ಮೈಸೂರು:10 ಜುಲೈ 2022
ನಂದಿನಿ ಮೈಸೂರು
ಮೈಸೂರು ಜಿಲ್ಲಾ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಹಾಗೂ ಸಮಾಜ ಸೇವಕರಾದ ಆರೀಫ್ ಪಾಷ ರವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಮೈಸೂರಿನ ಕೂರ್ಗಳ್ಳಿಯಲ್ಲಿ
42 ನೇ ಹುಟ್ಟು ಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ,50 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದರು.
ಕಾಂಗ್ರೆಸ್ ಪಕ್ಷ ಮುಖಂಡ ಮರಿಗೌಡ ಮಾತನಾಡಿ ಕಾಂಗ್ರೆಸ್ ಪಕ್ಷದ ಮುಖಂಡ ಸಮಾಜ ಸೇವಕ ಆರೀಫ್ ಪಾಷ ರವರ ಹುಟ್ಟು ಹಬ್ಬಕ್ಕೆ ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಶಾಲಾ ಮಕ್ಕಳಿಗೆ ಬಟ್ಟೆ ವಿತರಿಸಲಿದ್ದಾರೆ .ನಾನು ಕೂಡ ಅವರಿಗೆ ಶುಭ ಹಾರೈಸುತ್ತಿದ್ದೇನೆ ಎಂದರು.
ಆರೀಫ್ ಪಾಷರವರನ್ನು
ಮೈಸೂರು ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷ ಬಿಜೆ.ವಿಜಯ್ ಕುಮಾರ್ ಹಾಗೂ ಮರಿಗೌಡ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಘೋಷಿಸಿದ್ದಾರೆ.
ನಗರ ಪಾಲಿಕೆ ಸದಸ್ಯ ನಾಗರಾಜ್,ಕೆಆರ್ ಬ್ಯಾಂಕ್ ನಿರ್ದೇಶಕ ಬಸವರಾಜ ಬಸಪ್ಪ,ಆಯುರ್ ಮಟ್ಟಂ ಸಂಸ್ಥಾಪಕ ಮನು ಮೆನನ್,ಗಂಧನಹಳ್ಳಿ ವೆಂಕಟೇಶ್, ಚುಂಚಯ್ಯ,ಬೆಳವಾಡಿ ಶಿವಕುಮಾರ್,ಕನಕ ಮೂರ್ತಿ ಯುವರಾಜ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ಸ್ನೇಹಿತರು ಶುಭ ಹಾರೈಸಿದರು.