ನಂದಿನಿ ಮೈಸೂರು
*ಶಿಕ್ಷಕರ ವೃತ್ತಿ ಶ್ರೇಷ್ಠವಾದದ್ದು, ಶಿಕ್ಷಕರು ದೇಶದ ಆಸ್ತಿ: ಗುರುಪಾದ ಸ್ವಾಮ*
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದೇಶ ಮುನ್ನಡೆಯಲು ಶಿಕ್ಷಕರ ಪಾತ್ರ ಬಹುಮುಖ್ಯವಾದದು ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಗುರುಪಾದ ಸ್ವಾಮಿ ಹೇಳಿದರು.
ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ
ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಶಿಕ್ಷಕರಿಗೆ *ಗುರು ಸೇವಾ ರತ್ನ* ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು
ಶಿಕ್ಷಕರ ವೃತ್ತಿ ಮಹತ್ವವಾದದ್ದು, ಜಗತ್ತಿನಲ್ಲಿ ಯಾವುದಕ್ಕೆ ಬೇಕಾದರೂ ಬೆಲೆ ಕಟ್ಟಬಹುದು, ಆದರೆ ಶಿಕ್ಷಣ ಮತ್ತು ಶಿಕ್ಷಕರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶಿಕ್ಷಕರು ದೇಶದ ಆಸ್ತಿ ಇದ್ದಂತೆ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಹಾಗಾಗಿ ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಶ್ರೇಷ್ಠ ವೃತ್ತಿಯಾಗಿದೆ ಎಂದರು
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅರ್ಥ ಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾದ ಡಾ.ಆರ್.ಹೆಚ್ ಪವಿತ್ರ,
ಇಂದು ನಮಗೆ ವಿದ್ಯೆ ಹೇಳಿಕೊಟ್ಟ ಗುರುಗಳು ಶ್ರೇಷ್ಠ ಹಾಗೇಯೆ ನಮಗೆ ಜೀವನದಲ್ಲಿ ಮಾರ್ಗದರ್ಶನ ಮಾಡುವ ಗುರು ಗಳು ಕೂಡ ಶ್ರೇಷ್ಠ, ಕ್ರಿಡಾ,ಸಾಮಾಜಿಕ, ಶೈಕ್ಷಣಿಕ, ಮುಂತಾದ ವಿಧಗಳಲ್ಲಿ ಪ್ರತಿ ಯೊಬ್ಬರು ಕೂಡ ಗುರುಗಳನ್ನು ಅವಲಂಬಿತರಾಗಿರುವುದು ಸಹಜ ಹಿರಿಯರು ಹೇಳಿದಂಗೆ ಗುರು ದೇವೊಬವ ಎಂದರೆ ಅದರ ಶಕ್ತಿ ಯೆ ನಮಗೆ ಸ್ಪೂರ್ತಿ ಯಾಗಿರುತ್ತದೆ ಅದರಿಂದ ಇಂದಿನ ಪೀಳಿಗೆಯ ಮಕ್ಕಳು ಗುರುಸ್ಥಾನದಲ್ಲಿರುವ ಹಿರಿಯರಿ ಗೆ ಹೆಚ್ಚಿನ ಗೌರವಿಕೊಡುವ ಮುಖೇನಾ ಮತ್ತು ನಾನಾ ಸಂಘ ಸಂಸ್ಥೆಗಳು ಹಿರಿಯರುಗಳನ್ನು ಗೌರವಿಸುವ ಮುಖೇನಾ ಬೇರೆಯವರಿಗೆ ಮಾದರಿ ಯಾಗಲಿ ಎಂದರು..
ಇದೇ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಗುರುಪಾದ ಸ್ವಾಮಿ,
ಶಿವಮೊಗ್ಗ ನಗರದ ಮಾಜಿನಗರ ಪಾಲಿಕಾ ಸದಸ್ಯರಾದ ಗೌರಿ,
ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ, ಹೊಯ್ಸಳ ಟ್ರಸ್ಟ್ ಅಧ್ಯಕ್ಷರಾದ ಎಂ ಪಿ ರಾಜೇಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಸವಿತಾ ಘಾಟ್ಕೆ, ರಶ್ಮಿ, ಸದಾಶಿವ್, ಪಲ್ಲವಿ, ಸುರೇಶ್ ಹಾಗೂ ಇನ್ನಿತರರು ಭಾಗವಹಿಸಿದರು