ನಂದಿನಿ ಮೈಸೂರು
RCB ಯೊಂದಿಗಿನ ಸಹಯೋಗದೊಂದಿಗೆ ಮಹಿಳೆಯರ ಟಿ20 ಲೀಗ್ನ ಎರಡನೇ ಆವೃತ್ತಿಯಲ್ಲಿ ಅಪರೂಪದ #TAKEMYSPOT ಪ್ರಚಾರದೊಂದಿಗೆ ಸ್ಪಾಟ್ಸ್ ಸಮಸ್ಯೆ ಪರಿಹರಿಸಿದ ಹಿಮಾಲಯ ವೆಲ್ನೆಸ್
~ ಹೊಸ #TakeMySPOT ಪ್ರಚಾರವು, ಒಂದು ಮೋಜಿನ ತಿರುವಿನೊಂದಿಗೆ ಕುತೂಹಲ ಸೃಷ್ಟಿಸಿತು~
ಬೆಂಗಳೂರು, ಮಾರ್ಚ್ 4, 2024: ಸೌಂದರ್ಯ ಧನಾತ್ಮಕತೆಯನ್ನು ಒಳಗೊಂಡಿದ್ದ ಮಹಿಳೆಯರ ಟಿ20 ಲೀಗ್ನ ಪ್ರಾರಂಭಿಕ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB)ದೊಂದಿಗಿನ ತನ್ನ ಸಹಯೋಗದ ಅಮೋಘ ಯಶಸ್ಸಿನ ನಂತರ,ಮುಂಚೂಣಿ ಸ್ವಾಸ್ಥ್ಯ ಬ್ರ್ಯಾಂಡ್ ಆದ ಹಿಮಾಲಯ ವೆಲ್ನೆಸ್, ಪ್ರಸ್ತುತ ನಡೆಯುತ್ತಿರುವ ಸೀಸನ್ಗಾಗಿ ತಂಡದೊಂದಿಗೆ ತನ್ನ ಮುಂದುವರಿದ ಸಹಭಾಗಿತ್ವವನ್ನು ಘೋಷಿಸಲು ಹೆಮ್ಮೆ ಪಡುತ್ತದೆ. ಈ ವರ್ಷ, #TakeMySPOT ಪ್ರಚಾರದೊಂದಿಗೆ, ಕ್ಷೇತ್ರದಲ್ಲಿ ಅತ್ಯಂತ ಪರಿಶ್ರಮದಿಂದ ಗಳಿಸಿಕೊಂಡ ಸ್ಥಾನಗಳು(ಸ್ಪಾಟ್ಸ್) ಮತ್ತು ಸಾಧನೆಗಳ ಮೇಲೆ ಗಮನ ಕೇಂದ್ರೀಕರಣ ಬದಲಾಗುತ್ತದೆ. ಈ ಮೋಜಿನ ಪ್ರಚಾರದ ಮೂಲಕ, ಯಾರೊಬ್ಬರೂ ಅಂತಹ ಅರ್ಹತೆಯುಳ್ಳ ಸ್ಥಾನಗಳನ್ನು ತೆಗೆದುಕೊಳ್ಳಲಾಗದು ಎಂಬುದನ್ನು ಅಂಗೀಕರಿಸಿದರೂ, ಮುಖದ ಮೇಲಿರುವ ಆ ಅನಗತ್ಯ ಸ್ಪಾಟ್ಗಳಿಗೆ(ಕಲೆಗಳಿಗೆ) ಹಿಮಾಲಯ ಡಾರ್ಕ್ ಸ್ಪಾಟ್ ಕ್ಲಿಯರಿಂಗ್ ಟರ್ಮರಿಕ್ ಫೇಸ್ ವಾಶ್ ಮತ್ತು ಫೇಸ್ ಕೇರ್ ಶ್ರೇಣಿ ಇದೆ ಎಂಬುದನ್ನು ಸೂಚಿಸುತ್ತದೆ.
