ಮಹದೇವ / ನಂದಿನಿ ಮೈಸೂರು
ತಿ.ನರಸೀಪುರ:17 ಡಿಸೆಂಬರ್ 2022
ರಾಜಕೀಯದಲ್ಲಿ ತನ್ನ ಸ್ಥಾನದ ಬಗ್ಗೆ ಅರಿತು,ಮಾತನಾಡುವ ಅರ್ಹತೆ ತನಗಿದೆಯೇ ಎಂಬುದನ್ನು ಬಿಜೆಪಿ ಮುಖಂಡ ಮಂಜು ಅರಿತು ಮಾತನಾಡ ಬೇಕು ಎಂದು ಎಸ್.ಮದನ್ ರಾಜ್ ಅಭಿಮಾನಿ ಬಳಗದ ಅಧ್ಯಕ್ಷ ಆಲಗೂಡು ರಾಚಪ್ಪಾಜಿ ತಿಳಿಸಿದರು.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪುರಸಭೆಯ ಮಾಜಿ ಅಧ್ಯಕ್ಷ ಎಸ್.ಮದನ್ ರಾಜ್ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸಿ ಗೆದ್ದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುವುದಾಗಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪತ್ರಿಕಾ ಗೋಷ್ಠಿ ನಡೆಸಿದ್ದ ಬಿಜೆಪಿ ಮುಖಂಡ ಆಲಗೂಡು ಎಂ.ಮಂಜು ವರುಣಾ ಕ್ಷೇತ್ರದಲ್ಲಿ ಯಾರೇ ನಿಂತರೂ ವಿಜಯೇಂದ್ರರ ಗೆಲುವು ಶತಸಿದ್ದವಾಗಿದ್ದು,ಮದನ್ ರಾಜ್ ರಾಜಕೀಯ ಸನ್ಯಾಸತ್ವಕ್ಕೆ ಸಿದ್ದರಾಗಿರಲಿ ಎಂದು ವ್ಯಂಗ್ಯವಾಡಿದ್ದರು. ಈಹಿನ್ನೆಲೆಯಲ್ಲಿ ಶನಿವಾರ ತಿ.ನರಸೀಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಂಜು ಹೇಳಿಕೆಗೆ ತಿರುಗೇಟು ನೀಡಿ ಮಾತನಾಡಿದ ರಾಚಪ್ಪಾಜಿ ಸಿದ್ದರಾಮಯ್ಯರಂತಹ ರಾಜಕೀಯ ಧುರೀಣರ ಬಗ್ಗೆ ಮಾತನಾಡಬೇಕಾದರೆ ತಮ್ಮ ಘನತೆ,ರಾಜಕೀಯ ಸ್ಥಾನ ಮಾನದ ಬಗ್ಗೆ ಅರಿವಿರಬೇಕು.ಆಲಗೂಡು ಮಂಜು ಎಂಬಾತನಿಗೆ ಯಾವ ರಾಜಕೀಯ ಹಿನ್ನೆಲೆ ಇದೆ.ಮೇರು ವ್ಯಕ್ತಿತ್ವದ ಸಿದ್ದರಾಮಯ್ಯ ರ ಬಗ್ಗೆ ಮಾತನಾಡುವ ಅರ್ಹತೆ,ಯೋಗ್ಯತೆ ಯಾವುದೂ ಇಲ್ಲ.ಬೀದಿಯಲ್ಲಿ ನಿಂತು ಕುಂತಿರೋರೆಲ್ಲಾ ಬಾಯಿಗೆ ಬಂತಂತೆ ಹೇಳಿಕೆ ಕೊಡುವುದಲ್ಲ.ಅದಕ್ಕೆ ರಾಜಕೀಯದಲ್ಲಿ ತಮ್ಮ ಸ್ಥಾನವೇನು,ಪಕ್ಷದಲ್ಲಿ ತಮ್ಮ ಸಾಧನೆಯನ್ನು ಅರಿಯಬೇಕಾಗುತ್ತದೆ, ಮದನ್ ರಾಜ್ ರವರಿಗೆ ರಾಜಕೀಯ ಸನ್ಯಾಸತ್ವ ಸ್ವೀಕರಿಸಲು ಸಿದ್ದರಾಗಿರುವಂತೆ ಹೇಳಲು ಮಂಜು ಯಾರು? ಈತ ಯಾವುದಾದರೂ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜನ ಪ್ರತಿನಿಧಿಯಾಗಿ ಜನಸೇವೆ ಮಾಡಿರುವ ಹಿನ್ನೆಲೆ ಇದೆಯಾ ಎಂದು ಮಂಜು ಮೇಲೆ ವಾಗ್ದಾಳಿ ನಡೆಸಿದರು.
