ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಶಾಂತಿನಗರದಲ್ಲಿ ಜಾಗೃತಿ ಜಾಥಾ

ನಂದಿನಿ ಮೈಸೂರು

ಮೈಸೂರು: ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಶಾಂತಿನಗರದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಶಾಂತಿನಗರದ 12ನೇ ವಾರ್ಡಿನ ನಗರಸಭಾ ಸದಸ್ಯರಾದ ಅಯಾಜ್ ಪಾಸ ಮತ್ತು ಉದಯಗಿರಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಸುನಿಲ್ ರವರು ಹಸಿರು ನಿಸಾನೆ ತೋರುವುದರ ಮೂಲಕ ಚಾಲನೆ ನೀಡಿದರು ಈ ಒಂದು ಜಾತವು ಶಾಂತಿನಗರದ ಪ್ರಮುಖ ಬೀದಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಬಾಲಕಾರ್ಮಿಕ ಪದ್ಧಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಿಗೆ ಕರಪತ್ರವನ್ನು ಹಂಚಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆಯ ಹಿರಿಯ ಯೋಜನಾಧಿಕಾರಿಗಳಾದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಕ್ಷೇತ್ರ ಸಂಯೋಚಕರಗಳಾದ ನ್ಯಾನ್ಸಿ ಜ್ಯೋತಿ ಕಾವ್ಯ ಹಾಗೂ ಸಮುದಾಯ ಸಂಘಟಕರುಗಳಾದ ಮಹದೇವಸ್ವಾಮಿ ವಿಕ್ಟೋರಿಯಾ ಮಾರ್ಗರೇಟ್ ವಲ್ಲಿ ಪವಿತ್ರ ವಂದನ ಸೌಮ್ಯ ನಂದಿನಿ ಹಾಗೂ ಪೋಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *