ನಂದಿನಿ ಮೈಸೂರು
ದಿ.ಡಾ.ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಪುನೀತ್ ಅಭಿಮಾನಿಗಳು ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದರು.
ಹರೀಶ್ ಗೌಡ,ಗೋಪಿ ಅಭಿಮಾನಿ ಬಳಗ,ಮೊಗಣ್ಣ ಹರೀಶ್ ಸೂರಜ್ ,ಸಾಗರ ಗೆಳೆಯರ ಬಳಗ,ಮೌರ್ಯ ಆಸ್ಪತ್ರೆ ಆಟೋ ನಿಲ್ದಾಣದ ಗೆಳೆಯರ ಬಳಗ ಒಟ್ಟುಗೂಡಿ ಲಯನ್ಸ್ ಕ್ಲಬ್ ಜೀವಧಾರ ರಕ್ತನಿಧಿ ಸಹಯೋಗದಲ್ಲಿ ಜನರ ಆರೋಗ್ಯದ ದೃಷ್ಠಿಯಿಂದ
ಮೈಸೂರಿನ ಜನತಾನಗರದ ಮೌರ್ಯ ಆಸ್ಪತ್ರೆ ಆಟೋ ನಿಲ್ದಾಣದ ಬಳಿ ಆಯೋಜಿಸಿದ್ದ
ರಕ್ತದಾನ ಶಿಬಿರಕ್ಕೆ 40 ಕ್ಕೂ ಹೆಚ್ಚು ಪುನೀತ್ ಅಭಿಮಾನಿಗಳು,ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.ರಕ್ತದಾನ ಮಾಡಿದ ದಾನಿಗಳಿಗೆ ರಕ್ತನಿಧಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.
ರಕ್ತದಾನಿಗಳಿಗೆ ನೀಡಿರುವ ಪ್ರಮಾಣ ಪತ್ರ 6 ತಿಂಗಳಲ್ಲಿ ಕುಟುಂಬದವರಿಗೆ ಯಾವುದೇ ರಕ್ತ ಅವಶ್ಯಕತೆ ಇದ್ದಲ್ಲಿ ರಕ್ತ ನಿಧಿ ಕೇಂದ್ರಕ್ಕೆ ಸಂಪರ್ಕಿಸಿದ್ದಲ್ಲಿ ಉಚಿತವಾಗಿ ರಕ್ತ ನೀಡಲಾಗುವುದು ಎಂದು ಡಾ.ವೇಣುಗೋಪಾಲ್ ಮಾಹಿತಿ ನೀಡಿದರು.
ಇದೇ ವೇಳೆ ಅಭಿಮಾನಿಗಳಿಗೆ ಒಂದು ಕ್ವಿಂಟಾಲ್ ಚಿಕನ್ ಬಿರಿಯಾನಿ ವಿತರಿಸಲಾಯಿತು.3 ಮಂದಿ ಆಟೋ ಚಾಲಕರು ಆಟೋ ಮೇಲೆ ಅಪ್ಪು ಭಾವಚಿತ್ರ ಹಾಗೂ ಕನ್ನಡದ ಬಾವುಟ ಹಾಕಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡ ಹರೀಶ್ ಗೌಡ,ಮಹಾನಗರ ಪಾಲಿಕೆ ಸದಸ್ಯ ಗೋಪಿ, ಸಮಾಜಸೇವಕ ಯಶ್ವಂತ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಭಾಗಿಯಾಗಿದ್ದರು.