ನಂದಿನಿ ಮೈಸೂರು
ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಅರುಣ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆ
ಮೈಸೂರು: 2024-29 ನೇ ಸಾಲಿಗೆ ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶಾಲಾ ಶಿಕ್ಷಣ ಇಲಾಖೆಯ ಸಿ.ಬಿ ಅರುಣ್ ಕುಮಾರ್ 2 ಮತದ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ.
2024 ರಿಂದ 2029 ನೇ ಸಾಲಿಗೆ ರಾಜ್ಯ ಪರಿಷತ್ ಸ್ಥಾನಕ್ಕೆ ಮಾಲೇಗೌಡ ಆಯ್ಕೆಯಾಗಿದ್ದು, ಖಜಾಂಚಿ ಸ್ಥಾನಕ್ಕೆ ರೇಷ್ಮೆ ಇಲಾಖೆಯ ರವಿ ಆಯ್ಕೆಯಾಗಿದ್ದಾರೆ.
ಮೈಸೂರು ನಗರ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರು,ನಿರ್ದೇಶಕರು ಬೆಳಿಗ್ಗೆ 9ರಿಂದ ಸಂಜೆ 4ವರೆಗೆ 73 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. 4 ಗಂಟೆಯಿಂದ ಮತ ಎಣಿಕೆ ನಡೆದು 5 ಗಂಟೆ ವೇಳೆ ಫಲಿತಾಂಶ ಹೊರ ಬಿದ್ದಿದೆ ಎಂದು ಜಿಲ್ಲಾ ಕಾರ್ಯದರ್ಶಿ ರೇವಣ್ಣ ಮಾಹಿತಿ ನೀಡಿದರು.