ತಂಬಾಕು ಮುಕ್ತ ಸಮಾಜಕ್ಕೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಅಭಿಯಾನ

ನಂದಿನಿ ಮೈಸೂರು

ತಂಬಾಕು ಮುಕ್ತ ಸಮಾಜಕ್ಕೆ ಭಾರತ್
ಕ್ಯಾನ್ಸರ್ ಆಸ್ಪತ್ರೆಯ ಅಭಿಯಾನ

ಮೈಸೂರು: ತಂಬಾಕು ಸೇವನೆ ಮತ್ತು ಉತ್ಪಾದನೆಯಲ್ಲಿ ಭಾರತ ಎರಡನೆಯ ಸ್ಥಾನದಲ್ಲಿದೆ. GATS (Global adult tobacco survey 2019) ರ ವರದಿಯ ಪ್ರಕಾರ ಸರಿಸುಮಾರು 267 ಮಿಲಿಯನ್ ಭಾರತೀಯರು ತಂಬಾಕು ಸೇವನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ 100 ಮಿಲಿಯನಷ್ಟು ಭಾರತೀಯರು, ಬೀಡಿ-ಸಿಗರೇಟು ನಂತರ ಹೊಗೆ ಉಂಟು ಮಾಡುವ ತಂಬಾಕು ಸೇವಿಸುತ್ತಿದ್ದು, 200 ಮಿಲಿಯನಷ್ಟು ಭಾರತೀಯರು ಗುಟ್ಕಾ ಜರ್ದಾವನ್ನು ತಿನ್ನುತ್ತಿದ್ದಾರೆ.

ತಂಬಾಕು ಸೇವನೆ ವ್ಯಸನಕಾರಿಯಾಗಿದ್ದು, ತಂಬಾಕಿನಲ್ಲಿನ ನಿಕೋಟಿನ್ ಎಂಬುವ ಅಂಶ ಉತ್ತೇಜಕದಂತೆ ಕೆಲಸ ಮಾಡುತ್ತದೆ ಮತ್ತು ಮನುಷ್ಯರನ್ನು ಅದರ ದಾಸರನ್ನಾಗಿಸುತ್ತದೆ. ತಂಬಾಕಿನಲ್ಲಿ ಸುಮಾರು 7000 ರಾಸಾಯನಿಕ ಅಂಶಗಳಿದ್ದು, ಅದರಲ್ಲಿನ 70 ರಷ್ಟು ಅಂಶಗಳು ಕ್ಯಾನ್ಸರ್‌ಕಾರಗಳಾಗಿವೆ. ತಂಬಾಕು ಸೇವನೆಯಿಂದ ಬಾಯಿ, ಗಂಟಲು, ಅನ್ನನಾಳ, ಶ್ವಾಸಕೋಶದ ಕ್ಯಾನ್ಸರ್‌ಗಳಿಗೆ ನೇರ ಕಾರಕವಾಗಿದ್ದು, ಅದಲ್ಲದೆ ಜಠರ, ಮೂತ್ರಕೋಶ ಮುಂತಾದ ಕ್ಯಾನ್ಸರ್‌ಗಳು ಸಂಭವಿಸುತ್ತದೆ ಎನ್ನುತ್ತಾರೆ ಬಿಎಚ್ಐಒ ಆಸ್ಪತ್ರೆ ನಿರ್ದೇಶಕಿ ಅಂಜಲಿ ಅಜಯ್ ಕುಮಾರ್.

