ನಂದಿನಿ ಮೈಸೂರು
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಹಾಗೂ ದಲಿತ, ಹಿಂದುಳಿದ,ಅಲ್ಪಸಂಖ್ಯಾತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅಹಿಂದ ದುಂಡು ಮೇಜಿನ ಅಧಿವೇಶನ ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿ ಇರುವ ಗುರು ರೆಸಿಡೆನ್ಸಿ ಯಲ್ಲಿ ಕಾರ್ಯಕ್ರಮ ಜರುಗಿತು.
ಭಾರತ ದೇಶದ ಸಂವಿಧಾನ ಪೀಠಿಕೆಯನ್ನು ಮಂಡಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.ಅಹಿಂದ ದುಂಡು ಮೇಜಿನ ಅಧಿವೇಶನದ ಪ್ರಾಸ್ತವಿಕ ಭಾಷಣವನ್ನು ನೆರವೇರಿಸಿಕೊಟ್ಟ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ಕೆ. ಎಸ್. ಶಿವರಾಮುರವರು ಮಾತನಾಡಿ ಸಂವಿಧಾನ ಹಾಗು ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಕೋರಿದರು ಅಹಿಂದ ಸಂಘಟನೆಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ನಾವೆಲ್ಲರೂ ಕಳೆದುಕೊಳ್ಳುತ್ತೇವೆ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ನೀಚ ಬುದ್ಧಿ ಸುಳ್ಳುಗಾರನೆಂದು ತೋರಿಸಿಕೊಟ್ಟಿದ್ದಾರೆ ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘಟನೆಗಳ ರೂವಾರಿಯಾಗಿ ಕೆಲಸ ಮಾಡುತ್ತಿರುವ ಮೋದಿಯವರಿಗೆ ತಕ್ಕ ಪಾಠವನ್ನು ಕಲಿಸಲು ಎಲ್ಲಾ ಸಂಘಟನೆಗಳಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೋರವ ಮುಖಾಂತರ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆಕೊಟ್ಟರು.
ಅಧಿವೇಶನದ ಉದ್ಘಾಟನೆಯನ್ನು ಪ್ರೊ. ಅರವಿಂದ ಮಾಲಗತ್ತಿ, ನಿಕಟ ಪೂರ್ವ ಅಧ್ಯಕ್ಷರು, ಕನ್ನಡ ಸಾಹಿತ್ಯ ಅಕಾಡೆಮಿ ಅವರು ನೆರವೇರಿಸಿ ಕೊಟ್ಟರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿಧಾನಪರಿಷತ್ ಸದಸ್ಯರಾದ ಡಾ. ಡಿ ತಿಮ್ಮಯ್ಯ ರವರು ಮಾತನಾಡಿ ಬಿಜೆಪಿ ತೊಲಗಿಸಿ ಕಾಂಗ್ರೆಸ್ ಉಳಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ತಮ್ಮ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದರು ಬಿಜೆ ವಿಜಯ್ ಕುಮಾರ್ ಅಧ್ಯಕ್ಷರು ಮೈಸೂರು ಕಾಂಗ್ರೆಸ್ ಗ್ರಾಮಾಂತರ ಸಮಿತಿ ಮಾತನಾಡಿ ಸಾಹಿತಿಗಳು ಪ್ರಗತಿಪರ ಚಿಂತಕರು ಅಹಿಂದ ಸಂಘಟನೆಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು ಹಾಗೂ ಇಡೀ ರಾಜ್ಯದಲ್ಲಿ ಮೈಸೂರು ಭಾಗದಲ್ಲಿ ಮೊದಲಿಂದಲೂ ಸಹ ಪ್ರಗತಿಪರ ಸಂಘಟನೆಗಳು ಈ ಒಂದು ವ್ಯವಸ್ಥೆಯ ಕೋಮುವಾದದ ವಿರುದ್ಧ ನಿಂತು ಹೋರಾಟವನ್ನು ಮಾಡಿಕೊಂಡು ಬರುತ್ತಿದೆ ಹಾಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾಗೃತಿ ವೇದಿಕೆ ಅಡಿನಲ್ಲಿ ನಡೆದಿರುವಂತಹ ಹೋರಾಟ ಪ್ರತಿಭಟನೆ ಮತ್ತು ಈ ದುಂಡು ಮೇಜಿನ ಅಧಿವೇಶನಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮಾಜಿ ಸಚಿವರಾದ ಶಿವಣ್ಣ ಮಾಜಿ ಶಾಸಕರುಗಳಾದ ನಂಜುಂಡಸ್ವಾಮಿ ಭಾರತೀ ಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೋರುವರ ಮೂಲಕ ನಿರ್ಣಯಕ್ಕೆ ಸಾಕ್ಷಿಯಾದರು.
ಈ ಅಧಿವೇಶನದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊಫೆಸರ್ ಕಾಳೇಗೌಡ ನಾಗವಾರ, ಹಾಗೂ ಶ್ರೀ ಹರಿಹರ ಆನಂದ ಸ್ವಾಮಿ ದಲಿತ ಮುಖಂಡರು ದಲಿತ ಸಂಘರ್ಷ ಸಮಿತಿ. ಆರ್ ಮೂರ್ತಿ ಅಧ್ಯಕ್ಷರು ಮೈಸೂರಿನ ನಗರ ಕಾಂಗ್ರೆಸ್ ಸಮಿತಿ. ಎಫ್ ಎಂ ಕಲೀಮ್ ಅಧ್ಯಕ್ಷರು,ರೆಸ್ಪಾನ್ಸಿಬಲ್ ಸಿಟಿಜನ್ ಆಫ್ ವಾಯ್ಸ್ . ಕದೀರ್ ಅಹ್ಮದ್ ಮುಸ್ಲಿಂ ಸಮುದಾಯದ ಮುಖಂಡರು ಫ್ರಾನ್ಸಿಸ್ ಕ್ರಿಶ್ಚಿಯನ್ ಸಮುದಾಯದ ಮುಖಂಡರು ನಾರಾಯಣ್ ಮಾಜಿ ಮಹಾಪೌರರು, ಸುಬ್ರಹ್ಮಣ್ಯ ನಿಕಟಪೂರ್ವ ಅಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಯು ವೆಂಕೋಬ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಉಪಾರ ಸಂಘ ಎಚ್ಎಸ್ ಪ್ರಕಾಶ್ ಜಿಲ್ಲಾಧ್ಯಕ್ಷರು ಕುಂಬಾರ ಸಮಾಜ, ಎಸ್ ಯೋಗೀಶ ಉಪ್ಪಾರ ಜಿಲ್ಲಾಧ್ಯಕ್ಷರು ಮೈಸೂರು ಜಿಲ್ಲಾ ಉಪ್ಪಾರ ಸಮಾಜ, ಎಸ್ ರವೀ ನಂದನ್ ಜಿಲ್ಲಾಧ್ಯಕ್ಷರು ಮಡಿವಾಳ ಸಮಾಜ, ಮೊಗಣ್ಣಚಾರ್ ಮೈಸೂರು ಬಡಗಿ ವಿಶ್ವಕರ್ಮ ಸಮಾಜ, ಎನ್ ಆರ್ ನಾಗೇಶ್ ಜಿಲ್ಲಾಧ್ಯಕ್ಷರು ಸವಿತಾ ಸಮಾಜ, ಲೋಕೇಶ್ ಕುಮಾರ್ ಮಾದಾಪುರ ತಿಮ್ಮಯ್ಯ ಕಾರ್ಯದರ್ಶಿ ಎಸ್ಸಿ ಎಸ್ಟಿ ವಕೀಲರ ಕ್ಷೇಮಾಭಿವೃದ್ಧಿ ಸಂಘ ಎ ಆರ್ ಕಾಂತರಾಜು ಸಂಘಟನಾ ಕಾರ್ಯದರ್ಶಿ ಎಸ್ ಸಿ ಎಸ್ ಟಿ ವಕೀಲರ ಕ್ಷೇಮಾಭಿವೃದ್ಧಿ ಸಂಘ ಸಾಹಿತಿಗಳು ಪ್ರಗತಿಪರ ಚಿಂತಕರು ಹಾಗೂ ಕರ್ನಾಟಕ ಕಾಂಗ್ರೆಸ್ ನ ಹಿರಿಯ ಕಿರಿಯ ಮುಖಂಡರುಗಳು ಮಹಿಳಾ ಮುಖಂಡರುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ದುಂಡು ಮೇಜಿನ ಅಧಿವೇಶನದ ಈ ಸಭೆಯಲ್ಲಿ ಹಾಜರಿದ್ದ ಎಲ್ಲ ಸಂಘಟನೆಗಳ ಮುಖಂಡರುಗಳು ಪದಾಧಿಕಾರಿಗಳು ಸಾಹಿತಿಗಳು ವಿಮರ್ಶಕರು ಪ್ರಗತಿಪರ ಮಹಿಳಾ ಮುಖಂಡರುಗಳು ಚಿಂತಕರು ಓಕ್ಕೋರಲನಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಕೋರುವ ಮುಖಾಂತರ ನಿರ್ಣಯವನ್ನು ಮಂಡಿಸಲಾಯಿತು.