ನಂದಿನಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2023 ಹಿನ್ನಲೆ ಇಂದು ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು.
ಮೈಸೂರಿನ ಅರಮನೆಯಲ್ಲಿ 11 ಫಿರಂಗಿಗಳನ್ನು ನಿಲ್ಲಿಸಿ
ಶ್ರೀ ಚಾಮುಂಡೇಶ್ವರಿ ಭಾವಚಿತ್ರ ಇರಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.
ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು.
ವಿಜಯದಶಮಿಯಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳಿಗೆ ಜಂಬೂಸವಾರಿ ಹೊರಡುವ ವೇಳೆ ಗೌರವ ಸೂಚಕವಾಗಿ ಕುಶಾಲತೋಪು ಸಿಡಿಸಲಾಗುತ್ತದೆ.ಆನೆಗಳು ಸಿಡಿಮದ್ದಿನ ಸದ್ದಿಗೆ ಹೊಂದಿಕೊಳ್ಳಲೆಂದು ವಿಜಯ ದಶಮಿಗೂ ಮುನ್ನ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ.ಅರಣ್ಯ ಅಧಿಕಾರಿಗಳು ಮೂರು ಬಾರಿ ಆನೆಗಳಿಗೆ ಸಿಡಿಮದ್ದು ತಾಲೀಮು ನಡೆಸಲಿದ್ದಾರೆ.