ಹಳೆ ಮೈಸೂರಿನಲ್ಲಿ ಜೆಡಿಎಸ್ ಭದ್ರಕೋಟೆ ಭೇದಿಸಲು ರಾಜಕೀಯ ಚಾಣಾಕ್ಯನ ತಂತ್ರಗಾರಿಕೆ, ಬಿಜೆಪಿ ಬಲವರ್ಧನೆಗೆ ಅಮಿತ್ ಶಾ ಟಿ20 ಸೂತ್ರಗಳು

ಹಳೆ ಮೈಸೂರಿನಲ್ಲಿ ಜೆಡಿಎಸ್ ಭದ್ರಕೋಟೆ ಭೇದಿಸಲು ರಾಜಕೀಯ ಚಾಣಾಕ್ಯನ ತಂತ್ರಗಾರಿಕೆ, ಬಿಜೆಪಿ ಬಲವರ್ಧನೆಗೆ ಅಮಿತ್ ಶಾ ಟಿ20 ಸೂತ್ರಗಳು

ಇನ್ನೇನು ಮೂರು ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಎಲೆಕ್ಷನ್ ನೆಡೆಯಲಿದೆ. ಈ ಬಾರಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿಯಲು ಬಯಸಿರುವ ಭಾರತೀಯ ಜನತಾ ಪಕ್ಷಕ್ಕೆ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ದೊಡ್ಡ ಸವಾಲು ಒಡ್ಡಲಿವೆ.

ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವಿದ್ದರೆ, ಮೈಸೂರು ಪ್ರಾಂತ್ಯ ಮಾತ್ರ ಹಲವು ವರ್ಷಗಳಿಂದ ಜೆಡಿಎಸ್ ಭದ್ರಕೋಟೆಯಾಗಿದೆ. ಈ ಕೋಟೆಗಳನ್ನು ಭೇದಿಸಲು ಈ ಬಾರಿ ಭರ್ಜರಿ ಪ್ಲ್ಯಾನ್ ಮಾಡಿರುವ ಭಾರತೀಯ ಜನತಾ ಪಕ್ಷ, ಕಲ್ಯಾಣ ಕರ್ನಾಟಕದ ಭಾಗಕ್ಕೆ ಪ್ರಧಾನ ಮಂತ್ರಿ ಮೋದಿ ಮುಂದಾಳತ್ವ ವಹಿಸಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಚಾಣಕ್ಯನೆಂದೇ ಖ್ಯಾತಿ ಪಡೆದಿರುವ ಅಮಿತ್ ಶಾ ನಾಯಕತ್ವ ವಹಿಸಲಿದೆ. ಹಾಗೇ ಅಮಿತ್ ಶಾ ನೇತೃತ್ವದಲ್ಲಿ ಡಿಸೆಂಬರ್ ಅಂತ್ಯದಲ್ಲಿ ಜರುಗಿದ ಜನಸಂಕಲ್ಪ ಯಾತ್ರೆ ಅದ್ಧೂರಿ ಯಶಸ್ಸು ಪಡೆದಿದ್ದು, ಹೊಸ ಭರವಸೆ ಮೂಡಿಸಿದೆ.

ಈಗಾಗಾಲೇ ಕೆಲ ಬಾರಿ ರಾಜ್ಯಕ್ಕೆ ಭೇಟಿ ನೀಡಿರುವ ಅಮಿತ್ ಶಾ ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದು, ದಳಪತಿಗಳ ಹೆಡೆಮುರಿ ಕಟ್ಟಲು ಬೂತ್ ಮಟ್ಟದಿಂದ ಸಿದ್ಧತೆ ಆರಂಭಿಸಿದ್ದಾರೆ. ಜೆಡಿಎಸ್ ಜೊತೆ ಯಾವುದೇ ಮೈತ್ರಿಯಿಲ್ಲವೆಂದು ಖಡಾ-ಖಂಡಿತವಾಗಿ ಹೇಳಿರುವ ಬಿಜೆಪಿ, ತನ್ನ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ಅಧಿಕಾರಕ್ಕೆ ಬರಲು ಯೋಚಿಸುತ್ತಿದೆ. ತನ್ನ ಪ್ರಬಲ ಹಿಂದುತ್ವ ಸಿದ್ಧಾಂತದ ಜೊತೆ, ಅಭಿವೃದ್ಧಿ ಅಜೆಂಡಾಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆ.

