ಮೈಸೂರು:14 ಫೆಬ್ರವರಿ 2022
ನಂದಿನಿ ಮೈಸೂರು
ಕಾಂಗ್ರೇಸ್ ಪಕ್ಷದ ಡಿಸಿಸಿ ಜನರಲ್ ಸೆಕ್ರೇಟ್ರಿ ಸ್ಥಾನಕ್ಕೆ ಮುತಾಹಿರ್ ಪಾಷ ಅಧಿಕೃತವಾಗಿ ರಾಜೀನಾಮೆ ನೀಡಿದರು.
ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿದ ಮುತಾಹಿರ್ ಪಾಷ ಹಾಗೂ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಆರ್.ಮೂರ್ತಿ ಕಚೇರಿಯಲ್ಲಿ ಇಲ್ಲದಿದ್ದರಿಂದ ಗಿರೀಶ್ ರವರಿಗೆ ರಾಜೀನಾಮೆ ಪತ್ರ ನೀಡಿದರು.
ನಂತರ ಮುತಾಹಿರ್ ಪಾಷಾ ಹಾಗೂ ಅಬ್ದುಲ್ ಗಫೂರ್
ಮಾತನಾಡಿ ನಾನು ನನ್ನ ಡಿಸಿಸಿ ಜನರಲ್ ಸೆಕ್ರೇಟ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷ ಅಬ್ದುಲ್ ಖಾದರ್ ಶಾಹಿದ್ ರವರಿಗೆ 6 ವರ್ಷ ಉಚ್ಛಾಟನೆ ಮಾಡಿದ್ದಾರೆ
ಇದರಿಂದ ಅಲ್ಪ ಸಂಖ್ಯಾತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ.ನಮ್ಮ ಮನಸ್ಸಿಗೆ ತುಂಬ ನೋವಾಗಿರುವುದರಿಂದ ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ.ಶಾಹಿದ್ ಯಾವ ಪಕ್ಷಕ್ಕೆ ಹೋಗುತ್ತಾರೋ ಆ ಪಕ್ಷಕ್ಕೆ ನಾವು ಕೈ ಜೋಡಿಸುತ್ತೇವೆ ಎಂದರು.