ಮೈಸೂರು:8 ಸೆಪ್ಟೆಂಬರ್ 2021
*ಸ್ಪೇಷಲ್ ಸ್ಟೋರಿ: ನ@ದಿನಿ*
ಗೌರಿ ವ್ರತ ಅಂದ್ರೆ ಹೆಣ್ಮಕ್ಳಿಗೆ ಎಲ್ಲಿಲ್ಲದ ಖುಷಿ. ಸೀರೆ ತೊಟ್ಟು ರೆಡಿ ಆಗೋದೇನು. ಅಕ್ಕಪಕ್ಕದ ಮನೆಯವ್ರನ್ನ ಕೂಗಿ ಬಾಗಿನ ಕೊಡೋದೇನು. ಅಂದ್ಹಾಗೆ ಬಾಗಿನ ಯಾಕ್ ಕೊಡ್ತಾರೆ. ಈ ಬಾಗಿನ ಕೊಡೊ ಮೊರಕ್ಕೆ ಡಿಮ್ಯಾಂಡ್ ಹೇಗಿದೆ. ಮತ್ತೊಂದು ವಿಶೇಷ ಎಂದರೇ ಮೈಸೂರಿನ ಮಹಾರಾಜ ಮನೆತನದವರು ಕೂಡ ಈ ಅರಳಿಕಟ್ಟೆ ಕೆಳಗೆಯೇ ಬಾಗೀನ ಮೊರ ಕೊಂಡುಕೊಳ್ಳೋದು.
ಹೌದು ಮೈಸೂರಿನ 101 ಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ಅರಳಿ ಮರದ ಕೆಳಗೆ ಕುಳಿತಿರುವ ಮಹಿಳೆಯರು
ಜಬರ್ದಸ್ತಾಗಿ ಮೊರ ತಯಾರಿ ಮಾಡ್ತೀದ್ದಾರೆ. ಹೆಣ್ಮಕ್ಳು ಅಷ್ಟೆ ಮೊರ ಪರ್ಚೇಸಿಂಗ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕೆಲವ್ರು ಒಂದ್ ಜೊತೆ ತಗೊಳ್ತಿದ್ರೆ ಮತ್ ಕೆಲವ್ರು ಡಜನ್ ಗಟ್ಲೆ ಪರ್ಚೆಸ್ ಮಾಡ್ತಿದ್ದಾರೆ. ಅಂದ್ಹಾಗೆ ಮುತ್ತೈದೆರೆಲ್ಲಾ ಹೀಗೆ ಮೊರಗಳನ್ನ ಖರೀದಿ ಮಾಡೋಕೆ ಕಾರಣ ಈ ಪುಟ್ ಗೌರಿ.
ನಾಳೆ ಗೌರಿ ಹಬ್ಬ. ಹಬ್ಬದಲ್ಲಿ ಮುತ್ತೈದೆಯರನ್ನ ಮನೆಗೆ ಕರೆದು ಬಾಗಿನ ಕೊಡೋದು ವಾಡಿಕೆ. ಅದ್ರಲ್ಲೂ ಬಿದಿರಿನಿಂದ ಮಾಡಿದ ಮೊರದಿಂದ ಬಾಗಿನ ಕೊಟ್ರೆ ಶ್ರೇಷ್ಠ ಅಂತೆ. ಯಾಕಂದ್ರೆ ಬಿದಿರು ಊರ್ದ್ವ ಮುಖವಾಗಿ ಅತಿ ಎತ್ತರವಾಗಿ ಬೆಳೆಯುತ್ತೆ. ಹೀಗಾಗಿ ಬಾಗಿನ ಕೊಳ್ಳೋವ್ರು ತೆಗೆದುಕೊಳ್ಳೋವ್ರ ವಂಶ ಕೂಡ ಬೆಳೆಯುತ್ತೆ ಅನ್ನೋ ನಂಬಿಕೆ ಇದ್ದು ಎಲ್ಲಾ ಮೊರ ಖರೀದಿಯಲ್ಲಿ ಇವತ್ತು ಬ್ಯುಸಿ ಆಗಿದ್ರು.
ಈ ಬಾರಿ ಕೊರೋನಾ ಇರೋದ್ರಿಂದ ಬಿದಿರನ್ನ ತರ್ಸೋಕೆ ಸ್ವಲ್ಪ ಕಷ್ಟ ಆಗಿದೆ ಅಂತಾ ಮಾರಾಟಗಾರರು ಹೇಳ್ತಿದ್ದು ಡಿಮಾಂಡ್ ಮಾತ್ರ ಹಾಗೆ ಇದೆ. ಆರು ಕಾಸು ಮೂರು ಕಾಸಿಗೆ ನಂಜನಗೂಡಿನಿಂದ ಮೈಸೂರಿಗೆ ಬಂದು ಹೊಟ್ಟೆ ಪಾಡಿಗಾಗಿ ಜೀವನ ನಡೆಸುತ್ತಿದ್ದೇವೆ.ಈ ಬಾರೀ ರೇಟ್ ಸ್ವಲ್ಪ ಜಾಸ್ತಿ ಆಗಿದೆ 150 ರಿಂದ 180 ರೂಪಾಯಿಗೆ ಮಾರಾಟ ಮಾಡ್ತೀದ್ದೇ ಅಂತಿದ್ದಾರೆ. ಇನ್ನು ಕೊರೊನಾ ಇದ್ರು ಕೂಡ ಜನರು ಬಾಗಿನದ ಮೊರ ಕೊಳ್ಳೋಕೆ ಮುಗಿ ಬೀಳ್ತಿದ್ದು ಮಾರಾಟಗಾರರು ಖುಷ್ ಆಗಿದ್ದಾರೆ.ಮೈಸೂರು ರಾಜಮನೆತನದವರು ಪ್ರತಿ ವರ್ಷ ಬಾಗೀನ ಮೊರೆ ಕೊಂಡುಕೊಳ್ಳುತ್ತಾರೆ.
ಒಟ್ಟಾರೆ ಕೇಳೋದಾದರೇ ಬಿದರಿನ ಬಾಗೀನವನ್ನ ಬಡವರಿಂದ ಶ್ರೀಮಂತರವರೆಗೂ ಎಲ್ಲರೂ ಕೊಂಡುಕೊಳ್ಳುತ್ತಾರೆ.ಅದೇನೇ ಆಗಲೀ
ಸರ್ವಮಂಗಲ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಯಂಬಕೇ ಗೌರೀ
ನಾರಾಯಣೀ ನಮೋಸ್ತುತೇ. ಅಂದ್ಹಾಗೆ ಈ ಶ್ಲೋಕದ ಅರ್ಥ. ಗೌರಿ ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಅನ್ನೋದು. ನಮ್ಮ ಆಶಯ ಕೂಡ ಅಷ್ಟೆ.
ಸಂಕಷ್ಟದ ಸಮಯ ಇದೆ. ಹೀಗಾಗಿ ಎಲ್ರಿಗೂ ಒಳ್ಳೇದಾಗ್ಲಿ. ಪಾರ್ವತಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡ್ಲಿ.