ಬಿಜೆಪಿಗೆ ಲಿಂಗಾಯಿತರು ಅಗತ್ಯವಿಲ್ಲ ಎಂದು ಬಿ.ಎಲ್.ಸಂತೋಷ್ ಹೇಳಿಲ್ಲ; ಡಾ.ಕೆ.ವಸಂತಕುಮಾರ್

ನಂದಿನಿ ಮೈಸೂರು

ಬಿಜೆಪಿಗೆ ಲಿಂಗಾಯಿತರು ಅಗತ್ಯವಿಲ್ಲ ಎಂದು ಬಿ.ಎಲ್.ಸಂತೋಷ್ ಹೇಳಿಲ್ಲ; ಡಾ.ಕೆ.ವಸಂತಕುಮಾರ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ಲಿಂಗಾಯಿತ ಸಮುದಾಯ ನಂಬಬಾರದು

ಮೈಸೂರು; ಬಿಜೆಪಿಯನ್ನು ಹಿಂದೂತ್ವದ ಮೇಲೆ ಕಟ್ಟಿದ್ದೇವೆ. ಲಿಂಗಾಯಿತರು ಪಕ್ಷಕ್ಕೆ ಅಗತ್ಯವಿಲ್ಲ ಎಂದು ಪಕ್ಷದ ರಾಷ್ಟಿçÃಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಹೇಳಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಕಲಿ ಸುಳ್ಳು ಸುದ್ದಿಗಳನ್ನು ಲಿಂಗಾಯಿತ ಸಮುದಾಯ ನಂಬಬಾರದು ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್‌ಕುಮಾರ್ ತಿಳಿಸಿದರು.
ಶುಕ್ರವಾರ ನಗರದ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಪಕ್ಷದ ರಾಷ್ಟಿçÃಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು, ಬಿಜೆಪಿ ಯಾವ ಸಮೂದಾಯವನ್ನು ಓಲೈಕೆ ಮಾಡಲ್ಲ, ಪಕ್ಷವನ್ನು ಕಟ್ಟಿರುವುದು ಹಿಂದೂತ್ವದ ಆಧಾರದ ಮೇಲೆ, ಹಾಗಾಗಿ ಪಕ್ಷಕ್ಕೆ ಲಿಂಗಾಯಿತರ ಅಗತ್ಯವಿಲ್ಲ, ಇನ್ನೆಷ್ಟು ದಿನ ಲಿಂಗಾಯಿತರನ್ನು ಓಲೈಕೆ ಮಾಡುವುದು ಎಂದು ಹೇಳಿರುವುದಾಗಿ ಪತ್ರಿಕೆಯ ತುಣಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ಹರಿಯ ಬಿಟ್ಟಿದ್ದಾರೆ. ಆದರೆ ಆ ವರದಿ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ, ಹಾಗಾಗಿ ಅದು ಫೇಕ್ ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಇದೇ ರೀತಿ ಪಕ್ಷದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದರೆಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಲಾಗಿತ್ತು. ಈ ಪ್ರಕರಣ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ, ಸುಳ್ಳು ಸುದ್ದಿ ಹಬ್ಬಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಈಗ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಮತ್ತೆ ಕಿಡಿಗೇಡಿಗಳು ಬಿಜೆಪಿಗೆ ಹಾಗೂ ಬಿ.ಎಲ್.ಸಂತೋಷ್‌ರಿಗೆ ಕೆಟ್ಟ ಹೆಸರು ತರಲೆಂದು ಈ ರೀತಿಯ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಈಗ ದೂರು ನೀಡಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಬಿಜೆಪಿ ಹಾಗೂ ಪಕ್ಷದ ನಾಯಕರ ಕುರಿತು ಬರುವ ಈ ರೀತಿಯ ಯಾವುದೇ ನಕಲಿ ಸುದ್ದಿಗಳನ್ನು, ಯಾವುದೇ ಸಮುದಾಯದವರು ನಂಬಬಾರದು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *