ನಂದಿನಿ ಮೈಸೂರು
ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯುವುದಾಗಿ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಎಂ. ಪ್ರದೀಪ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ದಾರಿದೀಪ ಚಾರಿಟೇಬಲ್ ಟ್ರಸ್ಟ್ ನಲ್ಲಿ ಪ್ರದೀಪ್ ಕುಮಾರ್ ಬೆಂಬಲಿಗರ ಸಭೆ ಕರೆದು ಅವರ ಅಭಿಪ್ರಾಯ ಸಲಹೆ ಪಡೆದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರದೀಪ್ ಕುಮಾರ್ ನಾನು 2023 ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದೇ ಆದರೇ ನನಗೆ ಟಿಕೇಟ್ ಸಿಕ್ಕಿಲ್ಲ.ನಮ್ಮ ಪಕ್ಷದ ಹಿರಿಯರಾದ ಎಂ.ಕೆ.ಸೋಮಶೇಖರ್ ರವರಿಗೆ ಟಿಕೇಟ್ ಸಿಕ್ಕಿದೆ.ನನಗೆ ಟಿಕೇಟ್ ಸಿಗದೇ ಇರುವುದು ಬೇಸರ ತಂದಿದೆ.ಎಂ.ಕೆ.ಸೋಮಶೇಖರ್ ರವರು ಸಿದ್ದರಾಮಯ್ಯರವರ ಮನೆ ಬಳಿ ಸಿಕ್ಕಾಗ ಇದು ನನ್ನ ಕೊನೆ ಚುನಾವಣೆ ನೀವು ಯುವಕರಿದ್ದೀರಿ ಮುಂದಿನ ಬಾರಿ ನಿಮಗೆ ಅವಕಾಶ ಸಿಗಲಿದೆ. ನೀನು ಮತ್ತೆ ನಿಮ್ಮ ಬೆಂಬಲಿಗರು ನನಗೆ ಸಪೋರ್ಟ್ ಮಾಡುವಂತೆ ಹೇಳು ಎಂದು ಮನವಿ ಮಾಡಿದ್ದಾರೆ.ನಾನು ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ, ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸುವುದಿಲ್ಲ ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರೆಯಲಿದ್ದೇನೆ ಕೆ.ಆರ್.ಕ್ಷೇತ್ರದಲ್ಲಿ ಎಸ್.ಎ.ರಾಮದಾಸ್ ಅವರನ್ನ ಸೋಲಿಸುವುದು ನಮ್ಮ ಉದ್ದೇಶ ಮತ್ತೆ ಗುರಿಯಾಗಿತ್ತು. ಈಗ ಬಿಜೆಪಿ ಪಕ್ಷವೇ ಅವರಿಗೆ ಟಿಕೇಟ್ ನೀಡಿಲ್ಲ.ಈಗ ನಾವೇ ಗೆದ್ದಂತಾಗಿದೆ ಎಂದರು.