ಹಿಮಾಲಯ ವೆಲ್ನೆಸ್ ತಮ್ಮ ಇತ್ತೀಚಿನ #TakeMySPOT ಅಭಿಯಾನವನ್ನು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಮೀಟ್ ಮತ್ತು ಗ್ರೀಟ್ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿತು. ರಾಗಿಣಿ ಹರಿಹರನ್, ಪರ್ಸನಲ್ ಕೇರ್ ಮತ್ತು ಹೈಜೀನ್ನ ಮಾರ್ಕೆಟಿಂಗ್ ಡೈರೆಕ್ಟರ್ ಹಿಮಾಲಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಮಹಿಳಾ ಕ್ರಿಕೆಟರ್ಗಳೊಂದಿಗೆ ಸಂವಾದಾತ್ಮಕ ಸೆಷನ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಮೃತಿ ಮಂಧಾನ, ಶ್ರೇಯಾಂಕ ಪಾಟೀಲ್, ಮತ್ತು ರಿಚಾ ಘೋಷ್ ಅವರಂತಹ ಆಟಗಾರರು ತಮ್ಮ ವೈಯಕ್ತಿಕ ಪ್ರಯಾಣದ ಒಳನೋಟಗಳನ್ನು ಹಂಚಿಕೊಂಡರು ಮತ್ತು ಕ್ರೀಡೆಯಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಅವರು ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು. ಹಿಮಾಲಯ ಮತ್ತು RCB ನಡುವಿನ ನವೀಕೃತ ಪಾಲುದಾರಿಕೆಯನ್ನು ಅಧಿವೇಶನವು ಹೈಲೈಟ್ ಮಾಡಿತು, ಕ್ರೀಡೆಗಳಲ್ಲಿ ಮಹಿಳೆಯರನ್ನು ಬೆಂಬಲಿಸಲು ಹಿಮಾಲಯ ವೆಲ್ನೆಸ್ನ ನಿರಂತರ ಬದ್ಧತೆಯನ್ನು ಬಲಪಡಿಸುತ್ತದೆ
ಹಿಮಾಲಯದ ಇತ್ತೀಚಿನ ಕೊಡುಗೆಯಾದ ಹಿಮಾಲಯ ಡಾರ್ಕ್ ಸ್ಪಾಟ್ ಕ್ಲಿಯರಿಂಗ್ ಟರ್ಮರಿಕ್ ಫೇಸ್ ವಾಶ್ಗಾಗಿ ಮಾಡುತ್ತಿರುವ ಈ ಹೊಸ ಪ್ರಚಾರ #TakeMySPOT, ಬಹಳ ಶಕ್ತಿಶಾಲಿಯಾದ ಸಂದೇಶ ಹೊಂದಿದೆ. ಕ್ರಿಕೆಟ್ ಪಿಚ್ನಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು RCB ಆಟಗಾರರು ಅವಿಶ್ರಾಂತವಾಗಿ ಶ್ರಮಿಸುತ್ತಿರುವ ರೀತಿಯಲ್ಲೇ, ಜೀವನದ ಎಲ್ಲಾ ಸ್ತರದ ಮಹಿಳೆಯರು, ತಮ್ಮದೇ ಸ್ಥಾನಗಳನ್ನು ಅತ್ಯಂತ ಜತನದಿಂದ ರೂಪಿಸಿಕೊಂಡು ತಮ್ಮ ಹಕ್ಕಿನ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ. ತಮ್ಮ ಸ್ಥಾನಗಳನ್ನು ಗಳಿಸಿಕೊಳ್ಳಲು ಮಹಿಳೆಯರು ಬಹಳ ಶ್ರಮ ಪಡುವ ಸಂದರ್ಭದಲ್ಲೇ, ಹಿಮಾಲಯ ಡಾರ್ಕ್ ಸ್ಪಾಟ್ ಕ್ಲಿಯರಿಂಗ್ ಟರ್ಮರಿಕ್ ಫೇಸ್ ವಾಶ್ ಮತ್ತು ಫೇಸ್ ಕೇರ್ ಶ್ರೇಣಿಯು, ಮುಖದ ಮೇಲಿನ ನಗತ್ಯ ಕಲೆಗಳನ್ನು(ಸ್ಪಾಟ್ಸ್) ಅನಾಯಾಸವಾಗಿ ತೊಲಗಿಸಿಬಿಡುತ್ತದೆ. ಅರಿಶಿನದ ಮುಖದ ಆರೈಕೆ ಶ್ರೇಣಿಯು, ಕಾಲಕಾಲಗಳಿಂದಲೂ ಆಯುರ್ವೇದ ವಿಧಾನದಲ್ಲಿ ಸ್ವರಸ ಎಂದು ಕರೆಯುವ ವಿಧಾನವನ್ನು ಬಳಸಿ ಸಾರ ತೆಗೆಯಲಾದ ಸಾವಯವ ಅರಿಶಿನ(ಆರ್ಗ್ಯಾನಿಕ್ ಟರ್ಮರಿಕ್)ನ ಶಕ್ತಿಯನ್ನು ಒಳಗೊಂಡಿದೆ.
ಎರಡು ಹಂತಗಳಲ್ಲಿ ಅನಾವರಣಗೊಳ್ಳುವ ಪ್ರಚಾರವು, ಒಂದು ಮೋಜಿನ ತಿರುವಿನೊಂದಿಗೆ “ಸ್ಪಾಟ್”ನ ಪರಿಕಲ್ಪನೆಯನ್ನು ಅತಿಬುದ್ಧಿವಂತಿಕೆಯಿಂದ ಬಳಸಿಕೊಂಡಿದೆ. ಮೊದಲ RCB ಪಂದ್ಯದಲ್ಲಿ ಪರಿಚಯಿಸಲಾದ ಟೀಸರ್ ಫೇಸ್ನಲ್ಲಿ, ಆಟಗಾರರು ತಮ್ಮ ಕ್ಯಾಪುಗಳ ಮೇಲೆ #TakeMySPOT ಪ್ರದರ್ಶಿಸಿ, ವೀಕ್ಷಕರಲ್ಲಿ ಕುತೂಹಲ ಉಂಟು ಮಾಡುವ ಸಮಯದಲ್ಲೇ ಸಾಮಾಜಿಕ ಸಂವಾದಗಳ ಕಿಡಿ ಎಬ್ಬಿಸಿದ್ದರು. RCB ಕ್ರಿಕೆಟ್ ತಾರೆಯರಾದ ಸ್ಮ್ರಿತಿ ಮಂದನ್ನ, ರಿಚಾ ಗೋಷ್ ಮತ್ತು ಶ್ರೇಯಾಂಕ ಪಾಟಿಲ್ ಅವರುಗಳೊಂದಿಗೆ, ಕಂಟೆಂಟ್ ರಚನಕಾರ ದನಿಶ್ ಸೇಟ್, ಈ ವೀಡಿಯೋದಲ್ಲಿ, “ಸ್ಪಾಟ್” ಕುರಿತು ತಮ್ಮ ಚುರುಕಾದ ದೃಷ್ಟಿಕೋನದೊಂದಿಗೆ ಹಾಸ್ಯದ ಲೇಪನ ನೀಡುವ ಮೂಲಕ ಪ್ರೇಕ್ಷಕರು ಊಹಿಸುತ್ತಲೇ ಇರುವಂತೆ ಮಾಡುತ್ತಾರೆ. ಇದು, ಪ್ರಚಾರದ ಸಂದೇಶವನ್ನು ಪರಿಣಾಮಕಾರಿಯಾಗಿ ವರ್ಧಿಸಿ, RCB ದ ಮೊದಲ ಪಂದ್ಯದ ಸಮಯದಲ್ಲಿ ಟ್ವಿಟ್ಟರ್ ನಲ್ಲಿ ಟೀಸರ್ ಹ್ಯಾಶ್ಟ್ಯಾಗ್ #TakeMySpot ನಂ.1 ಟ್ರೆಂಡ್ ಆಗಿರುವಂತೆ ಮಾಡಿತ್ತು. ಇನ್ನಷ್ಟು ಕುತೂಹಲ ಉಂಟು ಮಾಡಲು ಬ್ರ್ಯಾಂಡ್, ವಿವಿದೆಹ ರೇಡಿಯೋ, ಸಮೂಹ ಮಾಧ್ಯಮ, ಬಾಹ್ಯ ಜಾಹೀರಾತು ಹಾಗೂ ಯೂಟ್ಯೂಬ್ಗಳಾದ್ಯಂತ 360-ಡಿಗ್ರಿ ತಂತ್ರ ಬಳಸಿತು.
