ಶಾಲೆಯಲ್ಲಿದ್ದ ವಿಡಿಯೋ ಕ್ಯಾಮರಾ ಕದ್ದ ಕಳ್ಳನ ಬಂಧಿಸುವಲ್ಲಿ ನಜರಬಾದ್ ಪೊಲೀಸರು ಯಶಸ್ವಿ

ನಂದಿನಿ ಮೈಸೂರು

ಶಾಲೆಯಲ್ಲಿದ್ದ ವಿಡಿಯೋ ಕ್ಯಾಮರಾ ಕಳುವು ಮಾಡಿದ ಆರೋಪಿಯನ್ನ ಬಂಧಿಸುವಲ್ಲಿ ನಜರಬಾದ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 1.71 ಲಕ್ಷ ಮೌಲ್ಯದ 2 ವಿಡಿಯೋ ಕ್ಯಾಮರಾ ವಶಪಡಿಸಿಕೊಂಡಿದ್ದಾರೆ.

ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ವಸಂತಮಹಲ್ ನಲ್ಲಿ ಆಗಸ್ಟ್ 20 ರಂದು ಆರೋಪಿ 2 ವಿಡಿಯೋ ಕ್ಯಾಮರಾ ಕಳ್ಳತನ ಮಾಡಿದ್ದ.ಪ್ರಕರಣ ದಾಖಲಿಸಿಕೊಂಡ ನಜರಬಾದ್ ಠಾಣೆ ಪೊಲೀಸರು ಕೇವಲ 24 ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪರಾಧ ಮತ್ತು ಸಂಚಾರ ಡಿಸಿಪಿ ಗೀತಾ ಎಂ.ಎಸ್.ಹಾಗೂ ದೇವರಾಜ ವಿಭಾಗದ ಎಸಿಪಿ ಶಶಿಧರ್ ಮಾರ್ಗದರ್ಶನದಲ್ಲಿ ನಜರಬಾದ್ ಠಾಣೆಯ ಇನ್ಸ್ಪೆಕ್ಟರ್ ಕೆ.ಜೀವನ್ ನೇತೃತ್ವದಲ್ಲಿ ಪಿಎಸ್ಸೈ ಗಳಾದ ವೈಶಾಲಿ.ಎ.ಬಿರಾದಾರ್,ರಘು ಪ್ರೊಬೆಷನರಿ ಪಿಎಸ್ಸೈ ಚಂದ್ರಶೇಖರ್ ಇಟಗಿ,ಎಎಸ್ಸೈ ಮಾರುತಿ ಅಂತರಗಟ್ಟಿ ಸಿಬ್ಬಂದಿಗಳಾದ ಸತೀಶ್ ಕುಮಾರ್,ಕಿರಣ್ ರಾಥೋಡ್,ಸಂತೋಷ್ ಕುಮಾರ್,ಸವಿತಾ ಬಸವರಾಜು ರವರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

Leave a Reply

Your email address will not be published. Required fields are marked *