ಕೆ ಎಸ್ ಓ ಯು. ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಜಾಕಿರ್ ಹುಸೇನ್ ಒತ್ತಾಯ…
ಇತ್ತೀಚಿಗಷ್ಟೇ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ್ ಅವರನ್ನು ಡಿ. ದೇವರಾಜ ಅರಸ್ ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷರಾದ ಶ್ರೀ ಜಾಕೀರ್ ಹುಸೇನ್ ರವರು ಭೇಟಿಯಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ನಿರಂತರ ಅಕ್ರಮಗಳಿಗೆ ಕೂಡಲೇ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ್ದಾರೆ.
ಮಾಧ್ಯಮಕ್ಕೆ ನೀಡಿದ ವಿವರ… ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ಒಂದಲ್ಲ ಒಂದು ವಿವಾದಗಳು ತಾಣವಾಗಿದ್ದು ಇದಕ್ಕೆ ಕೊನೆಯಿಲ್ಲದಂತಾಗಿದೆ ಪ್ರಸ್ತುತ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದ್ದು ಹಲವಾರು ಬೇರೆ ಬೇರೆ ಇಲಾಖೆಗಳ ಅಕ್ರಮಗಳ ಬಗ್ಗೆ ಸೂಕ್ತ ಕ್ರಮ ವಹಿಸಿದ್ದು ಹಾಗೂ ತನಿಖೆಗೆ ಒಳಪಡಿಸಿರುವುದು ಸಂತೋಷದ ಸಂಗತಿ, ಆದರೇ ಅವರ ತವರು
ಕ್ಷೇತ್ರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಬೆಟ್ಟದಷ್ಟು ಅಕ್ರಮ ಅಕ್ರಮಗಳು ನಡೆಯುತ್ತಿದ್ದು ಅದಕ್ಕೆ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಶ್ಯಾಮಿಲ್ಲಾಗಿದ್ದು( ಬೇಲಿಯೇ ಎದ್ದು ಹೊಲವನ್ನು ಮೇದಂತೆ ) ಪರಿಸ್ಥಿತಿ ನಿರ್ಮಾಣವಾಗಿದೆ KSOU ನಲ್ಲಿ ವಿದ್ಯಾರ್ಥಿಗಳ ದಾಖಲಾತಿಗಳ ಪ್ರಮಾಣಕ್ಕಿಂತ ಬೋಧಕ ಮತ್ತು ಬೋಧಕೇತರ ನೇಮಕಾತಿಗಳ ಪ್ರಮಾಣ ಹೆಚ್ಚಾಗಿದೆ ಹಾಗೂ ನಿರಂತರವಾಗಿ ನಡೆಯುತ್ತಲೂ ಕೂಡ ಇದೆ ಈ ರೀತಿ ನೇಮಕಾತಿಗಳಲ್ಲಿ ದೊಡ್ಡಮಟ್ಟದ ಹಗರಣಗಳು ನಡೆದಿದ್ದು ಇದಕ್ಕೆ ಸಂಬಂಧಪಟ್ಟ ಆಡಿಯೋ ವಿಡಿಯೋ ವೈರಲ್ ಆಗಿದ್ದು ದೊಡ್ಡ ದೊಡ್ಡ ಘಟಾನುಘಟಿ ಉನ್ನತ ಸ್ಥಾನದಲ್ಲಿರುವ ಹೆಸರುಗಳು ಬಹಿರಂಗಗೊಂಡಿದೆ,ಜೊತೆಗೆ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ, ಆಕ್ಸಿಸ್ ಬ್ಯಾಂಕ್ ಖಾತೆ ಇನ್ನು ಹತ್ತು ಹಲವಾರು ಬಹು ಪ್ರಮುಖವಾದ ಅಕ್ರಮಗಳ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳು ಲಭ್ಯವಿದ್ದು ಶೀಘ್ರವೇ ಗೌರವಾನ್ವಿತ ರಾಜ್ಯಪಾಲರಿಗೂ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೂ ದಾಖಲಾತಿಗಳನ್ನು ತಲುಪಿಸಿ KSOU ನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕಿ ಸಂಬಂಧಪಟ್ಟ ಎಲ್ಲರನ್ನೂ ಅಮಾನತ್ತು ಮಾಡುವ ಮೂಲಕ KSOU ನ ಘನತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಷ್ಠಿತ ಎಲ್ಲಾ ಸಂಘಟನೆಗಳ ಮುಖಂಡರುಗಳನ್ನು ಒಳಗೊಂಡಂತೆ ದೊಡ್ಡಮಟ್ಟದ ಹೋರಾಟ ಮಾಡುವ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು…