ಕಾಂಗ್ರೆಸ್ ಪಕ್ಷ ಪಿಎಫ್‌ಐ ಅಜೆಂಡಾದಂತೆ ಕಾರ್ಯ ನಿರ್ವವಹಿಸುತ್ತಿದೆ: ಅಮಿತ್ ಶಾ

*ಕಾಂಗ್ರೆಸ್ ಪಕ್ಷ ಪಿಎಫ್‌ಐ ಅಜೆಂಡಾದಂತೆ ಕಾರ್ಯ ನಿರ್ವವಹಿಸುತ್ತಿದೆ: ಅಮಿತ್ ಶಾ*

ಚುನಾವಣಾ ಪ್ರಚಾರದ ಅಂಗವಾಗಿ ಕಿತ್ತೂರು ಕರ್ನಾಟಕದ ಪ್ರದೇಶಗಳಲ್ಲಿ ಪ್ರಚಾರ ಕೈಗೊಂಡಿದ್ದ ಅಮಿತ್ ಶಾ ಕಾಂಗ್ರೆಸ್ ಪಕ್ಷ ಪಿಎಫ್ಐ ಅಜೆಂಡಾದಂತೆ ನಡೆಯುತ್ತಿದೆ ಎಂದು ವಾಗ್ದಾಳಿ ಮಾಡಿದರು. ಕರ್ಣಾಟಕ ವಿಧಾನಸಭಾ ಚುನಾವಣ ಕಣ ಕಾವೇರುತ್ತಿದ್ದು, ಚುನಾವಣಾ ಚಾಣಕ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಕರ್ನಾಟಕದಲ್ಲಿ ತುಂಬಾ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಶಾ ತಮ್ಮ ಕುಶಲ ರಣನೀತಿಗಳಿಂದ ಈ ಬಾರಿ ಪೂರ್ಣ ಬಹುಮತದ ಭಾರತೀಯ ಜನತಾ ಪಾರ್ಟಿಯ ಸರ್ಕಾರ ರಚಿಸಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಾರಿ ಬಹುಮತಕ್ಕಿಂತ 10-15 ಸೀಟುಗಳನ್ನು ಹೆಚ್ಚೇ ಪಡೆಯಲಿದ್ದೇವೆ ಎಂಬ ಭರವಸೆಯನ್ನು ಶಾ ವ್ಯಕ್ತ ಪಡಿಸಿದ್ದಾರೆ.

ಸವದತ್ತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ, ಕಾಂಗ್ರೆಸ್ ಪಾರ್ಟಿ ಆರಿಸಿ ಬಂದರೆ ಪಿಎಫ್ಐ ಮೇಲಿನ ನಿಷೇಧವನ್ನು ಹಿಂಪಡೆಯಲಿದ್ದಾರೆ ಎಂದು ಘೋಷಣೆ ಹೊರಡಿಸಿದ್ದಾರೆ. ದೇಶದ ಸುರಕ್ಷೆಗೆ ಮಾರಕವಾಗಿದ್ದ ಪಿಎಫ್ಐ ಮೇಲೆ ನರೇಂದ್ರ ಮೋದಿ ಸರ್ಕಾರ ನಿಷೇಧ ವಿಧಿಸಿತ್ತು. ಕಾಂಗ್ರೆಸ್‌ನ ಈ ತುಷ್ಟೀಕರಣದ ನೀತಿಯನ್ನು ಖಂಡಿಸುತ್ತಾ ಅಮಿತ್ ಶಾ ‘ದೇಶ ವಿರೋಧಿ ಕಾರ್ಯಗಳನ್ನು ಮಾಡಲು ಯಾರಿಗೂ ಅನುಮತಿಯಿಲ್ಲ, ಯಾರು ದೇಶ ವಿರೋಧಿ ಕೆಲಸಗಳನ್ನು ಮಾಡುತ್ತಾರೋ, ಅವರ ಸ್ಥಾನ ಕಂಬಿಯ ಹಿಂದೆ’ ಎಂದು ಎಚ್ಚರಿಕೆ ನೀಡಿದರು. ಹಾಗೇ ಪಿಎಫ್ಐನ ಎರಡು ಬೇಡಿಕೆಗಳ ಬಗ್ಗೆ ಮಾತನಾಡಿದ ಶಾ, ಅವರು ಅಲ್ಪಸಂಖ್ಯಾತರ ಬಜೆಟ್‌ನ್ನು 10,000 ಕೋಟಿಗಳಿಗೆ ಹೆಚ್ಚಿಸಲು ಕೇಳಿಕೊಂಡಿದ್ದಾರೆ, ಇದನ್ನು ಕಾಂಗ್ರೆಸ್ ಸದ್ದಿಲ್ಲದೇ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದೆ. ಮತ್ತು ಭಾಜಪ ಹೆಚ್ಚಳಿಸಿ, ಆರು ಪ್ರತಿಶತ ನೀಡಿ ಎಂಬುದು ಪಿಎಫ್ಐ ಬೇಡಿಕೆಯಾಗಿದೆ.

ಕಾಂಗ್ರೆಸ್ ತನ್ನ ಆಡಳಿತದಲ್ಲಿ ಸಂವಿಧಾನ ಬಾಹಿರವಾಗಿ ತುಷ್ಟೀಕರಣ ರಾಜಕಾರಣ ಮಾಡುತ್ತಾ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ನಾಲ್ಕು ಪ್ರತಿಶತ plsಮೀಸಲಾತಿಯನ್ನು ನೀಡಿತ್ತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ಆ ಅಸಂವಿಧಾನಿಕ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಇದರ ಜೊತೆಗೆ ಪರಿಶಿಷ್ಠ ಜಾತಿ ಮತ್ತು ಪಂಗಡಗಳು ಮತ್ತು ಹಿಂದುಳಿದ ವರ್ಗಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮಾಜದ ಮೀಸಲಾತಿಯನ್ನು ಹೆಚ್ಚಿಸಿ, ಹಲವು ವರ್ಷಗಳ ನಂತರ ಸಾಮಾಜಿಕ ನ್ಯಾಯವನ್ನು ನೀಡುವ ಕಾರ್ಯವನ್ನು ಭಾಜಪ ಮಾಡಿದೆ ಎಂದರು.

ಹಾಗೇ ಕಾಂಗ್ರೆಸ್ ತನ್ನ ಘೋಷಣಾ ಪತ್ರದ ಮೂಲಕ ಭಜರಂಗ ಬಲಿಯನ್ನು ಅವಮಾನಿಸುವ ಕಾರ್ಯ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ತಮ್ಮ ವಾಗ್ದಾಳಿಯನ್ನು ಮುಂದುವರೆಸುತ್ತಾ ಕಾಂಗ್ರೆಸ್ ಪಾರ್ಟಿ ಅಧಿಕಾರಕ್ಕೆ ಬಂದರೆ ಭಜರಂಗ ದಳವನ್ನು ಪಿಎಫ್ಐನಂತಹ ಉಗ್ರ ಸಂಘಟನೆಗಳಿಗೆ ಹೋಲಿಸಿ ನಿಷೇಧ ಮಾಡುವ ಪ್ರಣಾಳಿಕೆ ಹೊರಡಿಸಿದೆ. ಕಾಂಗ್ರೆಸ್ಸಿನ ನಾಯಕರೊಬ್ಬರು ಭಜರಂಗ ಬಲಿಯ ಜನ್ಮ ತಿಥಿ ಹೇಳೆ, ಬರ್ತ್ ಡೇಟ್ ಹೇಳಿ, ನಿಮ್ಮ ಹತ್ತಿರ ಬರ್ತ್ ಸರ್ಟಿಫಿಕೇಟ್ ಇದೆಯಾ ಎಂದು ಕುಹುಕವಾಡುತ್ತಿದ್ದಾರೆ. ಆದರೆ ಪ್ರಭು ಶ್ರೀರಾಮನ ಅನನ್ಯ ಸೇವಕ ಮತ್ತು ಭಕ್ತ ಭಜರಂಗಿಯ ಜನ್ಮದಿನವನ್ನು ಇಡೀ ದೇಶ ಹನುಮಾನ್ ಜಯಂತಿಯೆಂದು ಆಚರಿಸುತ್ತಿದೆ. ಇದು ಕಾಂಗ್ರೆಸ್ಸಿಗರಿಗೆ ಗೊತ್ತಿರಲಕ್ಕಿಲ್ಲ, ಅವರಿಗೆ ಗೊತ್ತಿರುವುದು ತುಷ್ಟೀಕರಣದ ರಾಜನೀತಿಯೊಂದೆ ಎಂದು ವ್ಯಂಗವಾಡಿದರು.

