ಬಸವ ಮಾರ್ಗ ಫೌಂಡೇಶನ್ ನಲ್ಲಿ ವ್ಯಸನ ಮುಕ್ತ ಕೇಂದ್ರದಲ್ಲಿ 30 ನೇ ಉಚಿತ ಮದ್ಯ ವರ್ಜನ ಕಾರ್ಯಕ್ರಮ ಬಸವರಾಜು ಕಾರ್ಯಕ್ಕೆ ಶ್ಲಾಘಿಸಿದ ಸ್ವಾಮೀಜಿಗಳು

ನಂದಿನಿ ಮೈಸೂರು

ಶ್ರೀ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಬಸವ ಮಾರ್ಗ ಪುನರ್ವಸತಿ ವ್ಯಸನ ಮುಕ್ತ ಕೇಂದ್ರದಲ್ಲಿ 30 ನೇ ಉಚಿತ ಮದ್ಯ ವರ್ಜನ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮೈಸೂರಿನ ಹೆಬ್ಬಾಳ್ ರಿಂಗ್ ರಸ್ತೆಯಲ್ಲಿರುವ ಬಸವಮಾರ್ಗ ಪುನರ್ವಸತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ
ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ
ಶ್ರೀ ಗುರು ಮಹಾಂತ ಸ್ವಾಮಿಗಳು, ವಿಜಯಮಹಾಂತೇಶ್ವರ ಸ್ವಾಮಿ ಗಳು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.ಬಸವಮಾರ್ಗ ಫೌಂಡೇಷನ್ ನ ಸಂಸ್ಥಾಪಕರಾದ ಎಸ್. ಬಸವರಾಜು ರವರ ಕಾರ್ಯಕ್ಕೆ ಸ್ವಾಮೀಜಿಗಳು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬನ್ನೂರು ಕೆ ರಾಜು‌, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿಗಳಾದ ಎಸ್. ಶಂಕರಪ್ಪ, ಖ್ಯಾತ ಪವಾಡ ಬಯಲು ತಜ್ಞರಾದ ಹುಲಿಕಲ್ ನಟರಾಜು,ಬಸವಮಾರ್ಗ ಫೌಂಡೇಷನ್ ನ ಸಂಸ್ಥಾಪಕರಾದ ಎಸ್. ಬಸವರಾಜು ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *