ಒಂಟಿ ಸಲಗದ ದಾಳಿಗೆ ಅರ್ಜುನ ಆನೆ ಬಲಿ

ನಂದಿನಿ ಮೈಸೂರು

ಒಂಟಿ ಸಲಗದ ದಾಳಿಗೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಸಾವನ್ನಪ್ಪಿದ್ದಾನೆ.

ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಾಕನಕೋಟೆಯಲ್ಲಿ 1968ರಲ್ಲಿ ಖೆಡ್ಡಾಗೆ ಅರ್ಜುನ(64) ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೆಡವಿ ಸೆರೆ ಹಿಡಿದಿದ್ದರು.ಅದನ್ನ ಪಳಗಿಸಿದ ನಂತ್ರ, ಬಳ್ಳೆ ಆನೆ ಶಿಬಿರದಲ್ಲಿ ಇರಿಸಲಾಗಿತ್ತು.ಇಂತಹ ಅರ್ಜುನ ಆನೆ ಸತತ 8 ಬಾರಿ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಬೇಷ್ ಎನಿಸಿಕೊಂಡಿತ್ತು.ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ

 

#WildElephant #Arjuna #Ambari #Dasara #bandipur

Leave a Reply

Your email address will not be published. Required fields are marked *