ಟಿ.ನರಸೀಪುರ :30 ಜುಲೈ 2022
ನಂದಿನಿ ಮೈಸೂರು
ಅಂಗಡಿ ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರಿಗೆ ಸರಗಳ್ಳತನವನ್ನೂ ಮಾಡಿರುವುದಾಗಿ ಖದೀಮರು
ಬಾಯಿಬಿಟ್ಟಿದ್ದಾರೆ.
ಎಂ ಎಸ್ ಮಂಜುನಾಥ್ ಬಿನ್ ಶ್ರೀಕಂಠಸ್ವಾಮಿ ಅಂಗಡಿ ವ್ಯಾಪಾರದಲ್ಲಿದ್ದಾಗ ಬೇರೆ ಕೆಲಸದ ನಿಮಿತ್ತ ಅಂಗಡಿಯ ಬಾಗಿಲನ್ನು ಹಾಕದೆ ರೋರಿಂಗ್ ಶೆಟ್ಟರ್ ನ್ನು ಎಳೆದಿದ್ದು , ಹೊರಗಡೆ ಹೋಗಿ ಬರುವಷ್ಟರಲ್ಲಿ ಅಂಗಡಿಯ ಒಳಗಡೆ ನುಗ್ಗಿ ಗಲ್ಲಪೆಟ್ಟಿಗೆಯಲ್ಲಿದ್ದ 16000 / – ರೂ ಹಣವನ್ನು ಕಳ್ಳತನ ವಾಗಿರುತ್ತದೆಂದು ನೀಡಿದ ದೂರಿನ ಮೇರೆಗೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ನಂತರ
ಪ್ರಕರಣದ ಪತ್ತೆಗಾಗಿ ಮೈಸೂರು ಜಿಲ್ಲೆಯ ಎಸ್.ಪಿ. ಆರ್ ಚೇತನ್ , ಅಡಿಷನಲ್ ಎಸ್.ಪಿ. ಡಾ || ನಂದಿನಿ , ಬಿ ಎನ್ . ನಂಜನಗೂಡು ಡಿ.ವೈ.ಎಸ್.ಪಿ. ಗೋವಿಂದರಾಜು ಟಿ.ನರಸೀಪುರ .ಪಿ.ಐ . ಕೃಷ್ಣಪ್ಪ ರವರ ಮಾರ್ಗದರ್ಶನದಲ್ಲಿ ಟಿ.ನರಸೀಪುರ ಪಿ.ಎಸ್.ಐ. ಮಹೇಶ್ ಕುಮಾರ್ ಬಿ , ಕೆ ನೇತೃತ್ವದ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು ನಂತರ ಪಿ.ಎಸ್.ಐ. ಮಹೇಶ್ ಕುಮಾರ್ ಬಿ , ಕೆ ನೇತೃತ್ವದ ತಂಡವು ತಕ್ಷಣ ಕಾರ್ಯ ಪ್ರವೃತ್ತರಾಗಿ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಅದಲ್ಲದೇ ಕೃತ್ಯದ ಜೊತೆಗೆ ಈ ಹಿಂದೆಯೂ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಮೂಗೂರಿನಲ್ಲಿ ಒಂದು ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು ತನಿಖೆ ನಡೆಸಿದಾಗ , ಆದಿಬೆಟ್ಟಹಳ್ಳಿ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ 55 ಗ್ರಾಂ ತೂಕದ 02 ಎಳೆ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದೇವು ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ 03 ಜನ ಆರೋಪಿತರು ದಸ್ತಗಿರಿಯಾಗಿದ್ದು ಸದರಿ ಆರೋಪಿತರಿಂದ 40 ಗ್ರಾಂ ಚಿನ್ನ ಹಾಗೂ 13500 /
ನಗದು ಹಣವನ್ನು ಅಮಾನತು ಪಡಿಸಿಕೊಂಡು ಆರೋಪಿತರನ್ನು ನ್ಯಾಯಂಗ ಬಂಧನಕ್ಕೆ ನೀಡಲಾಗಿದೆ .
ಈ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಪಿ.ಎಸ್.ಐ ಬಿ.ಕೆ ಮಹೇಶ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ -99, ಭಾಸ್ಕರ್ , ಸಿ.ಪಿ.ಸಿ 235- , ಗೋವಿಂದರಾಜು , ಸಿಪಿಸಿ -614 , ಮಲಗೌಡ ಕೆಂಪಿ , ಸಿ.ಪಿ.ಸಿ 626, ಪರಶುರಾಮ್ ನಾಟೀಕರ್ ಸಿ.ಪಿ.ಸಿ 628 , ರಂಗಸ್ವಾಮಿ ಮತ್ತು ಸಿ.ಪಿ.ಸಿ 532 ಮೋಹನ್ ಕುಮಾರ್ ರವರುಗಳು ಭಾಗವಹಿಸಿದ್ದರು .
ಅಧಿಕಾರಿ ಮತ್ತು ಸಿಬ್ಬಂಧಿಗಳ ಈ ಉತ್ತಮ ಪತ್ತೆ ಕಾರ್ಯವನ್ನು ಮೈಸೂರು ಜಿಲ್ಲೆಯ ಎಸ್.ಪಿ. ಆರ್ ಚೇತನ್ ರವರು ಹಾಗೂ ಅಡಿಷನಲ್ ಎಸ್.ಪಿ. ಡಾ || ನಂದಿನಿ ನಂಜನಗೂಡು ಡಿ.ವೈ.ಎಸ್.ಪಿ. ಗೋವಿಂದರಾಜು ಟಿ.ನರಸೀಪುರ .ಪಿ.ಐ . ಕೃಷ್ಣಪ್ಪ ರವರುಗಳು ಪ್ರಶಂಶಿಸಿ ನಗದು ಬಹುಮಾನ ಘೋಷಿಸಿರುತ್ತಾರೆ .