ಕಾರ್ಯಕರ್ತರೇ ಬಿಜೆಪಿಗೆ ಶಕ್ತಿ: ಟಿ ಎಸ್ ಶ್ರೀವತ್ಸ

ನಂದಿನಿ ಮೈಸೂರು

*ಕಾರ್ಯಕರ್ತರೇ ಬಿಜೆಪಿಗೆ ಶಕ್ತಿ: ಟಿ ಎಸ್ ಶ್ರೀವತ್ಸ*

ಜೆಪಿ ನಗರದ 62ನೇ ವಾರ್ಡಿನ ಕೃಷ್ಣರಾಜ ಕ್ಷೇತ್ರದ
ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀವತ್ಸ ಅವರು ಮನೆಮನೆಗೆ ತೆರಳಿ ಮತಯಾಚಿಸಿದರು.

ಮೈಸೂರು: ಬಿಜೆಪಿಗೆ ಬೂತ್ ಮಟ್ಟದ ಕಾರ್ಯಕರ್ತರೇ ಶಕ್ತಿ ಆಗಿದ್ದು, ಇದಕ್ಕೆ ಪೂರಕವಾಗಿ ಪ್ರತಿ ಬೂತ್‍ನಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಟಿ ಎಸ್ ಶ್ರೀವತ್ಸ ಹೇಳಿದರು.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ, ದೇಶದ ಸುರಕ್ಷತೆಗೆ ಆದ್ಯತೆ, ಜನಧನ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ತ್ರಿವಳಿ ತಲಾಖ್ ರದ್ದತಿ ಹೀಗೆ ಡಬಲ್ ಎಂಜಿನ್ ಸರ್ಕಾರ ಜನಪರವಾದ ಅನೇಕ ಐತಿಹಾಸಿಕ ಯೋಜನೆ, ನಿರ್ಣಯ ತೆಗೆದುಕೊಂಡು ಅಭಿವೃದ್ಧಿ ಪರವಾದ ಆಡಳಿತ ನೀಡುತ್ತಿದೆ ಎಂದರು.
ನಮ್ಮ ದೇಶದ ಭವ್ಯ ಸಂಸ್ಕೃತಿ, ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ದಿವ್ಯ ಸಂಕಲ್ಪವನ್ನು ಬಿಜೆಪಿ ಮಾಡಿದೆ, ಹೀಗಾಗಿ‌ ಜನತೆ ಜನಪರ ಒಲವಿನ ಬಿಜೆಪಿಗೆ ಗೆಲುವಿನ ಆಶೀರ್ವಾದ ಮಾಡಬೇಕು ಎಂದರು.

ನಗರಪಾಲಿಕಾ ಸದಸ್ಯರಾದ ಶಾಂತಮ್ಮ ವಡಿವೇಲ್, ಕೆ ಆರ್ ಕ್ಷೇತ್ರದ ಅಧ್ಯಕ್ಷರಾದ ವಡಿವೇಲ್, ಪ್ರಧಾನ ಕಾರ್ಯದರ್ಶಿಯಾದ ನಾಗೇಂದ್ರ, 62ವಾರ್ಡ್ ಅಧ್ಯಕ್ಷರಾದ ರಾಘವೇಂದ್ರ, ಗೋವಿಂದೇಗೌಡ, ಮಾಜಿನಗರ ಫಲಿತಾ ಸದಸ್ಯರಾದ ಎಂ ಸಿ ರಮೇಶ್, ಜೀವದಾರ ಗಿರೀಶ್, ಪರಮೇಶ್ ಗೌಡ, ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *