೇಹಧಾರ್ಢ್ಯ ಮತ್ತು ಫಿಟ್ನೆಸ್ ಸಂಸ್ಥೆ, ಉತ್ತಮ ಕರ್ನಾಟಕ ದೇಹಧಾರ್ಢ್ಯ ಮತ್ತು ಫಿಟ್ನೆಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಜ.22 ರಂದು ಟೌನ್ ಹಾಲ್ ನಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.ಮೊದಲಿಗೆ ಕಾಲೇಜು ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ಶ್ರೀ ನಂತರ ಮಿಸ್ಟರ್ ಮೈಸೂರು ತದನಂತರ ಕಲ್ಚರಲ್ ಸಿಟಿ ಕಾರ್ಯಕ್ರಮ ನಡೆಯಲಿದೆ.ದೇಹದಾರ್ಢ್ಯ
ಸ್ಪರ್ದೇಯಲ್ಲಿ ಭಾವಹಿಸುವ ಸ್ಪರ್ಧಿಗಳಿಗೆ ಎತ್ತರ ತಪಾಸಣೆ ಮಾಡಲಿದ್ದೇವೆ.ನಂತರ ನಾಲ್ಕು ವಿಭಾಗದಲ್ಲಿ ಸ್ಪರ್ದೇ ನಡೆಯಲಿದೆ.
ಸುಮಾರು 100 ರಿಂದ 150 ಸ್ಪರ್ದಿ ಗಳು ಭಾಗವಹಿಸುವ ನಿರೀಕ್ಷೆ ಇದೆ.ಪ್ರವೇಶ ಶುಲ್ಕ 300 ರೂಗಳು ಇರಲಿದೆ.ಸ್ಪರ್ದೇಯಲ್ಲಿ ಗೆದ್ದವರಿಗೆ ಟ್ರೋಫಿ,ಕ್ಯಾಶ್ ಪ್ರೈಸ್, ಪ್ರಮಾಣಪತ್ರ ನೀಡಲಾಗುವುದು.ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ
ಎಂದು ಸ್ಪರ್ದೇ ಕುರಿತು ಸಂಸ್ಥೆಯ ಕಾರ್ಯದರ್ಶಿ
ಮಂಜುನಾಥ್ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ
ಅಧ್ಯಕ್ಷ ಮೊಹಮದ್ ಆಸಿಂ,ಪ್ರಧಾನ ಕಾರ್ಯದರ್ಶಿ ನಾಗಭೂಷಣ್,ಅವಿನಾಶ್,ಸತೀಶ್,ನಿತೀಶ್ ಶೆಟ್ಟಿ,ಚಂದನ್,ಬಸವರಾಜು,ಶಂಕರ್,ದಿಲೀಪ್ ಹಾಜರಿದ್ದರು.
ಹೆಚ್ಚಿನ ಮಾಹಿತಿಗಾಗಿ ಮಂಜುನಾಥ್ 7204873915 ಸಂಪರ್ಕಿಸಬಹುದಾಗಿದೆ.