ಮಂಡ್ಯ ಕೃಷಿಕ ವರ್ಗವನ್ನು ಸೆಳೆಯಲಿದ್ದಾರಾ ಶಾ.?
ಕರ್ನಾಟಕ ಡೈರಿ ಕ್ಷೇತ್ರದಲ್ಲಿ ಹಳೇ ಮೈಸೂರು ವಿಭಾಗದ ರೈತರು ಮುಂಚೂಣಿಯಲ್ಲಿದ್ದಾರೆ. ಅಮಿತ್ ಶಾ ಸಹಕಾರ ಸಚಿವರಾಗಿರುವುದರಿಂದ, ಈ ಭಾಗದ ಜನತೆಯ ನಾಡಿಮಿಡಿತವನ್ನು ಸೂಕ್ಷವಾಗಿ ಅರಿತುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಡಿಸೆಂಬರ್ ಅಂತ್ಯದಲ್ಲಿ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಶಾ ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಿ ಕರ್ನಾಟಕ ಹಾಲು ಒಕ್ಕೂಟದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಹೊಗಳಿ, ನಂದಿನಿ ಬ್ರ್ಯಾಂಡ್ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು, ಕೇಂದ್ರ ಸರ್ಕಾರದ ಸಹಕಾರ ಇಲಾಖೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯಿಂದ ಇನ್ನಷ್ಟು ನೆರವು ಕೊಡುವ ಭರವಸೆ ನೀಡಿದರು.ಕರ್ನಾಟಕ ರಾಜಕಾರಣದಲ್ಲಿ ಜಾತಿ ಸಮೀಕರಣವನ್ನುಅಲ್ಲಗೆಳೆಯುವಂತಿಲ್ಲ. ಒಕ್ಕಲಿಗ ಸಮುದಾಯದ ಮತ ಇಲ್ಲಿ ನಿರ್ಣಾಯಕ. ಬೆಂಗಳೂರಿನಲ್ಲಿ ಉದ್ಘಾಟಿಸಿದ ಕೆಂಪೇಗೌಡರ ಮೂರ್ತಿ ಭಾರತೀಯ ಜನತಾ ಪಕ್ಷಕೆ ಒಂದು ಧನಾತ್ಮಕ ಅಂಶವಾಗಿ ಪರಿಣಮಿಸಬಹುದು. ಈ ಭಾಗದಲ್ಲಿ ಹೇಗಾದರೂ ಕನಿಷ್ಠ 25 ಸೀಟುಗಳನ್ನು ಗೆಲ್ಲಬೇಕೆಂಬುದು ಬಿಜೆಪಿಯ ಗುರಿ. ಈ ಮೊದಲು ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಜಿದ್ದಾಜಿದ್ದಿನ ಸಮರ ಕಣವಾಗಿದ್ದ ಹಳೇ ಮೈಸೂರು ಪ್ರಾಂತ್ಯದಲ್ಲಿ, ಭಾಜಪ ಸದ್ಯ ನೆಲೆ ಕಂಡುಕೊಂಡಿದ್ದು, ತನ್ನ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತಿರಿಸಲು ಸಿದ್ಧತೆ ಆರಂಭಿಸಿದೆ. ಸಚಿವ ಆರ್. ಅಶೋಕ, ಡಾ.ಸಿ.ಎನ್.ಅಶ್ವಥನಾರಾಯಣ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಹಾಸನ ಶಾಸಕ ಪ್ರೀತಂಗೌಡ ಮತ್ತಿತರು ಈ ಭಾಗದಲ್ಲಿ ನಿಯೋಜನೆಗೊಳ್ಳಲಿದ್ದು, ಪಕ್ಷ ಸಂಘಟನೆ ಮಾಡಲಿದ್ದಾರೆ.

ಸುಮಲತಾ ಗೆಲವು – ಬದಲಾದ ರಾಜಕೀಯ ಲೆಕ್ಕಾಚಾರ
ಕಳೆದ ಬಾರಿ ಲೋಕಸಭಾ ಚುಣಾವಣೆಯಲ್ಲಿ ಸುಮಲತಾ ಅಂಬರೀಶ್ ರವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಅದ್ಭುತ ಜಯಭೇರಿ ಬಾರಿಸಿದರು. ಅಂಬರೀಶ್ ಅನುಕಂಪದ ಅಲೆಯೊಂದಿಗೆ, ಬಿಜಿಪಿ ಪರೋಕ್ಷವಾಗಿ ಬೆಂಬಲ, ಸುಮಲತಾರವರಿಗೆ ವರವಾಗಿ ಪರಿಣಮಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆಗ ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿತ್ತು, ಕುಮಾರಸ್ವಾಮಿಗಳು ಮುಖ್ಯಮಂತ್ರಿಗಳಾಗಿದ್ದರು. ದಳಪತಿಗಳು ತೀವ್ರ ಪೈಪೋಟಿಯ ನಡುವೆಯೂ, ಜೆಡಿಎಸ್ ಭದ್ರಕೋಟೆಯಲ್ಲಿ ಸುಮಲತಾರವರು ಗೆದ್ದಿದ್ದು ಮಂಡ್ಯದ ಮತದಾರರ ಪ್ರಬುದ್ಧತೆಗೆ ಹಿಡಿದ ಕನ್ನಡಿ. ಈ ಭಾಗದ ಮತದಾರರು, ಹಲವು ಬಾರಿ ಪಕ್ಷಗಳಿಗಿಂತ ಅಭ್ಯರ್ಥಿಗಳನ್ನು ಆಧರಿಸಿ ಮತ ಚಲಾಯಿಸಿದ್ದು ಇದೆ. ಈ ನಿಟ್ಟಿನಲ್ಲಿ ಅಮಿತ್ ಶಾ ಪ್ರಭಾವಿ ಗೆಲ್ಲುವ ಕುದರೆಗಳ ಹುಡಕಾಟದಲ್ಲಿದ್ದಾರೆ. ಇಲ್ಲಿ ತನ್ನ ನೇರಾನೇರ ಪ್ರತಿಸ್ಪರ್ಧಿ ಜೆಡಿಎಸ್ ಎಂದು ಅರಿತಿರುವ ಕೇಂದ್ರ ಭಾರತೀಯ ಜನತಾ ಪಕ್ಷ, ಬೇರೆ ಪಕ್ಷಗಳ ಜೆಡಿಎಸ್ ವಿರೋಧಿ ಮನಸ್ಥಿತಿಯ ಕೆಲ ನಾಯಕರಿಗೆ ಮಣೆ ಹಾಕುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಈ ಹಿಂದೆ, ಈ ಭಾಗದಲ್ಲಿ ಬಿಜೆಪಿ ಖಾತೆ ತೆರೆಯುವುದು ಕನಸಿನ ಮಾತಾಗಿತ್ತು. ಆದರೆ ಕಳೆದ ಉಪ ಚುಣಾವಣೆಯಲ್ಲಿ ಕೆ.ಆರ್.ಪೇಟೆಯಿಂದ ಸ್ಪರ್ಧಿಸಿ ಗೆಲವು ಸಾಧಿಸಿದ ಕೆ.ಸಿ.ನಾರಾಯಣಗೌಡರ ವಿಜಯ ಪಕ್ಷದ ಪಾಳಯದಲ್ಲಿ ಹೊಸ ಭರವಸೆ ಮೂಡಿಸಿದೆ. ಅಂಕಿ ಅಂಶಗಳ ಪ್ರಕಾರ ಕಳೆದ ಕೆಲ ಚುನಾವಣೆಗಳಲ್ಲಿ ಜೆಡಿಎಸ್ ತನ್ನ ಮತಗಳಿಕೆಯನ್ನು ಕಾಯ್ದುಕೊಂಡರೆ, ಕಾಂಗ್ರೆಸ್ ನ ಮತಗಳಿಕೆ ನಿಧಾನವಾಗಿ ಬಿಜೆಪಿ ಕಡೆ ವಾಲುತ್ತಿದೆ. ಕಾರಣ, ಈ ಬಾರಿ ಜೆಡಿಎಸ್ ಮತಗಳನ್ನು ಸೆಳೆಯುವುದು ಬಿಜೆಪಿಯ ಪ್ರಮುಖ ಅಸ್ತ್ರ.

