ನಂದಿನಿ ಮೈಸೂರು
ಮೈಸೂರು ವಿವಿ ಕ್ರಿಯೇಷನ್ಸ್ ವತಿಯಿಂದ ಹೊಸ ವರ್ಷದ ಅಂಗವಾಗಿ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನವರಿ 6 ರಂದು ಸಂಜೆ 4 ಗಂಟೆಗೆ ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಎಂಬಿಸಿಟಿ ಆಡಿಟೋರಿಯಂ ನಲ್ಲಿ ನವ ಸಂಭ್ರಮ ಸಂಗೀತ ನೃತ್ಯ ಸಂಗಮ ಮನೋರಂಜನ ಕಾರ್ಯಕ್ರಮ ಅಯೋಜಿಸಲಾಗಿದೆ.
ಈ ಸಂಬಂಧ ಕ್ರಿಯೇಷನ್ಸ್ ಸಂಸ್ಥಾಪಕಿ ವಿಮಲ ವೀರೇಶ್ ಮಾಹಿತಿ ನೀಡಿದ್ದಾರೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ಮಡಿಲು ಸೇವಾ ಟ್ರಸ್ಟ್ ನ ಲೋಕರಾಜ್ ಅರಸ್ ಗೌತಮ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಭಾಗವಹಿಸಲಿದ್ದಾರೆ. ಜಾನಪದ ಪ್ರಾಕಾರಗಳಾದ ಕಂಸಾಳೆ , ಡೊಳ್ಳು ಕುಣಿತ , ತಮಟೆ , ಜನಪದ , ಗಾಯನ ನೃತ್ಯ , ಬುಡಕಟ್ಟು ನೃತ್ಯ ಇರಲಿದೆ. ಕಾರ್ಯಕ್ರಮ ಸಂಬಂಧ ಮಾಹಿತಿ ನೀಡುವ ಸಲುವಾಗಿ ಸುದ್ದಿಗೋಷ್ಠಿ ನಡೆಸಲಾಯ್ತು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ರಮ್ಯಾ ಆನಂದ್ , ಉಮೇಶ್ , ಸುಮಂತ್ , ಮಾದೇಶ್ ಭಾಗವಹಿಸಿದ್ರು.