ನಂದಿನಿ ಮೈಸೂರು
ಮೌರ್ಯ ಆಸ್ಪತ್ರೆಯ ನಿರ್ದೇಶಕರಾದ
ಡಾ.ಎ. ವಿ. ರಾಹುಲ್ ಆನಂದ್ ರವರು ಉನ್ನತ ವಿಧ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣಿಸುತ್ತಿದ್ದಾರೆ.
ಮೈಸೂರಿನ ಕುವೆಂಪುನಗರದಲ್ಲಿರುವ ರಾಹುಲ್ ರವರ ಮನೆಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರಾದ ತಿರುಮಲೇಶ್ ಹಾಗೂ ಸ್ನೇಹಿತರು ಉನ್ನತ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೇಂಡಿನ ಲಂಡನ್ ಗೆ ತೆರಳುತ್ತಿರುವ ರಾಹುಲ್ ರವರಿಗೆ ಹೂವಿನ ಹಾರ ಹಾಕಿ ಪ್ರಯಾಣ ಸುಖಕರವಾಗಿರಲೆಂದು ಶುಭ ಹಾರೈಸಿದರು.
ಡಾ.ಎ.ವಿ.ರಾಹುಲ್ ರವರು ಮಾತನಾಡಿ ಉನ್ನತ ವಿಧ್ಯಾಭ್ಯಾಸಕ್ಕಾಗಿ ಲಂಡನ್ ಗೆ ತೆರಳುತ್ತಿದ್ದೇನೆ.ಅಲ್ಲಿ ವೈದ್ಯಕೀಯ ಚಿಕಿತ್ಸೆ ಬಗ್ಗೆ ಅಧ್ಯಯನ ಮಾಡಿ ನಂತರ ಕರ್ನಾಟಕಕ್ಕೆ ಆಗಮಿಸಿ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಮೈಸೂರಿನ ಕೊಡಗು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಜೆಜೆ ಆನಂದ್,ಎ.ವಿ.ರೋಹನ್ ಆನಂದ್ ,ಮನೋಹರ್,ಲಕ್ಷ್ಮೀ,ಸುಮ ಸೇರಿದಂತೆ ಸ್ನೇಹಿತರು ಭಾಗಿಯಾಗಿದ್ದರು.