ನಂದಿನಿ ಮೈಸೂರು
ಬರೀ 10% ಬಡ್ಡಿ ಸಿನಿಮಾದ ಹಾಡೊಂದನ್ನ ಸಂಕ್ರಾಂತಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಎಸ್.ಡಿ.ಆರ್ ಪ್ರೋಡಕ್ಷನ್ ನಲ್ಲಿ ನಿರ್ಮಾಪಕರಾಗಿರುವ ಲಕ್ಷ್ಮೀಪತಿ ಬಾಲಾಜಿ ನಿರ್ಮಾಪಕರಾಗಿದ್ದು ಕೃಷ್ಣಲೀಲಾ ನಿರ್ದೇಶಿಸಿದ್ದಾರೆ.ನಿರ್ಮಾಣದ ಜೊತೆಗೆ ನಾಯಕ ನಾಟನಾಗಿ ಲಕ್ಷ್ಮೀಪತಿ ಬಾಲಾಜಿ ಅಭಿನಯಿಸಿದ್ದಾರೆ.ನಿರೀಕ್ಷಾ ಶೆಟ್ಟಿ
ನಟಿಯಾಗಿ ಅಭಿನಯಿಸಿದ್ದಾರೆ.ಸಿನಿಮಾದಲ್ಲಿ 6 ಹಾಡುಗಳಿದ್ದು ಹೆಜ್ಜಿಗೆ ಡಾ.ನಾರಾಯಣಸ್ವಾಮಿ ಸಾಹಿತ್ಯ ಸಂಗೀತ ನೀಡಿದ್ದಾರೆ.ನಾಳೆ ಮಕರ ಸಂಕ್ರಾಂತಿ ಹಬ್ಬದಂದು ಮೈಸೂರು ಜಿಲ್ಲೆ ನಂಜನಗೂಡಿನ ಮಹದೇಶ್ವರ ಯಾತ್ರಿ ಭವನದಲ್ಲಿ ಬರೀ 10% ಬಡ್ಡಿ ಸಾಂಗ್ ಬಿಡುಗಡೆ ಮಾಡಲಿದ್ದಾರೆ.ಬಡ್ಡಿ ತೆಗೆದುಕೊಂಡು ಜೀವನದಲ್ಲಿ ಎಷ್ಟೆಲ್ಲಾ ತೊಂದರೇ ಅನುಭವಿಸುವರು ಎಂಬುದನ್ನ ಚಿತ್ರದಲ್ಲಿ ತೋರಿಸಲಾಗಿದೆ.ಮೈಸೂರಿನ ಸುತ್ತಾ ಮುತ್ತ ಚಿತ್ರೀಕರಣ ಮಾಡಲಾಗಿದೆ.25 ಮಂದಿ ಕಲಾವಿದರು ನಟಿಸಿದ್ದಾರೆ.ನಿರ್ಮಾಪಕ ಲಕ್ಷ್ಮೀಪತಿ ಬಾಲಾಜಿ,ನಿರ್ದೇಶಕ ಕೃಷ್ಣಲೀಲಾ ಚೊಚ್ಚಲ ಚಿತ್ರ ಫೆಬ್ರವರಿ 17 ರಂದು ಸುಮಾರು 50 ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.
ಲಕ್ಷ್ಮೀಪತಿ ಬಾಲಾಜಿ,ಸುರೇಶ್ ಗೋಲ್ಡ್,ಕೃಷ್ಣಲೀಲಾ
ರಾಮು ಎಂ ಸಿ ಹುಂಡಿ,ಲಯನ್ ಪ್ರಮೀಳಾ .ಎಸ್,
ಲಯನ್ ಉಮಾಶಂಕರ್,ಲೋಕೇಶ್ ಗೌಡ,
ತ್ಯಾಗರಾಜು ದೇವರಹಳ್ಳಿ,ಉದಯ್,ಭಯಾನಕ ನಾಗರಾಜು,ಯಶೋಧಾ ಮೈಸೂರು ಸೇರಿದಂತೆ ಕಲಾವಿದರು ಹಾಜರಿದ್ದರು.