ರಾಜ್ಯದ ನಾಯಕರಿಗೆ ಟಿ20 ಟಾಸ್ಕ್ ನೀಡಿದ ರಾಜಕೀಯ ಚಾಣಕ್ಯ
ಅಮಿತ್ ಶಾ ಕಳೆದ ಬಾರಿ ಕರ್ನಾಟಕಕ್ಕೆ ಬಂದಾಗ ಹಳೇ ಮೈಸೂರು ಭಾಗದಲ್ಲಿ ಕನಿಷ್ಟ 20 ಗೆಲ್ಲುವ ಪ್ರಭಾವಿಗಳನ್ನು ಗುರಿತಿಸಿಡಿ ಎಂದು ರಾಜ್ಯದ ನಾಯಕರಿಗೆ ಟಾಸ್ಕ್ ನೀಡಿದ್ದರು. ಜನೇವರಿ ಮೂರನೇ ವಾರ ಅಥವಾ ತಿಂಗಳಾಂತ್ಯದಲ್ಲಿ ಅಮಿತ್ ಶಾ ಮತ್ತೊಮ್ಮೆ ರಾಜ್ಯಕ್ಕೆ ಬರುವ ಮುಂಚೆ ಈ ಪಟ್ಟಿಯನ್ನು ಸಿದ್ಧಪಡಿಸಲು ಹೇಳಿದ್ದಾರೆ. ಪ್ರಭಾವಿ 20 ನಾಯಕರಿಗೆ ಹೆಚ್ಚುವರಿಯಾಗಿ 20 ಕ್ಷೇತ್ರಗಳನ್ನು ನೀಡಿ, ತಾವು ಸ್ಫರ್ಧೆ ಮಾಡುವ ಕ್ಷೇತ್ರದ ಜೊತೆಗೆ ಇನ್ನೊಂದು ಕ್ಷೇತ್ರವನ್ನು ಗೆಲ್ಲಿಸುವ ಹೊಣೆ ಬೀಳಲಿದೆ. ಹೀಗೆ ಒನ್ ಪ್ಲಸ್ ಒನ್ ಸೂತ್ರದಡಿ ರಾಜ್ಯ ಬಿಜೆಪಿ ನಾಯಕರಿಗೆ ಟಾಸ್ಕ್ ನೀಡಲು ಸಜ್ಜಾಗಿರುವ ಅಮಿತ್ ಶಾ ಜನೇವರಿ ಅಂತ್ಯದೊಳಗೆ ಈ ಪಟ್ಟಿಯನ್ನು ಅಂತಿಮ ಮಾಡುವ ನಿರೀಕ್ಷೆಯಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಮುಖಗಳು
ಬೆಂಗಳೂರಿನಲ್ಲಿ ಜರುಗಿದ ಬೂತ್ ವಿಜಯ ಕಾರ್ಯಕ್ರಮದಲ್ಲಿ ಮಾತಾನಾಡಿದ್ದ ಅಮಿತ್ ಶಾ ರಾಜ್ಯದಲ್ಲಿ ತ್ರಿಕೋನ ಸ್ಫರ್ಧೆಯಿಲ್ಲವೆಂದರು. ಜೆಡಿಎಸ್ ಗೆ ವೋಟ್ ನೀಡುವುದು ಎಂದರೆ, ಕಾಂಗ್ರೆಸ್ ಗೆ ವೋಟ್ ನೀಡುವುದು ಎಂದರ್ಥ. ಚುನಾವಣೆಯಲ್ಲಿ ಪರಸ್ಪರ ಹೋರಾಡುವ ಈ ಪಕ್ಷಗಳು, ಚುನಾವಣೆ ನಂತರ ಪರಸ್ಪರ ಆಲಿಂಗನ ಮಾಡಿಕೊಳ್ಳುತ್ತಾರೆ ಎಂದು ಹರಿಹಾಯ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿಸಾರಿ ನೀವು ಜೆಡಿಎಸ್ ಗೆ ವೋಟ್ ನೀಡಿದಾಗಲೂ, ಕುಮಾರಸ್ವಾಮಿಯವರು ಕಾಂಗ್ರೆಸ್ ಜೊತೆ ಆಲಿಂಗನ ಮಾಡಿಕೊಂಡಿದ್ದಾರೆ. ಒಂದು ಬಾರಿ ಭಾರತೀಯ ಜನತಾ ಪಕ್ಷಕ್ಕೆ ಪೂರ್ಣ ಬಹುಮತದ ಸರ್ಕಾರ ನೀಡಿದರೆ, ಐದು ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷವು ಕುಟುಂಬಶಾಹಿ, ಭ್ರಷ್ಟಾಚಾರ ಮತ್ತು ಜಾತಿವಾದ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಸಮಾಪ್ತಿಗೊಳಿಸಿ, ದೇಶಭಕ್ತಿ ಸರ್ಕಾರ ತರಲಿದೆ ಎಂದು ಮತದಾರರಲ್ಲಿ ಮನವಿ ಮಾಡಿದರು.

ಅಸ್ಥಿರತೆ ಸರ್ಕಾರದಿಂದ ಅಭಿವೃದ್ಧಿಯಾಗದು
ದೇಶಭಕ್ತಿಯ ಸರ್ಕಾರದ ಬಗ್ಗೆ ಮಾತನಾಡುತ್ತಾ, ರಾಜ್ಯದಲ್ಲಿ ಅಸ್ಥಿರತೆಯಿಂದ ಎಂದು ಅಭಿವೃದ್ಧಿಯಾಗುವುದಿಲ್ಲ ಎಂದರು. ಮೂವತ್ತೈದು ಸೀಟುಗಳನ್ನು ಪಡೆದು ಬ್ಲಾಕಮೇಲ್ ತಂತ್ರಗಳನ್ನು ಮಾಡುವ ಪಕ್ಷಗಳಿಂದ ವಿಕಾಸವನ್ನು ನಿರೀಕ್ಷೆ ಮಾಡುವುದು ವ್ಯರ್ಥವೆಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಹರಿಹಾಯ್ದರು.ಹಾಗೇ ರಾಜ್ಯದಲ್ಲಿ PFI ನಂತರ ಖಟ್ಟರ್ ಸಂಘಟನೆಗಳ ಮೇಲಿದ್ದ 1600 ಕೇಸ್ ಗಳನ್ನು ಹಿಂಪಡೆದ ಸಿದ್ಧರಾಮಯ್ಯ ನಡೆ ಪ್ರಶ್ನಿಸಿ, ಇಂತಹ ನಾಯಕರಿಂದ ರಾಜ್ಯದ ಸುರಕ್ಷತೆಯನ್ನು ಬಯಸಲಾಗದು ಎಂದರು. ತುಕಡೆ ತುಕಡೆ ವಾಕ್ಯ ಕೂಗುವವರನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದಿಂದ ದೇಶದ ರಕ್ಷಣೆ ಹೇಗಾದಿತು? ಎಂದು ಪ್ರಶ್ನಿಸಿ ಕರ್ನಾಟಕದ ಜನತೆ ಮತದಾನ ಸಂದರ್ಭದಲ್ಲಿ, ದೇಶದ ಸರಂಕ್ಷಣೆಯನ್ನು ಮುಖ್ಯ ವಿಷಯವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಅಭಿವೃದ್ಧಿಯೇ ಆಸರೆಯೆಂದ ಚಾಣಕ್ಯ
