ನಂದಿನಿ ಮೈಸೂರು
ಆಡಳಿತ ಪಕ್ಷದ ನಾಯಕರಾಗಿ ಮವಿ ರಾಮಪ್ರಸಾದ್
ಇಂದು ನಡೆದ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಮಹಾಪೌರರು ಘೋಷಿಸಿದರು.
ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿರುವುದರಿಂದ ಆ ಪಕ್ಷದ ಅಧ್ಯಕ್ಷರು ಹಾಗೂ ಶಾಸಕರಾದ ಟಿ ಎಸ್ ಶ್ರೀವತ್ಸ ರವರು ಮಹಾಪೌರರಿಗೆ ಪತ್ರ ಬರೆದು ಮ ವಿ ರಾಮಪ್ರಸಾದ್ ಅವರನ್ನು ಆಡಳಿತ ಪಕ್ಷದ ನಾಯಕರಾಗಿ ಮಾಡಬೇಕೆಂದು ತಿಳಿಸಿರುತ್ತಾರೆ.
ಮ ವಿ ರಾಮಪ್ರಸಾದ್ ರವರು 55ನೇ ವಾರ್ಡಿನ ನಗರಪಾಲಿಕೆ ಸದಸ್ಯರಾಗಿದ್ದು ಮೂರು ಬಾರಿ ನಗರಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಜನಮನ ಮನ್ನಣೆಯನ್ನು ಗಳಿಸಿರುತ್ತಾರೆ. ರಾಮ್ ಪ್ರಸಾದ್ ಅವರು ಕಳೆದ ಸಾಲುಗಳಲ್ಲಿ ವರ್ಕ್ಸ್ ಕಮಿಟಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಅಲ್ಲದೆ ಮ ವಿ ರಾಮಪ್ರಸಾದ್ ಅವರು ಕುಡಿಯವ ನೀರಿನ ಬಗ್ಗೆ, ಬೀದಿ ದೀಪದ, ನಾಗರೀಕರ ಕುಂದು ಕೊರತೆಗಳ ಬಗ್ಗೆ ವಿನುತನವಾಗಿ ಕೌನ್ಸಿಲ್ ಸಭೆಗಳಲ್ಲಿ ಗಮನ ಸೆಳೆದಿರುತ್ತಾರೆ.