ನಂದಿನಿ ಮೈಸೂರು
ನವಜಾತ ಶಿಶುವಿನ ಉಸಿರಾಟದ ತೊಂದರೆಗಳ ಬಗ್ಗೆ ನಿಯೋನಾಟಾಲಜಿಸ್ಟ್, ಯುಸಿ ಡೇವಿಸ್, ಕ್ಯಾಲಿಫೋರ್ನಿಯಾದ ಪೀಡಿಯಾಟ್ರಿಕ್ಸ್ ( ಮಕ್ಕಳ ಆಸ್ಪತ್ರೆಯ) ಮುಖ್ಯಸ್ಥ, ಡಾ. ಸತ್ಯನ್ ಲಕ್ಷ್ಮೀನೃಸಿಂಹ ಅವರು ಚರ್ಚಿಸಿದರು.
ಈ ಚರ್ಚೆಯು :
1. ನವಜಾತ ಶಿಶುವಿನ ಹೆರಿಗೆಯ ಸಮಯದಲ್ಲಿ ತಡವಾಗಿ ಹೊಕ್ಲಬಳ್ಳಿಯ ಕ್ಲ್ಯಾಂಪ್ ಹಾಕುವುದರ ಅನುಕೂಲಗಳ ಬಗ್ಗೆ.
2. ಉಸಿರಾಟದ ಸಮಸ್ಯೆಗಳೊಂದಿಗೆ ಜನುಸಿದ ನವಜಾತ ಶಿಶುವಿಗೆ ನವೀನ ಉಸಿರಾಟದ ಚಿಕಿತ್ಸೆಯ ಬಗ್ಗೆ ಹಾಗೂ
ಸಂಶೋಧನೆಯ ಪುರಾವೆಗಳ
ಬಗ್ಗೆ ನಡೆಯಿತು.
ಸಿಗ್ಮಾ ಆಸ್ಪತ್ರೆಯ ಮಕ್ಕಳ ವಿಭಾಗವು ಮಕ್ಕಳ ವೈದ್ಯರಿಗಾ ಗಿ ನಿಯಮಿತವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತದೆ. 2014 ರಿಂದಲೂ ಈ ಮಕ್ಕಳ ವಿಭಾಗವು ಮಕ್ಕಳ ಮತ್ತು ನವಜಾತ ಶಿಶುಗಳ ಶ್ರದ್ಧೆಯ ಆರೈಕೆಗೆ ಹೆಸರುವಾಸಿಯಾಗಿದೆ.
ಈ ಆಸ್ಪತ್ರೆಯ ಮಕ್ಕಳ ವಿಭಾಗವು ಸ್ನಾತಕೋತ್ತರ ಕೋರ್ಸ್, DCH ಗೆ, ರಾಷ್ಟ್ರೀಯ ಪರೀಕ್ಷಾ ಮಂಡಳಿ(NBE) ಯಿಂದ ಗುರುತಿಸಲ್ಪಟ್ಟಿದೆ. ಇಲ್ಲಿನ ವೈದ್ಯರ ತಂಡದಲ್ಲಿ, ಡಾ ರಾಜೇಶ್ವರಿ ಮಾದಪ್ಪ, ಡಾ ಕನ್ಯಾ ಎಂಎಸ್ ಮತ್ತು ನಿಯೋನಾಟಾಲಜಿಸ್ಟ್, ಡಾ ನಂದಿತಾ ನಂದಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ.