ನಂದಿನಿ ಮೈಸೂರು
ಶ್ರಮಿಕ ವರ್ಗದ ಜನರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಹಾಗೂ ಶ್ರೀ ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು.
ಮೈಸೂರು ಟ್ರೇಡರ್ಸ್ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗೂ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಮೈಸೂರಿನ ಶಿವರಾಂಪೇಟೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ
ಧ್ವಜಾರೋಹಣ ಮಾಡಿ ಭುವನೇಶ್ವರಿ ದೇವಿ ಭಾವಚಿತ್ರ,
ಶ್ರೀ ಭಕ್ತ ಕನಕದಾಸರ ಭಾವಚಿತ್ರಕ್ಕೆ ಶ್ರೀ ತ್ರಿಪುರ ಭೈರವಿ ಮಠದ ಮಠಾಧೀಶರಾದ ಡಾ.ಕೆ.ಕೃಷ್ಣಮೋಹನನಂದ ಗಿರಿ ಗೋಸ್ವಾಮೀಜಿ,ಮೈಸೂರು ಟ್ರೇಡರ್ಸ್ ಸುರಕ್ಷಾ ಕೇಮಾಭಿವೃದ್ಧಿ ಸಂಘದ ಅಧ್ಯಕ್ಷರಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸದಸ್ಯರು,ಮಾಜಿ ನಗರ ಪಾಲಿಕೆ ಸದಸ್ಯರಾದ ಪಿ. ಪ್ರಶಾಂತ್ ಗೌಡ ಸೇರಿದಂತೆ ಸಂಘದ ಸದಸ್ಯರು ಪುಷ್ಪಾರ್ಚನೆ ಮಾಡಿದರು.
ಶ್ರೀಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರವೀಣ್, ತಗಾರಾಂ,ಸಾಗರ್,ಗೋಪಿನಾಥ್,ರಜತ್ ಸಿಂಗ್,ರಾಜೇಶ್,ಜವನಾರಾಮ್ ಸೇರಿದಂತೆ ಸಂಘದ ಸದಸ್ಯರು ಭಾಗಿಯಾಗಿದ್ದರು.