ನಂದಿನಿ ಮೈಸೂರು
ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಹಬ್ಬ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸಲಾಗುತ್ತದೆ. ಇತ್ತೀಚೆಗಷ್ಟೇ ಝಿಲ್ಹಿಜ್ ತಿಂಗಳ ಚಂದ್ರ ದರ್ಶನವಾಗಿದ್ದು, ಇದೀಗ ಬಕ್ರೀದ್ ದಿನವು ಆಚರಣೆಗೆ ಬಂದಿದೆ . ಈ ವರ್ಷ, ಈದ್ ಉಲ್-ಅಧಾ ಅಂದರೆ ಬಕ್ರೀದ್ ಹಬ್ಬವನ್ನು 2023 ರ ಜೂನ್ 29 ರಂದು ಗುರುವಾರ ಆಚರಿಸಲಾಗುವುದು ಎಂದು ಬಕ್ರಿದ್ ಹಬ್ಬದ ವಿಶೇಷತೆ ಬಗ್ಗೆ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಸೈಯದ್ ಇಕ್ಬಾಲ್ ತಿಳಿಸಿಕೊಟ್ಟರು.
ಬಕ್ರೀದ್ ಮುಸ್ಲಿಂ ಸಹೋದರರಿಗೆ ತ್ಯಾಗದ ಹಬ್ಬವಾಗಿದೆ, ಈದ್-ಉಲ್-ಜುಹಾ (ಅರೇಬಿಕ್) ಮತ್ತು ಭಾರತದಲ್ಲಿ ಬಕ್ರೀದ್ ಅನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಇದು ಮುಸ್ಲಿಂ ತಿಂಗಳ ಜುಲ್-ಹಿಜ್ಜಾದ 10 ನೇ ದಿನದಂದು ಬರುತ್ತದೆ. ಈ ದಿನದಂದು ಮುಸ್ಲಿಮರು ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸಲು ಒಂದು ಮೇಕೆ ಅಥವಾ ಕುರಿಯನ್ನು ಬಲಿ ನೀಡುತ್ತಾರೆ, ಅವರು ದೇವರ ಆಜ್ಞೆಯ ಮೇರೆಗೆ ತನ್ನ ಮಗನನ್ನು ಕೊಲ್ಲಲು ಒಪ್ಪಿಗೆ ನೀಡಿದರು. ಆದರೆ ದೇವರ ಮೇಲಿನ ಭಕ್ತಿಯಿಂದಾಗಿ, ಅವನ ಮಗನನ್ನು ಉಳಿಸಲಾಯಿತು ಮತ್ತು ಬದಲಿಗೆ ಒಂದು ಮೇಕೆಯನ್ನು ಬಲಿ ನೀಡಲಾಯಿತು.
ಈ ಹಬ್ಬದಂದು ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ ಮತ್ತು ಐದ್ ಪ್ರಾರ್ಥನೆಯ ನಂತರ ತ್ಯಾಗದ ಮಾಂಸವನ್ನು ವಿತರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೂರು ಭಾಗ ಮಾಡಲಾಗುತ್ತದೆ.ಒಂದು ಬಡವರಿಗೆ ಎರಡನೇಯದು ಕುಟುಂಬ ಮತ್ತು ಸ್ನೇಹಿತರಿಗೆ ಮೂರನೇಯದು ತಮ್ಮ ಮನೆಗೆ ಮಾಂಸ ವಿತರಿಸಲಾಗುತ್ತದೆ.ಬಕ್ರಿದ್ ಹಬ್ಬದಲ್ಲಿ ವಿಶೇಷವಾಗಿ ಭಕ್ಷ್ಯಗಳನ್ನು ತಯಾರಿಸಿ ಬಡಿಸಲಾಗುತ್ತದೆ.
ಈ ಸಂದರ್ಭದಲ್ಲಿ ದಾನ ಮಾಡುವುದು ಮತ್ತು ಬಡವರಿಗೆ ಅನ್ನ ನೀಡುವುದು ಸಹ ಮುಸ್ಲಿಂ ಸಂಪ್ರದಾಯದ ಒಂದು ಭಾಗವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಶೈನ್ ಶಾ ಅಹಮದ್ ,ಪ್ರಧಾನ ಕಾರ್ಯದರ್ಶಿ ವಸಿಂ,ಅಲ್ಪ ಸಂಖ್ಯಾತ ಮೈಸೂರು ವಿಭಾಗ ಮಜರ್ ಪಾಷಾ,ರಾಜ್ಯ ಜಂಟಿ ಕಾರ್ಯದರ್ಶಿ
ಸೈಯದ್ ಫಾರೂಕ್,ಪರಿಶಿಷ್ಟ ಜಾತಿ ಕಾಂಗ್ರೆಸ್ ಉಪಾಧ್ಯಕ್ಷ ರಿತೇಶ್ ,ಯೂತ್ ಕಾಂಗ್ರೆಸ್ ಸಂಯೋಜಕ
ಶೌಕತ್ ಅಲಿ ಖಾನ್ ಎಲ್ಲಾ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬಕ್ಕೆ ಶುಭಕೋರಿದ್ದಾರೆ.