ಚುನಾವಣಾ ಕಾರ್ಯತಂತ್ರಗಳಲ್ಲಿ ಹೆಸರುವಾಸಿಯಾಗಿರುವ ಅಮಿತ್ ಶಾ, ದಿನವಿಡೀ ರೋಡ್ ಶೋಗಳು, ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷದಲ್ಲಿ ಈಗಾಗಲೇ ಸುಮಾರು ಇಪ್ಪತ್ತು ದಿನಗಳಿಗಿಂತಲೂ ಹೆಚ್ಚು ಸಮಯವನ್ನು ಕರ್ನಾಟಕದಲ್ಲಿ ಕಳೆದಿರುವ ಅಮಿತ್ ಶಾ, ಕರುನಾಡಿನಲ್ಲಿ ಮತ್ತೊಮ್ಮೆ ಕಮಲನವನ್ನು ಅರಳಿಸಲೇ ಬೇಕು ಎಂದು ಸಂಕಲ್ಪ ತೊಟ್ಟಿದ್ದಾರೆ.ಮಣಿಪುರ ಗಲಭೆಯನ್ನು ನಿವಾರಿಸಲು ಎರಡು ದಿನಗಳ ವಿರಾಮ ತೆಗೆದುಕೊಂಡಿದ್ದ ಶಾ, ಶನಿವಾರದಂದು ಮತ್ತೊಮ್ಮೆ ಕರುನಾಡಿಗೆ ಆಗಮಿಸಿ ಕಿತ್ತೂರು ಕರ್ನಾಟಕದಲ್ಲಿ ವಿವಿಧ ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದರು. ಸವದತ್ತಿ, ಅಥಣಿ, ಚಿಕ್ಕೋಡಿ, ಯಮಕನಮರಡಿ ಮುಂತಾದ ಕಿತ್ತೂರು ಕರ್ನಾಟಕದ ಪ್ರದೇಶಗಳಲ್ಲಿ ಮತದಾರ ಪ್ರಭುಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಜನಪರ ಕಾರ್ಯಗಳನ್ನು ಬಿಚ್ಚಿಟ್ಟು ಈ ಬಾರಿ ಪಕ್ಷಕ್ಕೆ ಪೂರ್ಣ ಬಹುಮತ ನೀಡಿ ಎಂದು ಮನವಿ ಮಾಡಿದರು.

ಕಳೆದ ಮಂಗಳವಾರ ಮೈಸೂರು ಪ್ರದೇಶದ ವರುಣಾ ಮುಂತಾದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದ ಅಮಿತ್ ಶಾ, ಸಿದ್ಧರಾಮಯ್ಯನವರ ಲಿಂಗಾಯತ ವಿರೋಧಿ ದೋರಣೆಯನ್ನು ಖಂಡಿಸುತ್ತಾ ನಾಡಿನ ಜನತೆಗೆ ಕಾಂಗ್ರೆಸ್ ಈ ಹಿಂದೆ ಕೂಡ ಲಿಂಗಾಯತರಿಗೆ ಮಾಡಿದ ಅವಮಾನಗಳನ್ನು ಉದಾಹರಣೆಗಳ ಮೂಲಕ ಮತದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ತಮ್ಮ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಒಪ್ಪಿ, ತಮಗೆ ಕರ್ನಾಟಕ ಜನತೆ ಮತ್ತೊಮ್ಮೆ ಪೂರ್ಣ ಬಹುಮತ ನೀಡಬೇಕು ಎಂದು ನೆರೆದಿದ್ದ ಮತದಾರರಿಗೆ ಮನವಿ ಮಾಡಿದರು.

Leave a Reply

Your email address will not be published. Required fields are marked *