ನಂದಿನಿ ಮೈಸೂರು
ಇಂದು ವೈಕುಂಠ ಏಕಾದಶಿ ಯಂದು ಶ್ರೀಯೋಗನರಸಿಂಹ ಸ್ವಾಮಿ ದೇವಾಲಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಶ್ರೀಯೋಗನರಸಿಂಹಸ್ವಾಮಿ ದೇವರ ವಿಗ್ರಹಕ್ಕೆ ಮುಂಜಾನೆಯಿಂದಲೇ ದೇವಸ್ಥಾನದ ಸಂಸ್ಥಾಪಕರಾದ ಡಾ.ಭಾಷ್ಯಂ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ರವರ ನೇತೃತ್ವದಲ್ಲಿ ಅಭಿಷೇಕ,ಅಲಂಕಾರ,ಮಹಾಮಂಗಳಾರತಿ ಪೂಜೆ ಜರುಗಿತು.ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ವೈಕುಂಠ ದ್ವಾರ ಪ್ರವೇಶಿಸಿ ದೇವರ ದರ್ಶನ ಪಡೆದರು.ನಂತರ ಶ್ರೀನಿವಾಸ್ ರವರು ಭಕ್ತರಿಗೆ ಪ್ರಸಾದ ವಿತರಿಸಿದರು.