ರಕ್ತದ ಒತ್ತಡ, ಹೃದಯಾಘಾತ (Heart attack), ಪಾರ್ಶ್ವವಾಯು (Stroke), ಬಂಜೆತನ ಹೀಗೆ ಹತ್ತು ಹಲವು ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಈ ಎಲ್ಲಾ ಅನಾರೋಗ್ಯ ಸಮಸ್ಯೆಗಳು ವ್ಯಕ್ತಿಗತ ಆರ್ಥಿಕ ಸ್ಥಿತಿಯಲ್ಲಿ ಪರಿಣಾಮ ಬೀರುವುದಲ್ಲದೆ ಒಟ್ಟಾರೆ ದೇಶದ ಆರ್ಥಿಕತೆಯನ್ನು ಕುಂಠಿತಗೊಳಿಸುತ್ತದೆ. ೨೦೧೧ರ ಅಂಕಿ ಅಂಶಗಳ ಪ್ರಕಾರ ೩೫-೬೯ ವರ್ಷ ವಯಸ್ಸಿನವರಲ್ಲಿ ೯೮೩ ಕೋಟಿಯಷ್ಟು ತಂಬಾಕಿನ ದುಷ್ಪರಿಣಾಮಕ್ಕಾಗಿ ಆರ್ಥಿಕ ವ್ಯಯವಾಗಿದೆ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ
ವಿಕಿರಣ ಆಂಕೊಲಾಜಿಸ್ಟ್ ಸಲಹೆಗಾರ ಡಾ. ವಿನಯ್ ಮುತ್ತಗಿ ತಿಳಿಸಿದ್ದಾರೆ.

ಸೆಕೆಂಡ್ ಹ್ಯಾಂಡ್ ಸ್ಮೋಕ್ (Second hand smoke)

ತಂಬಾಕು ಸೇವನೆ ಮಾಡುವವರಷ್ಟೇ ಕಾಯಿಲೆಗಳಿಗೆ ತುತ್ತಾಗುವುದಲ್ಲದೆ ಅವರ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲು ಗಂಭೀರ ಪರಿಣಾಮ ಬೀರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ೩೮.೭% ರಷ್ಟು ತಂಬಾಕು ಸೇವಿಸಿದ ಭಾರತೀಯರಲ್ಲಿ ಕಾಯಿಲೆಗಳು ಕಾಣಸಿಗುತ್ತಿದೆ. ಇದಕ್ಕೆ Second hand smoke ಕಾರಣ ಎನ್ನಬಹುದು.

ಶಾಲಾ, ಕಾಲೇಜುಗಳಲ್ಲಿನ ಬಾಲಕ ಬಾಲಕಿಯರಲ್ಲಿ ತಂಬಾಕು ಸೇವಿಸುವ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದು ಚಿಂತಾಜನಕವಾಗಿದೆ. ೨೦೧೯ರ ವೇಳೆಗೆ ಸರಿಸುಮಾರು ೧೩-೧೫ ವರ್ಷ ೧೦% ಬಾಲಕರು, ೪.೨% ಬಾಲಕಿಯರು ತಂಬಾಕು ಸೇವಿಸುವುದು ದಾಖಲಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಸ್ವಾಸ್ಥ್ಯ ಕ್ಕಾಗಿ ಯುವ ಪೀಳಿಗೆಯಲ್ಲಿ ತಂಬಾಕು ಮತ್ತು ಅದರ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗ ಮೇ ೩೧ ವಿಶ್ವ ತಂಬಾಕುರಹಿತ ದಿನದ ಸೂಚ್ಯವಾಗಿ ಮೇ ತಿಂಗಳು ಮೈಸೂರಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದೆ. ಅದರ ಮುಂದುವರಿದ ಭಾಗವಾಗಿ ಮೇ ೩೧ ರಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ತಂಬಾಕುಮುಕ್ತ ಸಮಾಜಕ್ಕೆ ಜಾಥಾ ಏರ್ಪಡಿಸಲಾಗಿದೆ. ಈ ಅಭಿಯಾನದಲ್ಲಿ ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಪುಷ್ಟಿ ತುಂಬಬೇಕಾಗಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಮಾಧವಿ ವಿನಂತಿಸಿದ್ದಾರೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ಮಲಾ ಮೂರ್ತಿ ಹಾಗೂ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ರಕ್ಷಿತ್ ಇದ್ದರು.

Leave a Reply

Your email address will not be published. Required fields are marked *