ನಂದಿನಿ ಮೈಸೂರು
ನೂತನ ಸರ್ಕಾರದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳನ್ನು ಬಿಜೆಪಿ ನಾಯಕರಾದ ಎಸ್ ಜಯಪ್ರಕಾಶ್ ಜೆಪಿ ರವರು ತೀವ್ರವಾಗಿ ಖಂಡಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಹೊರಡಿಸಿದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ 5 ಗ್ಯಾರೆಂಟಿ ಗಳ ಭರವಸೆಗಳಿಂದ ಜನರು ಮತ ಹಾಕಿದ್ದಾರೆ. 5 ಗ್ಯಾರಂಟಿ ಗಳನ್ನು ಕಾರ್ಯಗತ ಮಾಡಲು ಸರ್ಕಾರ ಮುಂದಾಗಬೇಕು ಅದನ್ನು ಬಿಟ್ಟು ಹಿಂದಿನ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವ ಬಗ್ಗೆ ಮಾತನಾಡುತ್ತಿರುವುದು ಖಂಡನೀಯ ಮತ್ತು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳಿಗೆ ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರು ಸರಿಯಾದ ಉತ್ತರವನ್ನು ನೀಡಲಿದ್ದಾರೆ ಎಂದು ಜಯಪ್ರಕಾಶ್ ಜೆಪಿ ತಿಳಿಸಿದ್ದಾರೆ.