ನಂದಿನಿ ಮೈಸೂರು
* *ಪೌರ ಬಂಧುಗಳಿಗೆ ಬಾಗೀನ ಸಮರ್ಪಣೆ*
– *ಪಾಲಿಕೆ ಆಡಳಿತಪಕ್ಷದ ನಾಯಕ ಮ.ವಿ. ರಾಮಪ್ರಸಾದ್ ಅವರ ವಾರ್ಡ್ ನಲ್ಲಿ ಸೇವಾ ಕಾರ್ಯ.*
*ಮೈಸೂರು :* ಗೌರಿ ಗಣೇಶ ಹಬ್ಬದ ಅಂಗವಾಗಿ,
ಆಡಳಿತ ಪಕ್ಷದ ನಾಯಕರು,
ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಭಾನುವಾರ ತಮ್ಮ ವಾರ್ಡ್ ನಲ್ಲಿ ಸ್ವಚ್ಚತಾ ಕಾರ್ಯ ಮಾಡುವ ಮಹಿಳಾ ಪೌರ ಬಂಧುಗಳಿಗೆ ಬಾಗೀನ ನೀಡಿ ಗೌರವಿಸಿದರು.
ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ 40 ಕ್ಕೂ ಹೆಚ್ಚು ಮಹಿಳಾ ಪೌರ ಕಾರ್ಮಿಕರಿಗೆ ಸಾಂಪ್ರದಾಯದಂತೆ ಹೂ ಹಣ್ಣು, ತಾಂಬೂಲ ಹಾಗೂ ಸೀರೆಯನ್ನು ಒಳಗೊಂಡ ಬಾಗೀನ ನೀಡಿ ಗೌರವಿಸಿದರು.
ಬಳಿಕ ಮಾತನಾಡಿದ ಅವರು,
ಯಾವ ಹಬ್ಬವಿದ್ದರೂ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರಕಾರ್ಮಿಕರು ತಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುತ್ತಾರೆ. ಮಾತ್ರವಲ್ಲದೇ ಮೊದಲು
ನಗರವನ್ನು ಸ್ವಚ್ಚಗೊಳಿಸಿ ಹಬ್ಬದ ವಾತಾವರಣ ಸೃಷ್ಟಿಸಿ, ನಂತರ ಅವರು ಮನೆಯಲ್ಲಿ ಹಬ್ಬ ಮಾಡುತ್ತಾರೆ. ಹೀಗಾಗಿ ನಮ್ಮ ಸಮಾಜದ ನಿಜವಾದ ಬಂಧುಗಳಾದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಜನರು ಮನೆಯೊಂದ ಹೊರಗೆ ಬಾರದೆ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡರೆ, ಪೌರ ಕಾರ್ಮಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ನಗರದಾದ್ಯಂತ ಸ್ವಚ್ಚತಾ ಕಾರ್ಯ ಮಾಡಿದರು. ಹೀಗಾಗಿ ಪೌರ ಕಾರ್ಮಿಕರೇ ನಮ್ಮೆಲ್ಲರ ನಿಜವಾದ ವಾರಿಯರ್ಸ್ ಆಗಿದ್ದಾರೆ ಎಂದರು.
ಪೌರಕಾರ್ಮಕರಿಗೆ ಮೂಲ ಸೌಕರ್ಯ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಸೇರಿದನಂತೆ ಇನ್ನಿತರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆನ್ನು ತಟ್ಟುವ ಹಿನ್ನೆಲಡಯಲ್ಲಿ ಬೆನ್ನುತಟ್ಟುವ ಈ ಪ್ರೋತ್ಸಾಹದಾಯಕ ಕೆಲಸ ಮಾಡಲಾಗಿದೆ ಎಂದರು.
ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಕಾಯಕವೇ ಕೈಲಾಸವೆಂದು ಭಾವಿಸಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಪೌರಬಂಧುಗಳಿಗೆ ಬಾಗೀನ ನೀಡಿ ಗೌರವಿಸಿರುವುದು ಅತ್ಯಂತ ತೃಪ್ತಿ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಪರಿವೀಕ್ಷಕ ಶಿವಪ್ರಸಾದ್
ಮುಖಂಡರು ಸಂದೀಪ್ ಸಿ , ಅದ್ವೈತ್, ಅರವಿಂದ್, ಲಲಿತಾಂಬ, ಮಂಜುನಾಥ್, ಬಸವರಾಜು, ದೇವೇಂದ್ರ ಸ್ವಾಮಿ, ತೀರ್ಥ , ಸೋಮೇಶ್, ಶ್ರೀಕಂಠ , ಶೇಖರ್, ರವಿ, ವೆಂಕಟೇಶ್ ಹಾಗೂ ಇನ್ನಿತರ ಮುಖಂಡರು ಇದ್ದರು.
——-