ಬಿಕಿನಿ ಫೋಟೋ, ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ಸಂಗೀತಾ ಭಟ್

ನಂದಿನಿ ಮೈಸೂರು

 

ನಟಿ ಸಂಗೀತಾ ಭಟ್ ಇಂಡೋನೇಷ್ಯಾದ ಬಾಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಾಲಿಯಲ್ಲಿ ಅವರು ಬೇಸಿಗೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿ ಎನ್ನುವಂತೆ ಸಂಗೀತಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಕಿನಿಯಲ್ಲಿ ಈಜುಕೊಳಕ್ಕೆ ಇಳಿದಿರುವ ಕೆಲ ಫೆÇೀಟೋಗಳನ್ನು ಮತ್ತು ವಿಡಿಯೋವನ್ನು ಸಂಗೀತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ರೀತಿಯ ಹೊಸ ಅನುಭವ ಮತ್ತು ಹುಚ್ಚತನದ ಆನಂದ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಕೂಡ ಮಾಡಿದ್ದಾರೆ.
ವೈಯಕ್ತಿಕ ಕಾರಣದಿಂದಾಗಿ ಸಂಗೀತಾ ಹಲವು ವರ್ಷಗಳ ಕಾಲ ಚಿತ್ರೋದ್ಯಮದಿಂದ ದೂರ ಉಳಿದಿದ್ದರು. ಮೀಟೂ ನಂತರ ಅವರು ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿಸಲಿಲ್ಲ. ಈಗ ಮತ್ತೆ ಬಣ್ಣ ಲೋಕಕ್ಕೆ ಕಂಬ್ಯಾಕ್ ಆಗಿದ್ದಾರೆ.
`ಎರಡನೇ ಸಲ’, `ಅನುಕ್ತ’ ಸಿನಿಮಾಗಳ ಗಮನ ಸೆಳೆದ ನಟಿ ಸಂಗೀತಾ ಭಟ್ ಈಗ ಪವರ್‍ಫುಲ್ ಪಾತ್ರದ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ರೂಪಾಂತರ ಚಿತ್ರದದಲ್ಲಿ ನಟ ಕಿಶೋರ್ ಜತೆ ಪ್ರಮುಖ ಪಾತ್ರದಲ್ಲಿ ಸಂಗೀತಾ ನಟಿಸಿದ್ದಾರೆ. ಈ ಕುರಿತು ಅಧಿಕೃತವಾಗಿ ಸಂಗೀತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ರೂಪಾಂತರ ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಸಸ್ಪೆನ್ಸ್ ಕಥೆಯಾಗಿದ್ದು, ಪವರ್‍ಫುಲ್ ಪಾತ್ರದ ಮೂಲಕ ಸಂಚಲನ ಮೂಡಿಸಿದ್ದಾರೆ. ಭಿನ್ನ ಕಥೆಯ ಮೂಲಕ ಮತ್ತೆ ಸಂಗೀತಾ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಲಿದ್ದಾರೆ.

Leave a Reply

Your email address will not be published. Required fields are marked *