ನಂದಿನಿ ಮೈಸೂರು
ಹೈಕೋರ್ಟ್ ನ್ಯಾಯಾದೀಶರಾಗಿ ನ್ಯಾ.ಜಿ ಎಸ್ ಸಂಗ್ರೇಶಿ ನೇಮಕ ಹಿನ್ನೆಲೆ ಮೈಸೂರು ಜಿಲ್ಲಾ ವಕೀಲರ ಸಂಘದ ವತಿಯಿಂದ ನ್ಯಾಯಾದೀಶರಾದ ಜಿ ಎಸ್ ಸಂಗ್ರೇಶಿರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ವಕೀಲರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ.ಜಿ ಎಸ್ ಸಂಗ್ರೇಶಿ ಹಾಗೂ ಪತ್ನಿಗೆ ವಕೀಲರು ಸನ್ಮಾನಿಸಿ ಗೌರವಿಸಿದರು.
ಬಿಳ್ಕೋಡುಗೆ ಸಮಾರಂಭದಲ್ಲಿ ನ್ಯಾಯಾದೀಶರಾದ ಪುಟ್ಟಸ್ವಾಮಿ,ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ,ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಕಾರ್ಯದರ್ಶಿ ಉಮೇಶ್,ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಚಂದ್ರಮೌಳಿ ಸೇರಿದಂತೆ ವಕೀಲರು ಮತ್ತಿತರರು ಭಾಗಿಯಾಗಿದ್ದರು.