ನಂದಿನಿ ಮೈಸೂರು
ಪೌರಕಾರ್ಮಿಕರ ಜೊತೆ ದೀಪಾವಳಿ ಆಚರಿಸಿದ ಡಾ. ಶುಶ್ರುತ ಗೌಡ
ಹೊಯ್ಸಳ ಟ್ರಸ್ಟ್ ವತಿಯಿಂದ ಟೌನ್ ಹಾಲ್ ನಲ್ಲಿ ಪೌರಕಾರ್ಮಿಕರಿಗೆ ಹಣತೆ ಹಾಗೂ ಸಿಹಿ ವಿತರಿಸಿ ದೀಪಾವಳಿ ಆಚರಣೆ ಮಾಡಿದರು.
ದೀಪಾವಳಿ ಹಬ್ಬವನ್ನು ದೀಪಗಳನ್ನು ಬೆಳಗಿಸುವ ಮೂಲಕ ಮಾಲಿನ್ಯ ರಹಿತವಾಗಿ ಆಚರಿಸೋಣ ಎಂದು ಕಾಂಗ್ರೆಸ್ ಮುಖಂಡ : ಡಾ. ಶುಶ್ರುತ ಗೌಡ ಮನವಿ ಮಾಡಿದರು.
ಬಳಿಕ ಮಾತನಾಡಿದ ಅವರು
ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಪಟಾಕಿಯಿಂದ ಉಂಟಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪೌರಕಾರ್ಮಿಕರಿಗೆ ದೊಡ್ಡ ಸವಾಲು. ಪಟಾಕಿ ಸಿಡಿಸುವ ಬದಲು ರಂಗೋಲಿ ಹಾಕಿ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಿದಲ್ಲಿ ಪ್ರಾಣಿ ಸಂಕುಲಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಇರುವುದಿಲ್ಲ. ಯುವಪೀಳಿಗೆಯವರು ಹಸಿರು ದೀಪಾವಳಿ ಆಚರಿಸುವ ಪಣ ತೊಡಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಉದ್ಯಮಿ ರಾಜೇಶ್ ಪಲ್ಲನಿ, ರವಿಚಂದ್ರ, ರಾಕೇಶ್, ಲೋಕೇಶ್, ಮಂಜು ಗೌಡ, ಸ್ಥಳೀಯ ಆರೋಗ್ಯ ಅಧಿಕಾರಿ ಧನಂಜಯ್, ಹಾಗೂ ಇನ್ನಿತರರು ಹಾಜರಿದ್ದರು.