ಪ್ರಚಾರದ ಎರಡನೇ ಹಂತದಲ್ಲಿ ಬ್ರ್ಯಾಂಡ್, ’ಸ್ಪಾಟ್ಸ್’, ಮುಖದ ಮೇಲಿರುವ ಅನಗತ್ಯ ಕಲೆಗಳನ್ನು ಸೂಚಿಸುತ್ತದೆ ಮತ್ತು ಹಿಮಾಲಯ ಡಾರ್ಕ್ ಸ್ಪಾಟ್ ಕ್ಲಿಯರಿಂಗ್ ಟರ್ಮರಿಕ್ ಫೇಸ್ ವಾಶ್ ಮತ್ತು ಫೇಸ್ ಕೇರ್ ಶ್ರೇಣಿಯು ಅತ್ಯಂತ ಪರಿಣಾಮಕಾರಿಯಾಗಿ ಅದನ್ನು ನಿವಾರಿಸಬಲ್ಲದು ಎಂಬುದನ್ನು ಅತಿಬುದ್ಧಿವಂತಿಕೆಯಿಂದ ಬಹಿರಂಗಪಡಿಸುತ್ತದೆ. ಈ ಪ್ರಭಾವಶಾಲಿಯಾದ ಸತ್ಯಾವರಣವು ಪ್ರಚಾರದ ಸಂದೇಶವನ್ನು ಬ್ರ್ಯಾಂಡ್ಗೆ ಅಡವಣೆಯಿಲ್ಲದೆ ಹೊಂದಿಕೊಳ್ಳುತ್ತದೆ. ಈ ಪ್ರಚಾರದೊಂದಿಗೆ ಹಿಮಾಲಯ, ಕ್ಷೇತ್ರದಲ್ಲೇ ಆಗಲೀ, ಜೀವನದಲ್ಲೇ ಆಗಲೀ, ತಮ್ಮ ಹಕ್ಕಿನ ಸ್ಥಾನಗಳನ್ನು ಪಡೆದುಕೊಳ್ಳಲು ಕಠಿಣ ಶ್ರಮಪಟ್ಟ ಮಹಿಳೆಯರ ಚೈತನ್ಯವನ್ನು ಆಚರಿಸುತ್ತದೆ. ಅವರು ಪರಿಶ್ರಮದಿಂದ ಗಳಿಸಿಕೊಂಡಿರುವ ಸ್ಥಾನಗಳನ್ನು ಯಾರೂ ಕಸಿದುಕೊಳ್ಳಲಾಗದು ಎಂದು ಎಲ್ಲರಿಗೂ ನೆನಪು ಮಾಡುವ ಸಂದರ್ಭದಲ್ಲೇ, ಅವರ ಮುಖಗಳ ಮೇಲಿನ ಅನಗತ್ಯ ಕಲೆಗಳನ್ನು ನಿವಾರಿಸಲು ಹಿಮಾಲಯ ಸಹಾಯ ಮಾಡಬಲ್ಲದು ಎಂಬುದನ್ನು ಅದು ಸೂಚಿಸುತ್ತದೆ. ದನಿಶ್ ಮತ್ತು ತಾರಾ ಕ್ರಿಕೆಟಿಗರ ನಡುವಿನ ಹಾಸ್ಯಮಯ ಮಾರುಕತೆಗಳನ್ನು ಒಳಗೊಂಡ ವೀಡಿಯೋ ಸರಣಿ ಮೂಲಕ “ಸ್ಪಾಟ್”ನ ಪರಿಕಲ್ಪನೆಯನ್ನು ಪ್ರಚಾರವು ಅತ್ಯಂತ ಬುದ್ಧಿವಂತಿಕೆಯಿಂದ ಬಳಸಿ ಉಳಿಸಿಕೊಂಡಿದೆ. RCB ಆಟಗಾರರ ಕ್ಯಾಪ್ ಮೇಲಿನ ಸಂದೇಶದಲ್ಲಿ ಬದಲಾವಣೆಯ ಮೂಲಕ ಫೆಬ್ರವರಿ 29ರಂದು ಬ್ರ್ಯಾಂಡ್ನ ಸಹಯೋಗವನ್ನು ಬಹಿರಂಗಗೊಳಿಸಲಾಯಿತು. ನಿಗೂಢತೆಯು ಕೊನೆಗೂ ಬಹಿರಂಗಗೊಳ್ಳುವ ವಿಷಯವೇ RCB ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿ, ಅದು ಟ್ವಿಟ್ಟರ್ ನಲ್ಲಿ ನಂ.1 ಟ್ರೆಂಡ್ ಆಗಿ ಸ್ಥಾನ ಪಡೆದುಕೊಳ್ಳುವುದಕ್ಕೆ ಕಾರಣವಾಯಿತು.
