ಶೇ . ೨೦ ರಷ್ಟು ಕ್ಯಾನ್ಸರ್‌ ಪ್ರಕರಣ ಹೆಚ್ಚಳ : ಡಾ.ಎಂ.ಎಸ್.ವಿಶ್ವೇಶ್ವರ

ಮೈಸೂರು:4 ಫೆಬ್ರವರಿ 2022

ನಂದಿನಿ ಮೈಸೂರು

ಪರಿಣಾಮಕಾರಿ ಚಿಕಿತ್ಸೆ ನೀಡುವ ಉದ್ದೇಶ ದಿಂದ ಕ್ಯಾನ್ಸರ್‌ಗೆ ಸಂಬಂಧಿಸಿದ ದಂತ ಸಂಶೋಧನೆ , ತರಬೇತಿ ಯಂತಹ ಚಟುವಟಿಕೆಗಳು ಹೆಚ್ಚಾಗಬೇಕಿದೆ ಎಂದು ಭಾರತ ಆಸ್ಪತ್ರೆ ಮತ್ತು ಅಂಕೊಲಾಜಿ ಸಂಸ್ಥೆಯ ಚೀಫ್ ರೇಡಿಯೇಷನ್‌ ಆಂಕೊಲಾಜಿಸ್ಟ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ ಹೇಳಿದರು .

ಹೆಬ್ಬಾಳ್‌ನಲ್ಲಿರುವ ಭಾರತ್ ಆಸ್ಪತ್ರೆಯಲ್ಲಿ ನಿನ್ನೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ೨೦೨೦ ನೇ ಸಾಲಿಗೆ ಹೋಲಿಕೆ ಮಾಡಿದರೆ , ೨೦೨೩ ರಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಒಟ್ಟು ಕ್ಯಾನ್ಸರ್ ರೋಗಿಗಳ ಸಂಖ್ಯೆ ಯಲ್ಲಿ ಶೇ . ೨೦ ರಷ್ಟು ಹೆಚ್ಚಳ ವಾಗಿದೆ . ಹೀಗಾಗಿ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ತಡೆಗಟ್ಟುವಿಕೆ , ಪತ್ತೆ ಹಚ್ಚುವುದು ಮತ್ತು ಸುಧಾರಿತ ಚಿಕಿತ್ಸೆ ನೀಡುವುದನ್ನು ಉತ್ತೇಜಿಸಲು ಪ್ರತಿ ವರ್ಷ ಫೆ .೪ ರಂದು ವಿಶ್ವ ಕ್ಯಾನ್ಸರ್‌ ದಿನ ಆಚರಿಸಲಾಗುತ್ತಿದೆ . ಚಿಕಿತ್ಸೆ ಅವ D. 3 CIBIGING HCG www BAN ನೀಡುವಲ್ಲಿ ಇರುವ ಅಡೆ ತಡೆಗಳನ್ನು ಕಡಿಮೆ ಮಾಡುವುದು ( ಕ್ಲೋಸ್ ದಿ ಕೇರ್ ಗ್ಯಾಪ್ ) ಈ ಬಾರಿ ವಿಶ್ವ ಕ್ಯಾನ್ಸರ್‌ ದಿನದ ಧೈಯ ವಾಗಿದೆ . ಕ್ಯಾನ್ಸರ್ ಸೇವೆಗಳನ್ನು ನಿರ್ಣಯಿಸುವಲ್ಲಿ ವಿಶ್ವಾದ್ಯಂತ ಇರುವ ಅಸಮಾನತೆ ಯನ್ನು ತಪ್ಪಿಸುವ ಉದ್ದೇಶದಿಂದ ಕೈಗೊಂಡಿರುವ ಮೂರು ವರ್ಷಗಳ ಅಭಿಯಾನ ಇದಾಗಿದೆ ಎಂದು ಮಾಹಿತಿ ನೀಡಿದರು .

ಸುದ್ದಿಗೋಷ್ಟಿಯಲ್ಲಿ ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿರ್ಮಲಾ ಕೆ.ಮೂರ್ತಿ,ಕನ್ಸಲ್ಟೆಂಟ್ ಮೆಡಿಕಲ್ ಆಂಕೊಲಾಜಿಸ್ಟ್ ಡಾ.ಕೆ.ಜಿ.ಶ್ರೀನಿವಾಸ್, ಡಾ.ಎ.ವಿಜಯ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *