ನಂದಿನಿ ಮೈಸೂರು
ಕುಮಾರಣ್ಣ ಗೆಲುವು ಖಚಿತ, ಕೇಂದ್ರದ ಮಂತ್ರಿಯಾಗೋದು ನಿಶ್ಚಿತ
ಬಿಜೆಪಿ ಮುಖಂಡ ಗುರುಪಾದಸ್ವಾಮಿ ಅಭಿಮತ,
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ರವರು 2ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿ ಪ್ರಧಾನಿ ನರೇಂದ್ರ ಮೋದಿ ರವರ ಸರ್ಕಾರದ ಸಂಪುಟ ಆಡಳಿತದಲ್ಲಿ ಕೇಂದ್ರ ಸಚಿವರಾಗಲಿದ್ದಾರೆ ಎಂದು ಬಿಜೆಪಿ ಮುಖಂಡ ಗುರುಪಾದಸ್ವಾಮಿ ಅಭಿಮತ ವ್ಯಕ್ತಪಡಿಸಿದ್ದಾರೆ,
ಮಂಡ್ಯ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಹಳೇಮೈಸೂರು ಭಾಗದ ವೀರಶೈವ ಮುಖಂಡ ಗುರುಪಾದಸ್ವಾಮಿ ರವರು ಪ್ರಧಾನಿ ನರೇಂದ್ರ ಮೋದಿ ರವರ ಉತ್ತಮ ಆಡಳಿತದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗಿದೆ, ಕೇಂದ್ರ ಸರ್ಕಾರದ ಹತ್ತು ವರ್ಷದ ಸಾಧನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪಿದೆ, ಯುವ ಉದ್ಯಮಗಳ ಸ್ಥಾಪಕರಿಗೆ ಪ್ರೋತ್ಸಾಹ, ರೈತಾಪಿ ಕೃಷಿಕರು ಶ್ರಮಿಕ ವರ್ಗದವರನ್ನ ಮುಖ್ಯವಾಹಿನಿಗೆ ತರಲು ಮೋದಿಯವರು ವಿಶ್ವಕರ್ಮ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ, ಸಮಸ್ಥ ಸಮುದಾಯದವರನ್ನು ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಸಮಾನವಾಗಿ ತೆಗೆದುಕೊಂಡು ಸಮಗ್ರ ಆಡಳಿತದ ಮೂಲಕ ಭಾರತವನ್ನ ವಿಶ್ವಗುರು ಎಂಬ ಹೆಗ್ಗಳಿಕೆಗೆ ಕಾರಣಕರ್ತರು ಮೋದಿಯವರು ಎಂದರು,
ಈ ಭಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಹೆಚ್. ಡಿ ಕುಮಾರಸ್ವಾಮಿ ರವರನ್ನ 2ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆಯಿಂದ ಜಯಗಳಿಸುವಂತೆ ಮಂಡ್ಯ ಜನತೆ ಮುಂದಾಗಬೇಕಿದೆ, ಮಂಡ್ಯ ಎಂದರೆ ಇಂಡಿಯಾಗೆ ಗೊತ್ತು ಹಾಗಾಗಿ ಮಂಡ್ಯದ ಅಸ್ಮಿತೆ ಕೃಷಿ ರೈತಾಪಿ ಚಟುವಟಿಕೆಗಳ್ನು ಕಲೆ ಸಾಂಸ್ಕೃತಿಕತೆಯನ್ನ ಪ್ರವಾಸೋದ್ಯಮವನ್ನ ಅಭಿವೃದ್ಧಿ ಪಡಿಸಲು ಜಾಗತಿಕ ಮಟ್ಟದಲ್ಲಿ ಮಂಡ್ಯವನ್ನ ಮುಖ್ಯವಾಹಿನಿಯತ್ತ ಸೆಳೆಯಲು ಮಣ್ಣಿನ ಮಗ ಪ್ರತಿಯೊಬ್ಬ ರೈತರ ಕಷ್ಟಸುಖಗಳ ತಿಳಿದಿರುವ ಹೆಚ್.ಡಿ ಕುಮಾರಸ್ವಾಮಿ ರವರು ಅತ್ಯುತ್ತಮ ಸಂಸದರಾಗಿ ಭವಿಷ್ಯದ ಸಚಿವರಾಗಿ ಕನ್ನಡಿಗರ ಕೀರ್ತಿಪತಾಕೆಯನ್ನ ಹಾರಿಸಲಿದ್ದಾರೆ ಎಂದರು,