90ಕ್ಕಿಂತಲೂ ಹೆಚ್ಚಿನ ವರ್ಷಗಳಿಂದ ಹಿಮಾಲಯ ವೆಲ್ನೆಸ್ ಸಂಸ್ಥೆಯು, ಪ್ರತಿಯೊಂದು ಮನೆಗೆ ಸ್ವಾಸ್ಥ್ಯ ಹಾಗೂ ಪ್ರತಿಯೊಂದು ಹೃದಯಕ್ಕೆ ಆನಂದವನ್ನು ತರುವುದರಲ್ಲಿ ಮುಂಚೂಣಿಯಲ್ಲಿದೆ.
ಹಿಮಾಲಯ ವೆಲ್ನೆಸ್ ಕಂಪನಿಯ ಬಿಜಿನೆಸ್ ನಿರ್ದೇಶಕ ಶ್ರೀ ರಾಜೇಶ್ ಕೃಷ್ಣಮೂರ್ತಿ ಸಹಭಾಗಿತ್ವದ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಾ , “2023ರಲ್ಲಿ ಮಹಿಳಾ ಪ್ರೀಮಿಯರ್ ಲೀಗ್ನೊಂದಿಗಿನ ನಮ್ಮ ಸಹಭಾಗಿತ್ವದ ಯಶಸ್ಸು, ಈ ವರ್ಷದ ಆವೃತ್ತಿಯಲ್ಲೂ ನಮ್ಮ ಸಹಯೋಗವನ್ನು ಮುಂದುವರಿಸುವುದಕ್ಕೆ ಪ್ರೇರಣೆ ಒದಗಿಸಿತು. ಕ್ರಿಕೆಟರ್ ಗಳ ಜೊತೆಗೂಡಿ, #TakeMySPOT ಪ್ರಚಾಎರಕ್ಕೆ ದನಿಶ್ ಸೇಟ್ ಅವರ ಉತ್ಸಾಹವನ್ನು ತರುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ ಮತ್ತು ಇದು ನಮ್ಮ ಹೊಸ ಹಿಮಾಲಯ ಡಾರ್ಕ್ ಸ್ಪಾಟ್ ಕ್ಲಿಯರಿಂಗ್ ಟರ್ಮರಿಕ್ ಫೇಸ್ ವಾಶ್ ಮತ್ತು ಫೇಸ್ ಕೇರ್ ಶ್ರೇಣಿಯೊಂದಿಗೆ ಹಠಮಾರಿ ಕಲೆಗಳ ವಿಷಯವನ್ನು ಚರ್ಚಿಸುವ ಸಂದರ್ಭದಲ್ಲಿ ಹಾಸ್ಯ ಮತ್ತು ಕುತೂಹಲದ ಒಂದು ಅಂಶವನ್ನು ಸೇರಿಸಿತು.” ಎಂದು ಹೇಳಿದರು.
“RCB ಪಂದ್ಯದ 1ನೆ ದಿನದಂದು ಟ್ವಿಟ್ಟರ್ ನಲ್ಲಿ ನಂ.1 ಟ್ರೆಂಡ್ ಆಗಿದ್ದ #TakeMySPOT ಪ್ರಚಾರದ ಟೀಸರ್ಗೆ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಫೆಬ್ರವರಿ 29ರಂದು ನಂ.1 ಟ್ರೆಂಡಿಂಗ್ ವಿಷಯವಾಗಿದ್ದ ಬಹಿರಂಗ ಟ್ರೆಂಡಿಂಗ್ನಿಂದ ನಾವು ಅತ್ಯಂತ ಅತ್ಯಂತ ಹರ್ಷಗೊಂಡಿದ್ದೇವೆ! ಕಳೆದ ವರ್ಷದಂತೆಯೇ, ಈ ವರ್ಷದ ಸಹಭಾಗಿತ್ವವು, ಉತ್ಪನ್ನದ ಸುತ್ತ ಕೌತುಕತೆ ಏರ್ಪಡಿಸುವುದು ಮಾತ್ರವಲ್ಲದೆ, ಮಹಿಳೆಯರ ಟೀ20 ಲೀಗ್ ಪ್ರೇಕ್ಷಕರೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂಬ ವಿಶ್ವಾಸ ನಮಗಿದೆ.” ಎಂದು ಹೇಳಿದರು, ಹಿಮಾಲಯದ ಪರ್ಸನಲ್ ಕೇರ್ ಅಂಡ್ ಹೈಜೀನ್ ವಿಭಾಗದ ಮಾರ್ಕೆಟಿಂಗ್ ನಿರ್ದೇಶಕಿ ರಾಗಿಣಿ ಹರಿಹರನ್ . “ಅರಿಶಿನದ ಅತ್ಯಾವಶ್ಯಕ ಅಂಶಗಳನ್ನು ಸಂರಕ್ಷಿಸುವ ಸ್ವರಸ ಎಂದು ಕರೆಯಲ್ಪಡುವ ಒಂದು ವಿಶಿಷ್ಟವಾದ ಕೋಲ್ಡ್-ಪ್ರೆಸ್ಡ್ ಸಾರಹೀರುವಿಕೆ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿರುವ ಈ ಫೇಸ್ ವಾಶ್ ಮತ್ತು ಫೇಸ್ ಕೇರ್ ಶ್ರೇಣಿಯನ್ನು ಪರಿಚಯಿಸಲು ನಮಗೆ ಹೆಮ್ಮೆಯಾಗುತ್ತಿದೆ. ಈ ಸಂಶೋಧನೆ-ಆಧಾರಿತ ಫಾರ್ಮುಲಾ ಗಾಢ ಕಲೆಗಳ ಸಮಸ್ಯೆಗಳನ್ನು ನಿವಾರಿಸಿಕೊಂಡು ಆರೋಗ್ಯಕರವಾದ ಮತ್ತು ಹೊಳಪಿನ ತ್ವಚೆಯನ್ನು ಪಡೆದುಕೊಳ್ಳಲು ನಮ್ಮ ಗ್ರಾಹಕರಿಗೆ ಶಕ್ತಿ ನೀಡುತ್ತದೆ.”ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB)ದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ರಾಜೇಶ್ ಮೆನನ್, “ಎರಡನೇ ಸೀಸನ್ಗೆ ಕಾಲಿರಿಸುತ್ತಿರುವಂತಹ ಸಂದರ್ಭದಲ್ಲಿ ಹಿಮಾಲಯದೊಂದಿಗೆ ನಮ್ಮ ಸಹಯೋಗವನ್ನು ವಿಸ್ತರಿಸಲು ನಮಗೆ ಸಂತೋಷವಾಗುತ್ತಿದೆ. ಎರಡೂ ಬ್ರ್ಯಾಂಡ್ಗಳು, ಒಳಗೊಳ್ಳುವಿಕೆ ಹಾಗೂ ವೈವಿಧ್ಯತೆಯ ಒಂದೇ ಮೂಲ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ ಮತ್ತು ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುವ ಕಾರಣಗಳ ಬಗ್ಗೆ ಕಾಳಜಿ ವಹಿಸುತ್ತವೆ.”ಎಂದರು.
ಫೇಸ್ ವಾಶ್ನ ಕೆಟಗರಿ ಮ್ಯಾನೇಜರ್ ಮಿಸ್ ಗಾಯತ್ರಿ ಕಬಿಲನ್, “ಸೂರ್ಯನ ಬೆಳಕಿಗೆ ತೆರೆದುಕೊಳ್ಳುವಿಕೆ, ಮೊಡವೆ ಗುರುತುಗಳು ಹಾಗೂ ಈ ಹಿಂದೆ ನಿರ್ಲಕ್ಷಿಸಲ್ಪಟ್ಟ ಕಾರಣಗಳಿಂದಾಗಿ ಏರ್ಪಡುವ ಗಾಢ ಕಲೆಗಳ ಬೆಳೆಯುತ್ತಿರುವ ಸಮಸ್ಯೆಯನ್ನು ನಿವಾರಿಸುವ ಈ ಆವಿಷ್ಕಾರ ಹಿಮಾಲಯದ ದೊಡ್ಡ ಉಪಕ್ರಮವಾಗಿದೆ. ಫೇಸ್ ವಾಶ್, ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಹಾಗೂ ಪರಿಸರ ಪ್ರಜ್ಞೆಯುಳ್ಳ ಟ್ಯೂಬ್ನಲ್ಲಿ ಬರುವುದರಿಂದ, ಸ್ಪಾಟ್ಸ್ಗಳನ್ನು ಮೀರುವ ಸಂದರ್ಭದಲ್ಲೇ, ನಾವು ಪರಿಸರದ ಬಗ್ಗೆಯೂ ಕಾಳಜಿ ವಹಿಸಿದ್ದೇವೆ.”ಎಂದರು.