ಬೆಜೆಪಿ ಸರ್ಕಾರದ ಜನಪರ ಅಭಿವೃದ್ಧಿ ಕಾರ್ಯಗಳೇ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಆಸರೆಯಾಗಲಿವೆ ಎಂದರು. ಸ್ವಾತಂತ್ಯ ಬಂದ ಎಪ್ಪತ್ತು ವರ್ಷಗಳ ನಂತರ ಕಾಣದಿದ್ದ ಅಭಿವೃದ್ಧಿ ಕಾರ್ಯಗಳು ನರೇಂದ್ರ ಮೋದಿಯವರ ಎಂಟು ವರ್ಷಗಳಲ್ಲಿ ನಡೆದಿವೆ. ದೇಶದ 80 ಕೋಟಿ ಜನಸಂಖ್ಯೆಗೆ ಬ್ಯಾಂಕ್ ಖಾತೆ ತಲುಪಿಸಿದ ಹೆಮ್ಮೆ ಭಾರತೀತ ಜನತಾ ಪಕ್ಷದ ಸರ್ಕಾರದೆಂದು ಹೇಳಿದ ಅಮಿತ್ ಶಾ ಹಲವು ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡುವ ಮೂಲಕ ಎಷ್ಟೋ ತಂಗಿ-ತಾಯಂದಿರ ಸಮ್ಮಾನ ಪೂರ್ವಕ ಜೀವನಕ್ಕೆ ಅಡಿಪಾಯ ಹಾಕಿದ್ದೇವೆ ಎಂದರು. ಸ್ವಾಂತಂತ್ರಾ ನಂತರ ಬೆಳಕೆ ಕಾಣದಿದ್ದ ನಾಲ್ಕು ಕೋಟಿ ಜನರ ಮನೆಗೆ ವಿದ್ಯುತ್ ತಲುಪಿಸಿದ ಕೀರ್ತಿ ಮೋದಿ ಸರ್ಕಾರದ್ದು. 13 ಕೋಟಿ ತಾಯಂದಿರ ಮನೆಗೆ ಗ್ಯಾಸ್ ಸಿಲಿಂಡರ್ ತಲುಪಿಸಿ ಹೊಗೆ ಮುಕ್ತ ಜೀವನಕ್ಕೆ ಅವಕಾಶ ಮಾಡಿಕೊಟ್ಟಿದೆ. ಹಾಗೇ ಅರವತ್ತು ಕೋಟಿ ಜನಸಂಖ್ಯೆಯ ಬಡ ಮನೆಗಳ ಸುಮಾರು 5 ಲಕ್ಷದವರೆಗಿನ ಆರೋಗ್ಯದ ಖರ್ಚನ್ನು ಮೋದಿ ಸರ್ಕಾರ ವಹಿಸಿಕೊಳ್ಳುತ್ತಿದೆ. ಹೀಗೆ ಹತ್ತು ಹಲವಾರು ಜನಪರ ಕಾರ್ಯಗಳ ಕೈಪಿಡಿಯೊಂದಿಗೆ ರಾಜ್ಯದ ಮತದಾರರತ್ತ ತೆರಳುವ ಭಾರತೀಯ ಜನತಾ ಪಕ್ಷಕ್ಕೆ ಜನತೆ ಮತ್ತೊಮ್ಮೆ ಆಶೀರ್ವದಿಸಲಿದೆ ಎಂದರು.

Leave a Reply

Your email address will not be published. Required fields are marked *