ಗರೀಭಿ ಹಠಾವೋ ಎಂದು ಸುಳ್ಳು ಹೇಳಿದ ಕಾಂಗ್ರೆಸ್ ಇಲ್ಲಿಯವರೆಗೂ ಭಾರತವನ್ನ ಬಡರಾಷ್ಟ್ರವಾಗಿಯೇ ಉಳಿಸಿ ದೇಶವನ್ನ ಲೂಟಿ ಮಾಡಿದೆ ಅದಕ್ಕಾಗಿಯೇ ಇಲ್ಲಿಯವರೆಗೂ 50ಸಂಸದರನ್ನು ಗೆಲ್ಲಿಸಲು ನೈತಿಕತೆಯಿಲ್ಲದಂತಾಗಿದೆ,
ಸುದೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್ ಜನರಿಗೆ ಖಾಲಿ ಚೊಂಬು ನೀಡಿತ್ತು. 10 ವರ್ಷಗಳಲ್ಲಿ ಬಿಜೆಪಿ ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದೆ. 12 ಕೋಟಿ ಶೌಚಾಲಯ, 10 ಕೋಟಿ ಕುಟುಂಬ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರು.
ದಿನಕ್ಕೊಂದು ಗ್ಯಾರೆಂಟಿ ಹೇಳುತ್ತಾ ಹೊರಟಿರುವ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿಯನ್ನ ಮರೆತಿದೆ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ವಾತಾವರಣ ನಿರ್ಮಾಣ ಮಾಡಿರುವ ಕಾಂಗ್ರೆಸ್ ವಿಫಲವಾಗಿದೆ ಎಂದರು,
ದೇಶದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯನ್ನ ಬೆಂಬಲಿಸಿ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡಿ ಕುಮಾರಣ್ಣ ರವರನ್ನ ಸಚಿವ ಸ್ಥಾನದಲ್ಲಿ ಕಾಣಲು ಮಂಡ್ಯ ಜನತೆ ಆಶೀರ್ವದಿಸಬೇಕಿದೆ ಎಂದು ಬಿಜೆಪಿ ಮುಖಂಡರು ಹಾಗೂ ಹಳೇಮೈಸೂರು ಭಾಗದ ವೀರಶೈವ ಮುಖಂಡ ಗುರುಪಾದಸ್ವಾಮಿ ಕರೆ ನೀಡಿದರು,
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಹಾಗೂ
ಹಳೇಮೈಸೂರು ಭಾಗದ ವೀರಶೈವ ಮುಖಂಡರಾದ ಗುರುಪಾದಸ್ವಾಮಿ, ರಾಜು ಕ್ಷತ್ರಿಯ ಸಮಾಜದ ಎನ್.ಎಸ್ ರಾಜೇಂದ್ರ , ಒಕ್ಕಲಿಗ ಯುವ ಮುಖಂಡ ವೈ.ಜೆ ನವೀನ್ ಕುಮಾರ್, ಮೈಸೂರು ಕುರುಬ ಸಮಾಜದ ಮುಖಂಡರಾದ ರಂಗನಾಥ್, ವರುಣಾ ಕ್ಷೇತ್ರದ ವೀರಶೈವ ಮುಖಂಡ ಕೋಣನೂರುಪುರ ಪ್ರಭುಸ್ವಾಮಿ, ಇತರರು ಇದ್ದರು