*ಸಾಮೂಹಿಕ ಸನ್ಯಾಸತ್ವಕ್ಕೆ ಸಿದ್ಧ* !
ಸಿದ್ದರಾಮಯ್ಯ ಹಾಗು ಮದನ್ ರಾಜ್ ಬಗ್ಗೆ ಆರೋಪ ಮಾಡುತ್ತಿರುವ ಆಲಗೂಡು ಮಂಜು ತಮ್ಮ ಪಕ್ಷದ ಟಿಕೆಟ್ ಪಡೆದು ಕೇವಲ ಗ್ರಾ.ಪಂ.ಚುನಾವಣೆಯಲ್ಲಿ ಗೆದ್ದು ಬಂದಲ್ಲಿ ನಾವೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಆಲಗೂಡು ರಾಚಪ್ಪಾಜಿ ಸವಾಲೆಸೆದರು.
*ಸಿದ್ದು ಗೆಲುವು ಖಚಿತ*
ಕಾಂಗ್ರೆಸ್ ಮುಖಂಡ ರಘು(ರಾಶಿ) ಮಾತನಾಡಿ ಸಿದ್ದರಾಮಯ್ಯ ರವರು ರಾಜಕಾರಣದಲ್ಲಿ ಮೇರು ವ್ಯಕ್ತಿತ್ವಹೊಂದಿದ್ದು,ವರುಣಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಗಳ ಅನುದಾನ ತಂದು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದಾರೆ.ಮುಂದಿನ ಚುನಾವಣೆಯಲ್ಲಿ ಅವರ ವಿರುದ್ಧ ಯಾರೇ ಸ್ಪರ್ಧಿಸಿದರೂ ಸುಲಭವಾಗಿ ಜಯ ಗಳಿಸಲಿದ್ದಾರೆ.ಮುಖ್ಯಮಂತ್ರಿಯೂ ಆಗಲಿದ್ದಾರೆ,ಸಿದ್ದು ಹಾಗು ಮದನ್ ರಾಜ್ ರವರ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡ ಮಂಜು ತಾಕತ್ತಿದ್ದರೆ ಯಾವುದಾದರೂ ಸ್ಥಳೀಯ ಚುನಾವಣೆಯಲ್ಲಿ ಗೆದ್ದು ತನ್ನ ಸಾಮರ್ಥ್ಯ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ನಂಜುಂಡ,ಮುಖಂಡರಾದ ಸೋಮಣ್ಣ,ಉದ್ಯಮಿ ದಿನಕರ್ ನಾಯಕ್,ಯಜಮಾನರಾದ ದೊರೆ ಪುನೀತ್, ಗೂಳಿ ಸಂತೋಷ್, ಪ್ರಕಾಶ್, ರವಿ ಮಟನ್ ಸಂತೋಷ್,ಗೂಳಿ ಸೋಮಣ್ಣ,ಶ್ಯಾಮ್,ಕದಂಬ ಗೋವಿಂದ,ಪ್ರವೀಣ್,ರಮೇಶ್, ಕೃಷ್ಣ,ಸೂರಪ್ಪ,ಶಿವು ಹಾಜರಿದ್ದರು.