ಹುಟ್ಟು ಹಬ್ಬವನ್ನೇ ಆಚರಿಸಿಕೊಳ್ಳದ ಭಾಗ್ಯ ಮಾದೇಶ್ ಪ್ರತಿವರ್ಷ ಮಕ್ಕಳ ಜೊತೆ ಸರಳವಾಗಿ ಹುಟ್ಟು ಹಬ್ಬ ಆಚರಿಸುತ್ತಾ ಬಂದಿರುವ ರಮೇಶ್,ಪಡುವಾರಹಳ್ಳಿ ಪಾಪಣ್ಣ

ನಂದಿನಿ ಮನುಪ್ರಸಾದ್ ನಾಯಕ್

ಬಡವರ ಬಂಧು ಅಭಿಮಾನಿಗಳ ಸಂಘ ಪಡುವಾರಹಳ್ಳಿ
ರಮೇಶ್ ಹಾಗೂ ಪಾಪಣ್ಣರವರು ಜೊತೆಗೂಡಿ
ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಭಾಗ್ಯ ಮಾದೇಶ್ ಅವರ ಹುಟ್ಟು ಹಬ್ಬವನ್ನ ಮಹಾಜನ ಪ್ರೌಢಶಾಲೆಯ ಮಕ್ಕಳ ಜೊತೆ ಆಚರಿಸಿದರು.ಮಕ್ಕಳು ಸಹ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು.

ಮಹಾಜನ ಪ್ರೌಢಶಾಲೆ ಹಳೇ ವಿಧ್ಯಾರ್ಥಿಗಳ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗ್ಯ ಮಾದೇಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಮಾದೇಗೌಡ,ಮಾಜಿ ನಗರ ಪಾಲಿಕೆ ಸದಸ್ಯೆ ಪ್ರೇಮ ಶಂಕರೇಗೌಡರವರು ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿ ಮಕ್ಕಳ ಜೊತೆ ಕಾಲ ಕಳೆಯುತ್ತಾ ಹುಟ್ಟು ಹಬ್ಬ ಆಚರಿಸಿಕೊಂಡರು. ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರು ಹೂ ಗುಚ್ಚ ನೀಡಿ ಶುಭಕೋರಿದರು.
ಕನಕ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರಿಗೆ ಸನ್ಮಾನಿಸಲಾಯಿತು.ತದನಂತರ ಗಣ್ಯರೆಲ್ಲರಿಗೂ ವೇದಿಕೆ ಮೇಲೆ ಸನ್ಮಾನಿಸಲಾಯಿತು.

9ನೇ ತರಗತಿ ವಿಧ್ಯಾರ್ಥಿನಿ ಧನಲಕ್ಷ್ಮೀ ಭಾಗ್ಯ ಮಾದೇಶ್ ರವರ ಭಾವಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡಿದ್ದಾಳೆ.ಉಡುಗೊರೆ ನೋಡಿ ಸಂತಸ ವ್ಯಕ್ತಪಡಿಸಿದರು.

ಮೈಸೂರು ನಾಯಕ ಪತ್ರಿಕೆ ವತಿಯಿಂದ 2026 ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಮಕ್ಕಳ ಹಾಹೂ ಗಣ್ಯರ ಜೊತೆ ಭಾಗ್ಯ ಮಾದೇಶ ರವರು
ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯ ಜೆ.ಗೋಪಿ,
ಪ್ರಾಂಶುಪಾಲರಾದ ಎಸ್.ಸುಜಾತ,
ರಮೇಶ್,ಪಾಪಣ್ಣ , ಮೈಸೂರು ನಾಯಕ ಪತ್ರಿಕೆ ಸಂಪಾದಕರಾದ ಸತ್ಯನಾರಾಯಣ್,ಕೃಷ್ಣ, ಸೇರಿದಂತೆ ಸತ್ಯ ಸಾಯಿಬಾಬಾ ಶಾಲೆ ಮಕ್ಕಳು,ಮಹಾಜನ ಪ್ರೌಢಶಾಲೆಯ ಮಕ್ಕಳು,ಶಿಕ್ಷಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *